ಬೇಸಿಗೆಯ ಸಂಜೀವಿನಿ ಈ ನಿಂಬೆ ಹಣ್ಣು: ಆರೋಗ್ಯದ ದೃಷ್ಟಿಯಿಂದ ಪ್ರಯೋಜನಗಳು ಅಪಾರ
ಸಿಟ್ರಿಸ್ ಜಾತಿಗೆ ಸೇರಿದ ನಿಂಬೆ ಹಣ್ಣು ಕೇವಲ ಅಡುಗೆ ಮನೆಯ ವಸ್ತುವಲ್ಲ ಅದೊಂದು ಅದ್ಬುತವಾದ ಔಷಧಿಯ ಗಣಿ. ಅದರಲ್ಲೂ ಉರಿಬಿಸಿಲಿನ ಬೇಸಿಗೆಯಲ್ಲಿ ದೇಹವನ್ನು ತಂಪಾಗಿಸಲು ನಿಂಬೆಗಿಂತ ಮಿಗಿಲಾದ ಸ್ನೇಹಿತ ಮತ್ಯಾರು ಇಲ್ಲ. ಅಷ್ಟಿಲ್ಲದೆ ಹಿರಿಯರು ಈ ಮಾತು ಹೇಳಿದಾರಾ "ಬೀಜವಿಲ್ಲದೇ ಇದ್ದರೆ ನಿಂಬೆ ಹಣ್ಣು ಸಂಜೀವಿನಿಯೇ ಆಗುತ್ತಿತ್ತು" ಈ ಮಾತು ಸುಳ್ಳಲ್ಲ.
ವೈದ್ಯರು ಕೂಡ ರೋಗಿಗಳಿಗೆ ನಿಂಬೆ ಪಾನಕ ಸೇವಿಸಲು ಶಿಫಾರಸು ಮಾಡುತ್ತಾರೆ. ವಿಟಾಮಿನ್ ಸಿ ಅಂಶ ಸಮೃದ್ಧವಾಗಿರುತ್ತದೆ ಈ ಹಣ್ಣಿನ ವಿಶೇಷತೆಗಳು ಮತ್ತು ಆರೋಗ್ಯದ ಮೇಲಾಗುವ ಧನಾತ್ಮಕ ಪರಿಣಾಮಗಳ ಕುರಿತಾದ ಸಮಗ್ರ ಮಾಹಿತಿ ಇಲ್ಲಿದೆ.

ಜೀರ್ಣಶಕ್ತಿಯ ಸಂವರ್ಧಕ
ನಾವು ಸೇವಿಸುವ ಆಹಾರವು ಸರಿಯಾಗಿ ಜೀರ್ಣವಾದರೆ ರೋಗಗಳು ಅರ್ಧದಷ್ಟು ದೂರವಾದಂತೆ. ನಿಂಬೆ ಹಣ್ಣು ಹೊಟ್ಟೆಯಲ್ಲಿ ಜೀರ್ಣರಸಗಳ ಉತ್ಫತ್ತಿಯನ್ನು ಹೆಚ್ಚಿಸಿ ನಾವು ಸೇವಿಸುವ ಆಹಾರದಲ್ಲಿರುವ ಪೌಷ್ಟಿಕ ಅಂಶಗಳನ್ನು ದೇಹ ಹೀರಿಕೊಳ್ಳುವಂತೆ ಮಾಡುತ್ತದೆ. ಅಜೀರ್ಣ ಮತ್ತು ಮಲಬದ್ದತೆಯಿಂದ ಬಳಲುವವರು ಪ್ರತಿದಿನ ಬೆಳಿಗ್ಗೆ ಖಾಲಿ ಹೊಟ್ಟೆಯಲ್ಲಿ ಉಗುರುಬೆಚ್ಚಗಿನ ನೀರಿನೊಂದಿಗೆ ನಿಂಬೆ ರಸ ಸೇವಿಸುವುದು ರಾಮಬಾಣವಿದ್ದಂತೆ.
ನಿರ್ಜಲೀಕರಣಕ್ಕೆ ಕಡಿಮೆ ಮಾಡುತ್ತದೆ
ಬೇಸಿಗೆಯಲ್ಲಿ ಅತಿಯಾದ ಬೆವರು ಮತ್ತು ಮೂತ್ರ ವಿಸರ್ಜನೆಯಿಂದ ದೇಹದಲ್ಲಿ ನೀರಿನಾಂಶ ಕಡಿಮೆಯಾಗಿರುತ್ತದೆ. ಇದು ಸುಸ್ತು ಮತ್ತು ನಿರ್ಜಲೀಕರಣಕ್ಕೆ ಕಾರಣವಾಗುತ್ತದೆ. ಇಂತಹ ಸಮಯದಲ್ಲಿ ಕೃತಕ ತಂಪು ಪಾನೀಯಗಳ ಮೊರೆ ಹೋಗುವ ಬದಲು ಮನೆಯಾಲ್ಲಿಯೇ ತಯಾರಿಸಿದ ನಿಂಬೆ ಹಣ್ಣಿನ ಪಾನಕ ಕುಡಿಯುವುದರಿಂದ ದೇಹಕ್ಕೆ ಅಗತ್ಯವಾದ ಖನಿಜಾಂಶಗಳನ್ನು ಮತ್ತು ವಿಟ್ ಮಿನ್ ಲಭ್ಯವಾಗಿ ದೇಹ ಹೈಡ್ರೇಟ್ ಆಗಿರುತ್ತದೆ.
ತೂಕ ಇಳಿಕೆ ಮತ್ತು ಬೊಜ್ಜು ನಿಯಂತ್ರಣ
ಇಂದಿನ ಬದಲಾದ ಜೀವನಶೈಲಿಯಲ್ಲಿ ಬೊಜ್ಜು ಮತ್ತು ಅಧಿಕ ತೂಕ ದೊಡ್ಡ ಸಮಸ್ಯಯಾಗಿದೆ. ನಿಂಬೆಯಲ್ಲಿರುವ ಆ್ಯಂಟಿ ಆಕ್ಸಿಡೆಂಟ್ಸ್ ಮತ್ತು ವಿಟ್ಮಿನ್ ಸಿ ದೇಹದಲಿನ ಅನಗತ್ಯ ಕೊಬ್ಬನು ಕರಗಿಸಲು ಸಹಾಯ ಮಾಡುತ್ತದೆ. ಇದು ರಕ್ತದ ಒತ್ತಡ ನಿಯಂತ್ರಿಸುವುದರ ಜೋತೆಗೆ ದೇಹಕ್ಕೆ ಚೈತನ್ಯವನ್ನು ನೀಡುತ್ತದೆ.
ಚರ್ಮದ ಸೌಂದರ್ಯ ಮತ್ತು ರೋಗನಿರೋದಕ ಶಕ್ತಿ
ತ್ವಚೆಯಲ್ಲಿ ಕಾಂತಿ: ನಮ್ಮ ರಕ್ತದಲ್ಲಿರುವ ವಿಷಕಾರಿ ಅಂಶಗಳನ್ನು ಹೂರಹಾಕುವ ಮೂಲಕ ಚರ್ಮದ ಕಪ್ಪು ಕಲೆಗಳನ್ನು ನಿವಾರಿಸಿ ಮುಖದಲ್ಲಿ ನೈಸರ್ಗಿಕವಾಗಿ ಕಾಂತಿಯನ್ನು ತರುತ್ತದೆ.
ಲೀವರ ಆರೋಗ್ಯ: ಲೀವರ್ ನಲ್ಲಿರುವ ಕಲುಷಿತ ಅಂಶಗಳನ್ನು ಹೊರಹಾಕಲು ನಿಂಬೆ ರಸ ಸಹಕಾರಿಯಾಗಿದೆ.
ದುರ್ವಾಸನೆಗೆ ಮುಕ್ತಿ: ಬಾಯಿಯ ದುರ್ವಾಸನೆಯನ್ನು ತಡೆಗಟ್ಟಲು ಮತ್ತು ಹಲ್ಲಿನ ಆರೋಗ್ಯವನ್ನು ಕಾಪಾಡಲು ಇದು ಸಹಕಾರಿಯಾಗಿದೆ.
ನಿಂಬೆ ಹಣ್ಣಿನ ಪಾನಕ ತಯಾರಿಸುವ ವಿಧಾನ
ಒಂದು ಲೋಟ ನೀರಿಗೆ ಸ್ವಲ್ಪ ಬೆಲ್ಲ ಅಥವಾ ಸಕ್ಕರೆ, ಚಿಟಿಕೆ ಉಪ್ಪು, ಸ್ವಲ್ಪ ಏಲಕ್ಕಿ ಪುಡಿ ಮತ್ತು ನಿಂಬೆ ರಸ ಸೇರಿಸಿ ಬೆರಿಸಿದರೆ ರುಚಕರವಾದ ಪಾನಕ ಸಿದ್ದ. ರುಚಿಗೆ ತಕ್ಕಂತೆ ಸ್ವಲ್ಪ ಶುಂಠಿಯನ್ನು ಅಥವಾ ತಿನ್ನುವ ಸೋಡಾ ಸೇರಿಸಬಹುದಾಗಿದೆ.
ನಿಂಬೆ ಹಣ್ಣಿನ ಪಾನಕ ಮಾಡುವ ವಿಧಾನ ಬೇಕಾಗಬಹುದಾದ ಪದಾರ್ಥಗಳು
ನಿಂಬೆ ಹಣ್ಣು: 1-2.
ನೀರು: 2 ಲೋಟ.
ಬೆಲ್ಲ ಅಥವಾ ಸಕ್ಕರೆ: 3-4 ಚಮಚ ರುಚಿಗೆ ತಕ್ಕಂತೆ.
ಉಪ್ಪು: ಚಿಟಿಕೆಯಷ್ಟು ಉಪ್ಪು.
ಏಲಕ್ಕಿ ಪುಡಿ: ಸ್ವಲ್ಪ ಏಲಕ್ಕಿ ಪುಡಿ(ಉತ್ತಮ ಪರಿಮಳಾಕ್ಕಾಗಿ).
ಶುಂಠಿ ರಸ ಅಥವಾ ಕಳು ಮೇಣಸಿನ ಪುಡಿ: ಇದು ಐಚ್ಚಿಕ ಬೇಕಿದ್ದರೆ ಬಳಸಿ.
ಇದನ್ನು ತಯಾರಿಸುವ ವಿಧಾನ
ಒಂದು ಪಾತ್ರೆಯಲ್ಲಿ 2 ಲೋಟ ನೀರನ್ನು ತೆಗೆದುಕೊಳ್ಳಿ.
ಬೆಲ್ಲ ಅಥವಾ ಸಕ್ಕರೆಯನ್ನು ಹಾಕಿ ಅದನ್ನು ಚೆನ್ನಾಗಿ ಕರಗಿಸಬೇಕು.
ನಂತರ ನಿಂಬೆ ಹಣ್ಣನ್ನು ಕತ್ತರಿಸಿ ಅದರ ರಸವನ್ನು ಹಿಂಡಬಬೇಕು.
ಅದಕ್ಕೆ ಒಂದು ಚಿಟಿಕೆ ಉಪ್ಪು ಮತ್ತು ಏಲಕ್ಕಿಯ ಪುಡಿಯನ್ನು ಸೇರಿಸಿಸಬೇಕು.
ಬೇಸಿಗೆಕಾಲದಲ್ಲಿ ಇನ್ನು ತಂಪಾಗಿ ಕಡಿಯಲು ಬಯಸುವವರು ಐಸ್ ಕ್ಯೂಬ್ಸ್ ಳನ್ನು ಹಾಕಿಕೊಳ್ಳಬಹುದು.












Click it and Unblock the Notifications