Bengaluru: 30 ಲಕ್ಷದ ಫ್ಲಾಟ್ ಬಿಟ್ಟು ಕಾರು ಖರೀದಿಸಿದ ಯುವಕನಿಗೆ ಬಿಗ್ ಶಾಕ್: ಈಗ ಆ ಫ್ಲಾಟ್ ಬೆಲೆ ಬರೋಬ್ಬರಿ 90 ಲಕ್ಷ ರೂ

ಬೆಂಗಳೂರು: ದಿನದಿಂದ ದಿನಕ್ಕೆ ರಿಯಲ್ ಎಸ್ಟೇಟ್ ಮಾರುಕಟ್ಟೆ ಬೆಳೆಯುತ್ತಲೇ ಹೋಗುತ್ತಿದೆ. ಎಷ್ಟರಮಟ್ಟಿಗೆ ಎಂದರೆ, ಕೆಲವೇ ವರ್ಷಗಳಲ್ಲಿ ಆಸ್ತಿಗಳ ಮೌಲ್ಯ ಎರಡು ಮೂರು ಪಟ್ಟು ಹೆಚ್ಚಾಗುತ್ತಿದೆ. ಒಂದು ಐದತ್ತು ವರ್ಷಗಳ ಹಿಂದೆ ಜಾಗದ ಮೇಲೆ ಹೂಡಿಕೆ ಮಾಡಲು ಹೋಗಿ ನಂತರ ಮಾಡದೇ ಇದ್ದವರು ಈಗ ಪಶ್ಚಾತ್ತಾಪ ಪಡುವಂತಾಗಿದೆ.

ಇದೇ ರೀತಿಯ ಘಟನೆಯೊಂದು ಬೆಂಗಳೂರಿನಲ್ಲಿ ನಡೆದಿದ್ದು, ಯುವಕನೊಬ್ಬ 2020ರಲ್ಲಿ 30 ಲಕ್ಷ ರೂಪಾಯಿಗೆ 1BHK ಫ್ಲಾಟ್ ಖರೀದಿಸುವ ಬದಲು ಕಾರು ಖರೀದಿಸಿ, ಇದೀಗ ತಲೆಮೇಲೆ ಕೈಹೊತ್ತು ಕೂರುವಂತಾಗಿದೆ. ಏಕೆಂದರೆ ಅದೇ ಫ್ಲಾಟ್‌ನ ಬೆಲೆ ಈಗ ಬರೋಬ್ಬರಿ 90 ಲಕ್ಷ ರೂಪಾಯಿಗೆ ಏರಿಕೆಯಾಗಿದೆ. ಈ ಕುರಿತು ಆತ ರೆಡ್ಡಿಟ್‌ನಲ್ಲಿ ಬರೆದುಕೊಂಡಿದ್ದು, ಪೋಸ್ಟ್ ಸಖತ್ ವೈರಲ್ ಆಗುತ್ತಿದೆ.

Bengaluru

ಚೂಡಸಂದ್ರದಲ್ಲಿ 30 ಲಕ್ಷಕ್ಕೆ ಸಿಗುತ್ತಿತ್ತು 1BHK ಫ್ಲಾಟ್

2018ರಲ್ಲಿ ಈ ಯುವಕ ಕೆಲಸ ಮಾಡುತ್ತಿದ್ದ ಸ್ಥಳ ಎಚ್‌ಎಸ್‌ಆರ್ ಲೇಔಟ್‌ಗೆ ಹತ್ತಿರದಲ್ಲಿದೆ ಹಾಗೂ ಬಾಡಿಗೆ ಕಡಿಮೆಯಿದೆ ಎಂಬ ಕಾರಣಕ್ಕೆ ಚೂಡಸಂದ್ರಕ್ಕೆ ವಾಸ್ತವ್ಯ ಬದಲಿಸಿದ್ದ. ಆ ಸಮಯದಲ್ಲಿ ಆತನ ಸ್ನೇಹಿತರು ಚೂಡಸಂದ್ರ ಎಂಬ ಹೆಸರನ್ನ ಕೇಳಿ ತುಂಬ ತಮಾಷೆ ಮಾಡುತ್ತಿದ್ದರು. "ಆಗಿನ ಕಾಲದಲ್ಲಿ ನಾನೇನೋ ಕಾಡಿನ ಮಧ್ಯದಲ್ಲಿ ವಾಸಿಸುತ್ತಿದ್ದೇನೆ ಎಂಬ ಫೀಲಿಂಗ್ ಇತ್ತು.

2018 ರಿಂದ 2020ರವರೆಗೆ ನಾನು ಅಲ್ಲಿಯೇ ಬಾಡಿಗೆಗಿದ್ದೆ. ಆ ಸಮಯದಲ್ಲಿ ಫ್ಲಾಟ್‌ನ ಮಾಲೀಕರು ಬೆಂಗಳೂರು ಬಿಟ್ಟು ಹೋಗುತ್ತಿದ್ದ ಕಾರಣ ಕೇವಲ 30 ಲಕ್ಷ ರೂ.ಗೆ ಆ 1BHK ಫ್ಲಾಟ್ ಅನ್ನ ಮಾರಾಟಕ್ಕಿಟ್ಟಿದ್ದರು," ಎಂದು ಯುವಕ ಹೇಳಿಕೊಂಡಿದ್ದಾನೆ. ಆಗ ಆತನಿಗೆ 26 ವರ್ಷ ವಯಸ್ಸಾಗಿದ್ದು, ಅದನ್ನು ಖರೀದಿಸುವ ಯೋಚನೆ ಮಾಡಿದ್ದ. ಆದರೆ, ಕೊನೆ ಘಳಿಗೆಯಲ್ಲಿ ಫ್ಲಾಟ್ ಬದಲು ಕಾರು ಖರೀದಿಸುವ ನಿರ್ಧಾರ ಮಾಡಿದ್ದ.

ಮಿನಿ ವೈಟ್‌ಫೀಲ್ಡ್ ಆಗಿ ಬದಲಾದ ಚೂಡಸಂದ್ರ

ಆರು ವರ್ಷಗಳ ನಂತರ, ಇತ್ತೀಚೆಗೆ ತನ್ನ ಸ್ನೇಹಿತನ ಗೃಹಪ್ರವೇಶ ಕಾರ್ಯಕ್ರಮಕ್ಕಾಗಿ ಅದೇ ಏರಿಯಾಗೆ ಭೇಟಿ ನೀಡಿದ್ದ ಯುವಕನಿಗೆ ಅಚ್ಚರಿ ಕಾದಿತ್ತು. ಆ ಇಡೀ ಪ್ರದೇಶ ಸಂಪೂರ್ಣವಾಗಿ ಬದಲಾಗಿತ್ತು. "ಚೂಡಸಂದ್ರ ಈಗ ಮಿನಿ ವೈಟ್‌ಫೀಲ್ಡ್ ತರಹ ಬದಲಾಗಿದೆ. ಎಲ್ಲಿ ನೋಡಿದರೂ ದೊಡ್ಡ ದೊಡ್ಡ ಕಟ್ಟಡಗಳು ತಲೆಎತ್ತಿವೆ. ಹಿಂದೆ ನಿರ್ವಹಣೆಯಿಲ್ಲದಂತಿದ್ದ ಕೆರೆಯ ಸುತ್ತ ಈಗ ವಾಕಿಂಗ್ ಟ್ರ್ಯಾಕ್ ಸಹ ಮಾಡಲಾಗಿದೆ. ಆದರೆ, ರಸ್ತೆಗಳು ಮಾತ್ರ ಇನ್ನೂ ಮೊದಲಿನಂತೆಯೇ ಇವೆ," ಎಂದು ಆತ ರೆಡ್ಡಿಟ್‌ ಪೋಸ್ಟ್‌ನಲ್ಲಿ ಹೇಳಿದ್ದಾನೆ.

Bengaluru

ರಿಯಲ್ ಎಸ್ಟೇಟ್ ಹೂಡಿಕೆ vs ಕಾರು ಖರೀದಿ

ಸ್ನೇಹಿತನ ಜೊತೆ ಮಾತನಾಡುವಾಗ ಆತ ಅದೇ 1BHK ಫ್ಲಾಟ್‌ಗಳು ಪ್ರಸ್ತುತ ಸುಮಾರು 90 ಲಕ್ಷ ರೂ.ಗಳಿಗೆ ಮಾರಾಟವಾಗುತ್ತಿವೆ ಎಂಬ ವಿಚಾರ ತಿಳಿಸಿದ್ದ. ಇದನ್ನಾ ಕೇಳಿದ ಯುವಕನಿಗೆ ಶಾಕ್ ಆಗಿದೆ. ಅಂದರೆ, ಕೇವಲ 6 ವರ್ಷಗಳಲ್ಲಿ ಆಸ್ತಿಯ ಮೌಲ್ಯ 30 ಲಕ್ಷದಿಂದ 90 ಲಕ್ಷಕ್ಕೆ ಏರಿಕೆಯಾಗಿದೆ.

ಇಲ್ಲಿನ ಮನೆ ಮಾಲೀಕರು ಕೂಡ ಆಸ್ತಿ ಮಾರಾಟ ಮಾಡಲು ಸಿದ್ಧರಿಲ್ಲ, ಏಕೆಂದರೆ ಅವರಿಗೆ ಅತ್ಯುತ್ತಮ ಬಾಡಿಗೆ ಆದಾಯ ಬರುತ್ತಿದೆ. ಬೆಂಗಳೂರಿನ ಪ್ರಾಪರ್ಟಿ ಮೌಲ್ಯ ಹೇಗೆ ಗಗನಕ್ಕೇರುತ್ತಿದೆ ಎಂಬುದಕ್ಕೆ ಇದೇ ಸಾಕ್ಷಿ ನೋಡಿ.

ಫ್ಲಾಟ್ ಬಿಟ್ಟು ಹೊಸ ಕಾರು ಖರೀದಿಸಿದ್ದ ಆ ಯುವಕನ ಕಾರಿನ ಬೆಲೆ ಈಗ ಕೇವಲ 5 ಲಕ್ಷ ರೂಪಾಯಿಗೆ ಇಳಿದಿದೆ ಎಂದು ಆತ ಬೇಸರ ವ್ಯಕ್ತಪಡಿಸಿದ್ದಾನೆ. ಆತನ ಪೋಸ್ಟ್‌ಗೆ ನೆಟ್ಟಿಗರು ನಾನಾ ರೀತಿಯ ಪ್ರತಿಕ್ರಿಯೆಗಳನ್ನು ನೀಡುತ್ತಿದ್ದು, "ಬೆಂಗಳೂರಿನ ರಿಯಲ್ ಎಸ್ಟೇಟ್ ಊಹೆಗೆ ನಿಲುಕಲ್ಲ," "ಆರು ವರ್ಷ ಎಲ್ಲವನ್ನೂ ಬದಲಾಯಿಸಿದೆ," ಹಾಗೂ "ರಿಯಲ್ ಎಸ್ಟೇಟ್‌ನಲ್ಲಿ ಸ್ಥಳ ಬಹಳ ಮುಖ್ಯ ಪಾತ್ರ ವಹಿಸುತ್ತದೆ" ಎಂದು ಹಲವರು ಕಮೆಂಟ್ ಮಾಡಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+