ಬೆಂಗಳೂರಿಗರೇ ಎಚ್ಚರ; ಸೂರ್ಯನ ಪ್ರತಾಪಕ್ಕೆ ಕೂಲ್ ಸಿಟಿ ಕಂಗಾಲು: ಮುಂದಿನ ಎರಡು ದಿನ ತಾಪಮಾನ ಮತ್ತಷ್ಟು ಏರಿಕೆ
ಸಿಲಿಕಾನ್ ಸಿಟಿಯಲ್ಲಿ ಏಪ್ರಿಲ್ ತಿಂಗಳು ಆರಂಭವಾಗುವ ಮೊದಲೇ ಸೂರ್ಯ ದೇವ ಪ್ರತಾಪ ತೋರಿಸಲು ಶುರು ಮಾಡಿದ್ದಾನೆ. ತಂಪಾದ ಹವಾಮಾನಕ್ಕೆ ಹೆಸರಾಗಿದ್ದ ಬೆಂಗಳೂರಿನಲ್ಲಿ ಈಗ ತಾಪಮಾನ ಏರುತ್ತಿರುವುದು ಕಂಡು ಜನ ಕಂಗೆಟ್ಟಿದ್ದಾರೆ. ಆದರೆ, ಈ ಬಿಸಿಲ ಬೇಗೆಯನ್ನೂ ಬೆಂಗಳೂರಿಗರು ತಮ್ಮದೇ ಆದ ಹಾಸ್ಯ ಪ್ರಜ್ಞೆಯ ಮೂಲಕ ಸೋಷಿಯಲ್ ಮೀಡಿಯಾದಲ್ಲಿ ಸಂಭ್ರಮಿಸುತ್ತಿದ್ದಾರೆ. ಬೆಂಗಳೂರಿನ ಬಿಸಿಲಿನ ಬಗ್ಗೆ ನೆಟ್ಟಿಗರೊಬ್ಬರು ಹಂಚಿಕೊಂಡಿರುವ ಪೋಸ್ಟ್ ಈಗ ಭಾರಿ ವೈರಲ್ ಆಗಿದೆ.
ಮಧ್ಯಾಹ್ನವಾದರೆ ಬಿಸಿ ಗಾಳಿ
ಬೆಂಗಳೂರಿನ ಬಿಸಿಲು ಎಷ್ಟರ ಮಟ್ಟಿಗೆ ತಲುಪಿದೆ ಎಂದರೆ, ಫ್ರಿಡ್ಜ್ ಒಳಗೆ ಇಟ್ಟಿರುವ ದೋಸೆ ಹಿಟ್ಟು ಕೂಡ ಅಲ್ಲಿಯೇ ಉಬ್ಬಿ ಬರುತ್ತಿದೆ ಎಂದು ಬರೆದುಕೊಂಡಿದ್ದಾರೆ. ಬಿಸಿಲಿನ ತೀವ್ರತೆಯನ್ನು ವಿವರಿಸಲು ಅವರು ಬಳಸಿದ ಈ ಉದಾಹರಣೆ ಅನೇಕರಿಗೆ ನಗು ತರಿಸಿದೆ. ಮತ್ತೊಬ್ಬ ಬಳಕೆದಾರರು ಮಧ್ಯಾಹ್ನದ ಹವಾಮಾನ ವರದಿಯನ್ನು ಹಂಚಿಕೊಳ್ಳುತ್ತಾ, ಬೆಂಗಳೂರಿನಲ್ಲಿ ಇಂದು ತಾಪಮಾನ 35 ಡಿಗ್ರಿ ಸೆಲ್ಸಿಯಸ್ ದಾಟುತ್ತಾ? ನೋಡೋಣ, ನಗರದಲ್ಲಿ ಬಿಸಿಲು ಜೋರಾಗಿದೆ, ಆಕಾಶದಲ್ಲಿ ಒಂದು ತುಣುಕು ಮೋಡವೂ ಕಾಣಿಸುತ್ತಿಲ್ಲ ಎಂದು ಬೇಸರ ವ್ಯಕ್ತಪಡಿಸಿದ್ದಾರೆ. ಫ್ಯಾನ್ ಹಾಕಿಕೊಂಡರೆ ಬಿಸಿ ಗಾಳಿ ಬರ್ತಿದೆ, ಇದು ಫ್ಯಾನ್ ಅಲ್ಲ ಹೇರ್ ಡ್ರೈಯರ್ ಇದ್ದ ಹಾಗೆ ಇದೆ ಎಂದು ಕೆಲವರು ಕಾಮೆಂಟ್ ಮಾಡಿದ್ದಾರೆ.

ಇನ್ನು ಕೆಲವರು ಹವಾಮಾನ ಹೆಚ್ಚಿರುವ ಇತರೆ ನಗರಗಳ ಜೊತೆ ಬೆಂಗಳೂರನ್ನು ಹೋಲಿಸಿ, ಬೆಂಗಳೂರಿಗೆ ಇಂತಹ ಪರಿಸ್ಥಿತಿ ಬಂದಿದ್ದಕ್ಕೆ ಅಚ್ಚರಿ ವ್ಯಕ್ತಪಡಿಸಿದ್ದಾರೆ. ಸಾಫ್ಟ್ವೇರ್ ಹಬ್ ಬೆಂಗಳೂರಿನ ಜನ ಈಗ ಸಾಫ್ಟ್ ವೆದರ್ ಬಿಟ್ಟು ಹೈ ಟೆಂಪರೇಚರ್ಗೆ ಹೊಂದಿಕೊಳ್ಳಲು ಕಷ್ಟಪಡುತ್ತಿದ್ದಾರೆ. ಈ ಬಿಸಿಲಿನ ನಡುವೆಯೂ ಸೋಷಿಯಲ್ ಮೀಡಿಯಾದಲ್ಲಿ ನಗುವಿನ ಅಲೆ ಎದ್ದಿರುವುದು ವಿಶೇಷ. ಸಾಮಾನ್ಯವಾಗಿ ತಂಪು ಗಾಳಿಗೆ ಹೆಸರಾದ ಬೆಂಗಳೂರಿನಲ್ಲಿ ಇಂತಹ ಕಡು ಬಿಸಿಲು ಕಂಡುಬರುತ್ತಿರುವುದು ಹೊರಗಿನಿಂದ ಬಂದು ನೆಲೆಸಿದವರಿಗೆ ಹಾಗೂ ಸ್ಥಳೀಯರಿಗೆ ದೊಡ್ಡ ಅಚ್ಚರಿ ಮೂಡಿಸಿದೆ.
ಈ ಬಿಸಿಲಿನ ನಡುವೆಯೂ ಬೆಂಗಳೂರಿನ ಹವಾಮಾನದ ಮೇಲೆ ನಂಬಿಕೆ ಇಟ್ಟಿರುವ ಕೆಲವರು ಸಕಾರಾತ್ಮಕವಾಗಿ ಪ್ರತಿಕ್ರಿಯಿಸಿದ್ದಾರೆ. ಒಬ್ಬ ನೆಟ್ಟಿಗರು ಬೆಂಗಳೂರಿನ ಹವಾಮಾನದ ವೈಶಿಷ್ಟ್ಯವನ್ನು ಹೀಗೆ ಬಣ್ಣಿಸಿದ್ದಾರೆ. "ಬೆಂಗಳೂರಿನ ಅಸಲಿ ಸೌಂದರ್ಯವಿರುವುದೇ ಬೇಸಿಗೆಯಲ್ಲಿ, ಇಲ್ಲಿ ಮಧ್ಯಾಹ್ನ ಬಿಸಿಲು ಬೆಂಕಿಯಂತೆ ಸುಡುತ್ತಿರುತ್ತದೆ... ಆದರೆ ಇದ್ದಕ್ಕಿದ್ದಂತೆ 'ಬೂಮ್' ಅಂತ ಭಾರಿ ಮಳೆ ಸುರಿದು ಇಡೀ ನಗರವನ್ನು ಕ್ಷಣಾರ್ಧದಲ್ಲಿ ತಂಪುಗೊಳಿಸಿಬಿಡುತ್ತದೆ." ಈ ಬಿಸಿಲು ಬೆಂಗಳೂರಿಗರ ತಾಳ್ಮೆಯನ್ನು ಪರೀಕ್ಷಿಸುತ್ತಿದ್ದರೂ, ಯಾವಾಗ ಬೇಕಾದರೂ ಸುರಿಯಬಹುದಾದ ಸಂಜೆ ಮಳೆಯ ನಿರೀಕ್ಷೆಯಲ್ಲಿ ನಗರದ ಜನ ಕಾಯುತ್ತಿದ್ದಾರೆ.
Bengaluru summer has reached ‘Dosa batter is continuing to ferment in the fridge’ level pic.twitter.com/4LsZqItGVZ
— Dr Nandita Iyer (@saffrontrail) March 27, 2026
ಇನ್ನೆರಡು ದಿನ ಬಿಸಿಲು ಹೆಚ್ಚು
ಸಿಲಿಕಾನ್ ಸಿಟಿಯಲ್ಲಿ ಬಿಸಿಲಿನ ಪ್ರತಾಪ ದಿನದಿಂದ ದಿನಕ್ಕೆ ಏರುತ್ತಲೇ ಇದ್ದು, ಮಾರ್ಚ್ 30ರವರೆಗಿನ ವರದಿಯ ಪ್ರಕಾರ, ನಗರದಲ್ಲಿ ತಾಪಮಾನವು ಮತ್ತಷ್ಟು ಏರಿಕೆಯಾಗುವ ಸಾಧ್ಯತೆಯಿದೆ. ನಗರ ಮತ್ತು ಸುತ್ತಮುತ್ತಲಿನ ಪ್ರದೇಶಗಳಲ್ಲಿ ಭಾಗಶಃ ಮೋಡ ಕವಿದ ವಾತಾವರಣವಿರಲಿದೆ. ಗರಿಷ್ಠ ತಾಪಮಾನವು 34 ಡಿಗ್ರಿ ಹಾಗೂ ಕನಿಷ್ಠ ತಾಪಮಾನವು 22 ಡಿಗ್ರಿ ಸೆಲ್ಸಿಯಸ್ ಆಸುಪಾಸಿನಲ್ಲಿರಲಿದೆ ಎಂದು ಅಂದಾಜಿಸಲಾಗಿದೆ. ಮಾರ್ಚ್ 29 ಮತ್ತು 30ರ ಅವಧಿಯಲ್ಲಿ ಬಿಸಿಲಿನ ಬೇಗೆ ಇನ್ನಷ್ಟು ಹೆಚ್ಚಾಗಲಿದೆ. ಭಾಗಶಃ ಮೋಡ ಕವಿದ ವಾತಾವರಣವಿದ್ದರೂ, ಉಷ್ಣಾಂಶದಲ್ಲಿ ಏರಿಕೆಯಾಗುವುದರಿಂದ ಬೆಂಗಳೂರಿಗರು ಬಿಸಿಲಿನ ಧಗೆಯನ್ನು ಅನುಭವಿಸಬೇಕಾಗುತ್ತದೆ.
-
Krunal Pandya: ವಿರಾಟ್ ಕೊಹ್ಲಿ - 2026ರ ಆರ್ಸಿಬಿ ತಂಡದ ಬಗ್ಗೆ ಸ್ಟಾರ್ ಆಟಗಾರ ಕೃನಾಲ್ ಪಾಂಡ್ಯರಿಂದ ಮಹತ್ವ ವಿಷಯ ರಿವೀಲ್ -
Viral Video: ವಿದೇಶಿ ಛಾಯಾಗ್ರಾಹಕರ ಫೋಟೋಗ್ರಫಿ ಹುಚ್ಚುತನಕ್ಕೆ ಜೀವ ಕಳೆದುಕೊಂಡಿತೇ ಭಾರತದ ಮುದ್ದಾದ ಆನೆ, ಏನಿದು ಚರ್ಚೆ -
ಬೆಂಗಳೂರು-ವಿಜಯಪುರ ಎಕ್ಸ್ಪ್ರೆಸ್ ರೈಲು ಸೇವೆ: ಸಂಚಾರ ಸಮಯ 10ಗಂಟೆ ಇಳಿಕೆಗೆ ಎಂಬಿ ಪಾಟೀಲ ಆಗ್ರಹ -
April 2 Horoscope: ಆರೋಗ್ಯ ಮತ್ತು ಆರ್ಥಿಕ ಸ್ಥಿತಿಯ ಸಂಪೂರ್ಣ ಮಾಹಿತಿ -
April 1 Horoscope: ಈ ರಾಶಿಯವರಿಗೆ ಹೊಸ ಕೆಲಸಗಳು ಸುಗಮ, ವೃತ್ತಿಯಲ್ಲಿ ಮೆಚ್ಚುಗೆ; ದಿನ ಭವಿಷ್ಯ -
Cricket: ವಿಶ್ವದಾಖಲೆ ಬರೆದ ಕಿವೀಸ್ ವನಿತೆಯರು: ಭಾರತದ ದಾಖಲೆ ಅಳಿಸಿ ಹಾಕಿದ ನ್ಯೂಜಿಲೆಂಡ್ ಅಬ್ಬರ -
Karnataka Weather: ರಾಜ್ಯದಲ್ಲಿಂದು ಭಾರಿ ಮಳೆ ಮುನ್ಸೂಚನೆ; ಬೆಂಗಳೂರು ಹವಾಮಾನ ಹೇಗಿದೆ? -
ಲಕ್ಷ ಲಕ್ಷ ಸಂಬಳದ ಗೂಗಲ್ ಕೆಲಸಕ್ಕೆ ರಾಜೀನಾಮೆ ನೀಡಿದ ಬೆಂಗಳೂರು ಟೆಕ್ಕಿ; ಕಾರಣ ಇಲ್ಲಿದೆ ನೋಡಿ -
Gold Rate: ಮಾರುಕಟ್ಟೆಯಲ್ಲಿ ಇಂದಿನ ನಿಖರ ಚಿನ್ನ, ಬೆಳ್ಳಿ ಬೆಲೆ ಎಷ್ಟು? ಇಲ್ಲಿದೆ ದರ ಪಟ್ಟಿ -
Good News: ಏಪ್ರಿಲ್ 2ನೇ ವಾರದಿಂದ ಹುಬ್ಬಳ್ಳಿ-ಹೈದರಾಬಾದ್ ಮತ್ತು ಬೆಂಗಳೂರಿಗೆ ವಿಮಾನ ಸೇವೆ: ಪ್ರಹ್ಲಾದ್ ಜೋಶಿ -
SSLC ಸಮಾಜ ವಿಜ್ಞಾನ ಪರೀಕ್ಷೆ ವಿಶ್ಲೇಷಣೆ: ಪ್ರಶ್ನೆಪತ್ರಿಕೆ ಹೇಗಿತ್ತು? ವಿದ್ಯಾರ್ಥಿಗಳ ಪ್ರತಿಕ್ರಿಯೆ ಏನು? -
Karnataka weather : ರಾಜ್ಯದಲ್ಲಿಂದು ಹವಾಮಾನ ಹೇಗಿರಲಿದೆ? ಬೆಂಗಳೂರು ಸೇರಿ ಈ ಜಿಲ್ಲೆಗಳಲ್ಲಿ ಗುಡುಗು ಸಹಿತ ಮಳೆ ಎಚ್ಚರಿಕೆ












Click it and Unblock the Notifications