• search
 • Live TV
ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ಬೆಂಗಳೂರು ಸೆಂಟ್ರಲ್ ವಿಶ್ವ ವಿದ್ಯಾಲಯ ಹೆಸರು ಬದಲಾವಣೆ

|

ಬೆಂಗಳೂರು, ಜೂನ್ 11: ಕರ್ನಾಟಕ ರಾಜ್ಯ ವಿಶ್ವ ವಿದ್ಯಾನಿಲಯಗಳ (ತಿದ್ದುಪಡಿ) ವಿಧೇಯಕ 2015ಕ್ಕೆ ಮತ್ತೆ ತಿದ್ದುಪಡಿಯಾಗಿದ್ದು, ಮಹತ್ವದ ಬದಲಾವಣೆಗಳನ್ನು ತರಲು ಸರ್ಕಾರ ಮುಂದಾಗಿದೆ.

   ಚಿರು ನಂತರ ಕೇರಳದಲ್ಲಿ ನಡೆಯಿತು ಮತ್ತೊಂದು ಮನಕಲಕುವ ಘಟನೆ | Nithin Chandran

   ಆಡಳಿತ ಹಾಗೂ ವಿದ್ಯಾರ್ಥಿಗಳ ಹಿತದೃಷ್ಟಿಯಿಂದ ಬೆಂಗಳೂರು ವಿವಿಯನ್ನು 3 ಭಾಗಗಳಾಗಿ ವಿಭಜನೆಯಾಗಿದ್ದು ಎಲ್ಲರಿಗೂ ತಿಳಿದಿರುವ ವಿಷಯ.

   ದೇಶದ ಪ್ರತಿಷ್ಠಿತ ವಿಶ್ವವಿದ್ಯಾಲಯಗಳಲ್ಲಿ ಒಂದೆನಿಸಿರುವ ಬೆಂಗಳೂರು ವಿಶ್ವವಿದ್ಯಾಲಯವನ್ನು ಒಡೆದು ಮೂರು ಭಾಗ ಮಾಡಿದ ಬಳಿಕ ಈಗ ಬೆಂಗಳೂರು ಸೆಂಟ್ರಲ್ ವಿವಿ ಹೆಸರು ಬದಲಾವಣೆ ಮಾಡಲು ಸರ್ಕಾರ ಮುಂದಾಗಿದೆ.

   ಬೆಂಗಳೂರು ಕೇಂದ್ರೀಯ ವಿಶ್ವವಿದ್ಯಾಲಯ ಕ್ಯಾಂಪಸ್‌ನಲ್ಲಿ ವಿದ್ಯುತ್ ಉತ್ಪಾದನೆಗೆ ಸಜ್ಜು!

   ಲಕ್ಷಾಂತರ ಮಂದಿ ವಿದ್ಯಾರ್ಥಿಗಳು ಪದವಿ ಪೂರ್ವ, ಪದವಿ, ಸ್ನಾತಕೋತ್ತರ ಪದವಿ ಹಾಗೂ ಸಂಶೋಧನಾ ವಿಭಾಗದಲ್ಲಿ ವ್ಯಾಸಂಗ ಮಾಡುವ ವಿಶ್ವವಿದ್ಯಾಲಯಗಳನ್ನು ವಿಭಜನೆ ಮಾಡಿದರೂ ಜ್ಞಾನಭಾರತಿ ಕ್ಯಾಂಪನಲ್ಲಿದ್ದ ಸಂಶೋಧನಾ ಕೇಂದ್ರ, ಸೆಂಟ್ರಲ್ ಕಾಲೇಜು ಹಾಗೂ ಕಾಲೇಜನ್ನು ಉಳಿಸಿಕೊಳ್ಳಲಾಗಿತ್ತು.

   250 ಕಾಲೇಜುಗಳಿಗೆ ಒಂದು ವಿ.ವಿಯನ್ನು ತೆರೆಯಲು ಶಿಫಾರಸು ಮಾಡಲಾಗಿತ್ತು. ಆರ್ ವಿ ದೇಶಪಾಂಡೆ ನೇತೃತ್ವ ಉಪ ಸಮಿತಿ, ಎನ್ ರುದ್ರಯ್ಯ ಸಮಿತಿ ಹಾಗೂ ಕೆ.ಆರ್ ವೇಣುಗೋಪಾಲ್ ಸಮಿತಿ ಶಿಫಾರಸುಗಳನ್ನು ಪರಿಗಣಿಸಿ ಈ ಹಿಂದಿನ ಸಿದ್ದರಾಮಯ್ಯ ಸರ್ಕಾರ ಹಾಗೂ ಇಂದಿನ ಬಿಜೆಪಿ ಸರ್ಕಾರ ಮುಂದಿನ ಕ್ರಮ ಜರುಗಿಸುತ್ತಿವೆ.

   ಬೆಂಗಳೂರು ಸೆಂಟ್ರಲ್ ವಿವಿ ಹೆಸರು

   ಬೆಂಗಳೂರು ಸೆಂಟ್ರಲ್ ವಿವಿ ಹೆಸರು

   ಬೆಂಗಳೂರು ಸಿಟಿ ವಿವಿ ಎಂದು ಹೊಸ ಹೆಸರು ನೀಡಲಾಗುತ್ತಿದೆ. ಇದರ ಜೊತೆಗೆ ಸರ್ಕಾರಿ ಸೈನ್ಸ್ ಕಾಲೇಜು ಪ್ರತ್ಯೇಕಗೊಳಿಸಲು ನಿರ್ಧರಿಸಲಾಗಿದ್ದು, ಹೊಸ ವಿವಿಗೆ ನೃಪತುಂಗ ಹೆಸರಿಡಲು ಸಚಿವ ಸಂಪುಟದ ಒಪ್ಪಿಗೆ ಸಿಕ್ಕಿದೆ, ಮಹಾರಾಣಿ ಕ್ಲಸ್ಟರ್ ವಿವಿ,ಮಂಡ್ಯ ಕ್ಲಸ್ಟರ್ ವಿವಿ ಮಾಡಿದ್ದೆವು. ಈಗ ಪೂರ್ಣಪ್ರಮಾಣ ವಿವಿ ರೂಪುಗೊಳ್ಳಲಿದೆ ಎಂದು ಕಾನೂನು ಸಚಿವ ಮಾಧುಸ್ವಾಮಿ ಸುದ್ದಿಗೋಷ್ಠಿಯಲ್ಲಿ ಹೇಳಿದರು.

   ಕೆಎಸ್ಒಯುಗೆ ಮಾತ್ರ ದೂರಶಿಕ್ಷಣ ಅವಕಾಶ

   ಕೆಎಸ್ಒಯುಗೆ ಮಾತ್ರ ದೂರಶಿಕ್ಷಣ ಅವಕಾಶ

   ರಾಜ್ಯ ವಿವಿ ತಿದ್ದುಪಡಿ ಕಾಯ್ದೆ ತಿದ್ದುಪಡಿಯಂತೆ ದೂರಶಿಕ್ಷಣ ಮಾನ್ಯತೆಯನ್ನು ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾಲಯ(ಕೆಎಸ್ಒಯು)ಕ್ಕೆ ಮಾತ್ರ ನೀಡಲು ನಿರ್ಧರಿಸಲಾಗಿದೆ. ಬೇರೆ ವಿವಿಗಳಿಗೆ ದೂರ ಶಿಕ್ಷಣ ಮಾನ್ಯತೆಯಿಲ್ಲ, ಬೇರೆ ಯಾವ ವಿವಿಗಳು ದೂರ ಶಿಕ್ಷಣ ನೀಡುವಂತಿಲ್ಲ ಎಂದು ವಿಧಾನಸೌಧದಲ್ಲಿಂದು ನಡೆದ ಸಂಪುಟ ಸಭೆಯ ಬಳಿಕ ಮಾಧುಸ್ವಾಮಿ ಹೇಳಿದರು.

   ದೂರಶಿಕ್ಷಣ ಅವಕಾಶ ದಂಧೆಯಾಗಿತ್ತು

   ದೂರಶಿಕ್ಷಣ ಅವಕಾಶ ದಂಧೆಯಾಗಿತ್ತು

   ದೂರ ಶಿಕ್ಷಣದ ಹೆಸರಿನಲ್ಲಿ ಬೇರೆ ಉದ್ಯೋಗದಲ್ಲಿ ತೊಡಗಿದ್ದು, ಕಂಡು ಬಂದಿದೆ, ಹೀಗಾಗಿ ಬೇರೆ ವಿವಿಗಳಿಗೆ ನೀಡಿದ್ದ ಮಾನ್ಯತೆಯನ್ನು ರದ್ದುಗೊಳಿಸಲಾಗಿದೆ. ಮುಂಬರುವ ಶೈಕ್ಷಣಿಕ ವರ್ಷದಿಂದ ಬೇರೆ ವಿವಿಗಳಲ್ಲಿ ದೂರಶಿಕ್ಷಣವಿಲ್ಲ, ಅದರೆ, ಈ ವರ್ಷದಲ್ಲಿ ವ್ಯಾಸಂಗ ಮಾಡುತ್ತಿರುವ ವಿದ್ಯಾರ್ಥಿಗಳಿಗೆ ತೊಂದರೆಯಿಲ್ಲ ಎಂದು ಮಾಧುಸ್ವಾಮಿ ಹೇಳಿದರು.

   ಸೆಂಟ್ರಲ್ ಕಾಲೇಜ್ ವಿವಿ

   ಸೆಂಟ್ರಲ್ ಕಾಲೇಜ್ ವಿವಿ

   ಬೆಂಗಳೂರು ಕೇಂದ್ರ ವಿವಿ: ಬೆಂಗಳೂರು ಕೇಂದ್ರಕ್ಕೆ ಸೆಂಟ್ರಲ್ ಕಾಲೇಜು ಆಡಳಿತ ಕಚೇರಿಯಾಗಲಿದೆ. ಶಾಂತಿನಗರ, ಬ್ಯಾಟರಾಯನಪುರ, ಯಲಹಂಕ, ರಾಜಾಜಿನಗರ, ಮಲ್ಲೇಶ್ವರ, ಹೆಬ್ಬಾಳ, ಶಿವಾಜಿನಗರ, ಗಾಂಧಿನಗರ, ಚಾಮರಾಜಪೇಟೆ, ಚಿಕ್ಕಪೇಟೆ,ಜಯನಗರ, ಬಸವನಗುಡಿ, ಬಿಟಿಎಂ ಲೇಔಟ್ ವಿಧಾನಸಭಾ ಕ್ಷೇತ್ರಗಳು ಇದರ ವ್ಯಾಪ್ತಿಗೆ ಸೇರಲಿವೆ.

   1886ರಲ್ಲಿ ಆರಂಭವಾಗಿದ್ದ ಸೆಂಟ್ರಲ್ ಕಾಲೇಜ್ ಅನ್ನು 1964ರಲ್ಲಿ ಬೆಂಗಳೂರು ವಿವಿಯಾಗಿ ಪರಿವರ್ತಿಸಲಾಗಿತ್ತು. 1973ರಲ್ಲಿ ಜ್ಞಾನಭಾರತಿ ಆವರಣದಲ್ಲಿ ವಿವಿ ಕ್ಯಾಂಪಸ್ ಆರಂಭವಾಗಿತ್ತು.

   ಬೆಂಗಳೂರು ವಿಶ್ವವಿದ್ಯಾಲಯದ ವಿಭಜಿಸುವ ಸಲುವಾಗಿ 2009ರಲ್ಲಿ ಸಮಿತಿ ರಚಿಸಲಾಗಿತ್ತು ಮತ್ತು 2015ರಲ್ಲಿ ವಿಭಜನೆಗೆ ವಿಧಾನಮಂಡಲ ಮತ್ತು ರಾಜ್ಯಪಾಲರಿಂದ ಅನುಮೋದನೆ ಸಿಕ್ಕಿತ್ತು. ಇದಾದ ಬಳಿಕ ಕಾಲಕಾಲಕ್ಕೆ ಅಗತ್ಯಕ್ಕೆ ತಕ್ಕಂತೆ ಕಾಯ್ದೆಗೆ ತಿದ್ದುಪಡಿ ಮಾಡಲಾಗಿದೆ.

   English summary
   Karnataka government decided to change Bangalore Central university name to Bangalore city University sadi Law Minister Madhuswamy.
   ತಾಜಾ ಸುದ್ದಿ ತಕ್ಷಣ ಪಡೆಯಿರಿ
   Enable
   x
   Notification Settings X
   Time Settings
   Done
   Clear Notification X
   Do you want to clear all the notifications from your inbox?
   Settings X