ಖಾತಾ ಸೇವೆಗಳ ಸುಧಾರಣೆ ಹಾಗೂ ಸರಳಿಕರಣ ನಿಟ್ಟಿನಲ್ಲಿ “ಇ-ಆಸ್ತಿ ತಂತ್ರಾಂಶ”
ಬೆಂಗಳೂರು, ಜೂನ್ 10: ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಯ (ಬಿಬಿಎಂಪಿ) ಕಂದಾಯ ಇಲಾಖೆಯು ನೀಡಲಾಗುತ್ತಿರುವ ಸೇವೆಗಳನ್ನು ಸರಳೀಕರಣಗೊಳಿಸಿ ತ್ವರಿತಗತಿಯಲ್ಲಿ ವಿಲೇವಾರಿ ಮಾಡುವ ಉದ್ದೇಶದಿಂದ "ಇ-ಆಸ್ತಿ ತಂತ್ರಾಂಶ" ಜಾರಿಗೊಳಿಸಲಾಗಿದ್ದು ಮತ್ತಷ್ಟು ತ್ವರಿತವಾಗಿ ಕೆಲಸವನ್ನು ಮಾಡಲು ಮುಂದಾಗಿದೆ.
ಬೆಂಗಳೂರು ನಗರದ ಪೂರ್ವ ವಲಯ ವ್ಯಾಪ್ತಿಯಲ್ಲಿ ಪ್ರಾಯೋಗಿಕವಾಗಿ 3 ವಾರ್ಡ್‌ಗಳಲ್ಲಿ ಜಾರಿಗೊಳಿಸಿದ್ದ ಇ-ಆಸ್ತಿ ತಂತ್ರಾಂಶ ಯಶಸ್ವಿಯಾಗಿತ್ತು. ಪೂರ್ವ ವಲಯದಲ್ಲಿ ಬರುವ ವಾರ್ಡ್‌ಗಳಲ್ಲಿ ಅನುಷ್ಟಾನಗೊಳಿಸಲಾಗಿದೆ. ಆಸ್ತಿ ಮಾಲೀಕರು ಹತ್ತಿರದ ಆಯಾ ವಾರ್ಡ್ ವ್ಯಾಪ್ತಿಯಲ್ಲಿ ಬರುವ ಸಹಾಯ ಕಂದಾಯ ಅಧಿಕಾರಿ ಕಛೇರಿಗೆ ಭೇಟಿ ನೀಡಿ ಅಗತ್ಯ ದಾಖಲೆಗಳನ್ನು ನೀಡಿ ಇ-ಆಸ್ತಿ ತಂತ್ರಾಂಶದ ಮೂಲಕ ಇ-ಆಸ್ತಿ ದಾಖಲೆಯನ್ನು ಪಡೆಯಬಹುಹುದು.
ಬೆಂಗಳೂರು ಒನ್‌ನಲ್ಲಿ ಶೀಘ್ರವೇ ಅರ್ಜಿ
""ಬೆಂಗಳೂರಿನ ಆಸ್ತಿಯನ್ನು ನೊಂದಣಿ ಮಾಡಿಸಲು ಶೀಘ್ರದಲ್ಲಿಯೇ ಸಾರ್ವಜನಿಕರು ಖುದ್ದಾಗಿ ಆನ್ ಲೈನ್ ಮೂಲಕ ಸಿಟಿಜನ್ ಮಾಡ್ಯುಲ್ ಅಥವಾ ಗುರುತಿಸಲಾದ ಹತ್ತಿರದ ಬೆಂಗಳೂರು ಒನ್ ಕೇಂದ್ರಗಳಲ್ಲಿ ಅರ್ಜಿ ಹಾಕಲು ಅವಕಾಶ ಕಲ್ಪಿಸಲಾಗುತ್ತದೆ. ಅದಾಗಿ ಇ-ಆಸ್ತಿ ತಂತ್ರಾಂಶ ವ್ಯವಸ್ಥೆಯನ್ನು ದಕ್ಷಿಣ ಮತ್ತು ಪಶ್ಚಿಮ ವಲಯಗಳಲ್ಲಿಯೂ ಅನುಷ್ಟಾನಗೊಳಿಸಲಾಗುವುದು,'' ಎಂದು ಮುಖ್ಯ ಆಯುಕ್ತ ತುಷಾರ್ ಗಿರಿನಾಥ್ ಮಾಹಿತಿಯನ್ನು ನೀಡಿದ್ದಾರೆ.

ಏಕರೂಪ ಪದ್ಧತಿಯನ್ನು ಜಾರಿಗೆ ಕ್ರಮ
ಕಂದಾಯ ಇಲಾಖೆಯು ನಾಗರೀಕರಿಗೆ/ತೆರಿಗೆದಾರರಿಗೆ ಖಾತೆ ನೊಂದಾವಣೆ, ವಿಭಜನೆ, ಒಂದುಗೂಡಿಸುವಿಕೆ, ವರ್ಗಾವಣೆ ಸೇರಿದಂತೆ ಇನ್ನಿತ್ಯಾದಿ ಹಲವಾರು ಸೇವೆಗಳನ್ನು ನೀಡುತ್ತಿದೆ. ಈ ಸಂಬಂಧ ಪಾಲಿಕೆಯ ಅಧಿಕಾರಿಗಳು/ನೌಕರರುಗಳು ನಿರ್ವಹಿಸುತ್ತಿರುವ ಕೆಲಸ ಕಾರ್ಯಗಳಲ್ಲಿ ಸರಳೀಕರಣ/ ಸುಧಾರಣೆಗಳನ್ನೊಳಗೊಂಡಂತೆ, ಎಲ್ಲಾ ವಲಯಗಳಲ್ಲಿಯೂ ಏಕರೂಪ ಪದ್ಧತಿಯನ್ನು ಜಾರಿಗೆ ತರುವ ಉದ್ದೇಶದಿಂದ ಪಾಲಿಕೆಯ ಕಂದಾಯ ಇಲಾಖೆಯಲ್ಲಿ ಕಾರ್ಯನಿರ್ವಹಿಸುವ ಕಂದಾಯ ಅಧಿಕಾರಿಗಳು, ಸಹ ಕಂದಾಯ ಅಧಿಕಾರಿಗಳು, ಮೌಲ್ಯ ಮಾಪಕರು, ಕಂದಾಯ ಪರಿವೀಕ್ಷಕರು, ಕಂದಾಯ ವಸೂಲಿಗಾರರು ಮಾಡಬೇಕಿದೆ ಎಂದು ಮುಖ್ಯ ಆಯುಕ್ತರಾದ ತುಷಾರ್ ಗಿರಿನಾಥ್ ಉದ್ದೇಶವನ್ನು ಹೊಂದಿದ್ದಾರೆ.

ಆಸ್ತಿ ತೆರಿಗೆ ವಸೂಲಾತಿಗೆ ಮೊದಲ ಆದ್ಯತೆ
ಆಸ್ತಿ ತೆರಿಗೆ ವಸೂಲಾತಿಗೆ ಮೊದಲ ಆದ್ಯತೆ, ಹೊಸ ಹೊಸ ಆಸ್ತಿಗಳ ಪತ್ತೆ ಹಚ್ಚಿ ಆಸ್ತಿತೆರಿಗೆ ವ್ಯಾಪ್ತಿಗೆ ತರುವುದು, ತೆರಿಗೆ ಪ್ರಕ್ರಿಯೆ ಮತ್ತು ಕಾರ್ಯವಿಧಾನಗಳು, ವಿನಾಯಿತಿ, ತಂತ್ರಗಾರಿಕೆ, ಇ-ಆಸ್ತಿ ಸೇರಿದಂತೆ ಇನ್ನಿತರೆ ವಿಷಯಗಳ ಬಗ್ಗೆ ಕಂದಾಯ ಅಧಿಕಾರಿಗಳು, ಸಹ ಕಂದಾಯ ಅಧಿಕಾರಿಗಳು, ಮೌಲ್ಯ ಮಾಪಕರು, ಕಂದಾಯ ಪರಿವೀಕ್ಷಕರು, ಕಂದಾಯ ವಸೂಲಿಗಾರು ಹೇಗೆ ಕರ್ತವ್ಯವನ್ನು ನಿರ್ವಹಿಸಬೇಕು ಎಂದು ಸೂಚನೆಯನ್ನು ನೀಡಿದ್ದಾರೆ.

ಆಸ್ತಿ ಪರಾಮರ್ಶಿಸಲು ಇಚ್ಛಾಶಕ್ತಿ ಆತ್ಮವಿಮರ್ಶೆಯಿದ್ದರೇ ಸಾಕು
ರಸ್ತೆಯ ಇಕ್ಕೆಲಗಳಲ್ಲಿ ಆಸ್ತಿದಾರರು ಅಂಗಡಿ ಮುಗ್ಗಟ್ಟುಗಳನ್ನು ನಡೆಸುತ್ತಿರುತ್ತಾರೆ. ಬಹುಮಹಡಿ ಕಟ್ಟಡಗಳನ್ನು ಕಟ್ಟಿರುತ್ತಾರೆ. ಆಸ್ತಿ ಮೌಲ್ಯಮಾಪನ ಮಾಡುವಾಗ ಆತ್ಮಸಾಕ್ಷಿ ಇಚ್ಛಾಶಕ್ತಿಗೆ ಅನುಗುಣವಾಗಿ ಕೆಲಸ ಮಾಡಬೇಕು. ಕಳೆದ ಸಾಲಿಗಿಂತ ಈ ಸಾಲಿನಲ್ಲಿ ಹೆಚ್ಚು ಆಸ್ತಿ ತೆರಿಗೆ ಪಾವತಿಯಾಗಿದೆ ಎಂದು ತುಷಾರ್ ಗಿರಿನಾಥ್ ಕಂದಾಯ ಅಧಿಕಾರಿಗಳಿಗೆ ತಿಳಿಸಿದ್ದಾರೆ. ಆ ಮೂಲಕ ಬೆಂಗಳೂರಿನಲ್ಲಿ ಖಡಕ್ ಆಗಿ ಆಸ್ತಿತೆರಿಗೆ ವಸೂಲನ್ನು ಮಾಡವು ಬಗ್ಗೆ ಸೂಚನೆಯನ್ನು ನೀಡಿದ್ದಾರೆ.












Click it and Unblock the Notifications