ಬುಲೆಟ್‌ ಗಾಡಿ ತಗೋಳೋಕೆ ಆಗ್ಲಿಲ್ಲ ಅಂತ ಹೀಗಾ ಮಾಡೋದು?

ಬುಲೆಟ್‌ ಗಾಡಿ ಅಂದ್ರೆ ಅದಕ್ಕೆ ಅಭಿಮಾನಿಗಳ ದೊಡ್ಡ ಸೈನ್ಯವೇ ಇದೆ. ಇದರ ಡುಕ್‌ ಡುಕ್‌ ಸೌಂಡ್‌ಗೆ ಮಾರುಹೋಗದವರೇ ಇಲ್ಲ. ಒಂದಲ್ಲಾ ಒಂದ್‌ ದಿನ್‌ ಬುಲೆಟ್‌ ಗಾಡಿ ತಗೊಂಡು ಬಂದು, ಮನೇಲಿ ನಿಲ್ಲಿಸಬೇಕು ಅನ್ನೋದು ಎಷ್ಟೋ ಯುವಕರ ದೊಡ್ಡ ಕನಸು. ಇದಕ್ಕಾಗಿ ಹಗಲಿರುಳು ದುಡಿಮೆ ಮಾಡಿ ಕನಸು ಈಡೇರಿಸಿಕೊಂಡವರೂ ಇದ್ದಾರೆ.

ಹುಡುಗರು ಮಾತ್ರವಲ್ಲ, ಕೆಲ ಹುಡುಗಿಯರಿಗೂ ರಾಯಲ್‌ ಎನ್‌ಫೀಲ್ಡ್‌ ಗಾಡೀಲಿ ಒಮ್ಮೆ ಕುಳಿತು ಜಾಲಿ ರೈಡ್‌ ಮಾಡ್ಬೇಕು ಅಂತಾನೇ ಅನ್ಕೊಂಡಿರ್ತಾರೆ. ಇದು ಎಲ್ಲ ವಯಸ್ಸಿನವರೂ ಮೆಚ್ಚುವ ಗಾಡಿ. ಹಾಗಾಗಿ ಈ ಬುಲೆಟ್‌ ರಸ್ತೆಗಿಳಿದರೆ, ಎಲ್ಲರೂ ಹುಬ್ಬೇರಿಸಿ ನೋಡ್ತಾರೆ.

A Youth Set Fire To A Bullet Bike In Bengaluru

ಇತ್ತೀಚೆಗೆ ಯುವಕರು ತಮ್ಮ ಈ ಕನಸಿನ ರಥ ಖರೀದಿಸಲು ನಾನಾ ಕಷ್ಟ ಪಡುತ್ತಾರೆ. ಆದರೆ ಬೆಂಗಳೂರಿನಲ್ಲಿ ಯುವಕನೊಬ್ಬ ಮಾಡಿರುವ ಕೆಲಸವು ಬುಲೆಟ್‌ ಪ್ರಿಯರಿಗೆ ಕೋಪ ತರಿಸುವುದು ಗ್ಯಾರಂಟಿ. ಈತನ ಕಥೆ ಕೇಳಿದ್ರೆ ನೀವೂ ಶಾಕ್‌ ಆಗ್ತೀರಿ. ಪುಲ್ಕಿತ್‌ ಅನ್ನೋ ಯುವಕನಿಗೆ ಎಲ್ಲರಂತೆಯೇ ಬುಲೆಟ್‌ ತಗೋಬೇಕು ಅನ್ನೋದು ಎಷ್ಟೋ ವರ್ಷಗಳ ಕನಸು. ಆದ್ರೆ ಕನಸು ನನಸಾಗ್ಲಿಲ್ಲ ಅಂತ ಮಾಡಬಾರದ ಕೆಲಸ ಮಾಡಿದ್ದಾನೆ.

ಬುಲೆಟ್‌ ಮೇಲಿದ್ದ ಹುಚ್ಚು ಹಾಗೂ ತನ್ನಿಂದ ಬುಲೆಟ್‌ ಗಾಡಿ ತಗೋಳೋಕೆ ಆಗ್ಲಿಲ್ಲ ಅನ್ನೋ ನೋವಲ್ಲಿದ್ದ ಪುಲ್ಕಿತ್‌, ಬೇರೆಯವರ ಬುಲೆಟ್‌ಗೆ ಬೆಂಕಿ ಹಚ್ಚುವಷ್ಟು ಕ್ರೂರಿ ಆಗಿಬಿಟ್ಟಿದ್ದಾನೆ. ಪೀಣ್ಯ ವ್ಯಾಪ್ತಿಯ ಪಿ.ಜಿಯೊಂದರ ಮುಂದೆ ನಿಲ್ಲಿ ಬುಲೆಟ್‌ಗೆ ಪೆಟ್ರೋಲ್‌ ಸುರಿದು ಬೆಂಕಿ ಹಚ್ಚಿದ್ದಾನೆ ಎಂದು ಪೊಲೀಸರು ಹೇಳಿದ್ದಾರೆ.

A Youth Set Fire To A Bullet Bike In Bengaluru

ಈತನ ಮನಸ್ಥಿತಿ ಹೇಗಿತ್ತು ಅಂದ್ರೆ, ತಾನೇ ಗಾಡಿಗೆ ಬೆಂಕಿ ಹಚ್ಚಿದ್ದಲ್ಲದೆ, ಬಳಿಕ ಆ ಬೆಂಕಿಯಿಂದಲೇ ಸಿಗರೇಟ್‌ ಹೊತ್ತಿಸಿಕೊಂಡು ಸ್ಟೈಲಾಗಿ ಧಮ್‌ ಹೊಡೆದಿದ್ದಾನೆ. ಬಳಿಕ ಆತ ಅಲ್ಲಿಂದ ಎಸ್ಕೇಪ್‌ ಆಗಿದ್ದು, ಬುಲೆಟ್‌ ಬೈಕ್‌ಗೆ ಹೊತ್ತಿಕೊಂಡಿದ್ದ ಬೆಂಕಿಯು ಅಕ್ಕಪಕ್ಕದ ಬೈಕ್‌ಗಳಿಗೂ ತಗುಲಿ ಸುಟ್ಟು ಹೋಗಿವೆ ಎಂದು ವರದಿಯಾಗಿದೆ.

ಬಳಿಕ ಬೈಕ್‌ ಮಾಲೀಕ ಬಂದು ಈ ವಿಚಾರವನ್ನು ಪೀಣ್ಯ ಪೊಲೀಸರಿಗೆ ತಿಳಿಸಿದ್ದ. ಕೂಡಲೇ ಪೊಲೀಸರು ಅಖಾಡಕ್ಕಿಳಿದು ಪುಲ್ಕಿತ್‌ನನ್ನು ಬಂಧಿಸಿದ್ದಾರೆ. ಬಳಿಕ ವಿಚಾರಣೆ ನಡೆಸಿದಾಗ ಬುಲೆಟ್‌ ಖರೀದಿಸಲು ಸಾಧ್ಯವಾಗದ ಕಾರಣ ಬೇರೆಯವರ ಬೈಕ್‌ಗೆ ಬೆಂಕಿ ಹಚ್ಚಿರುವುದು ಗೊತ್ತಾಗಿದೆ. ಬುಲೆಟ್‌ ಖರೀದಿಸಲು ಹಣ ಸಾಕಾಗುತ್ತಿರಲಿಲ್ಲ. ಬೇರೆಯವರು ಬುಲೆಟ್‌ ಮೇಲೆ ಬರುವುದು ಹಾಗೂ ಅದರ ಸೌಂಡ್‌ ಕೇಳಿಸಿಕೊಂಡು ಉರಿದು ಬೀಳುತ್ತಿದ್ದ. ಈ ಮನಸ್ಥಿತಿಯಿಂದಲೇ ಇಂತಹ ಕೃತ್ಯ ಹಚ್ಚಿದ್ದಾನೆ ಎಂದು ತಪ್ಪೊಪ್ಪಿಕೊಂಡಿದ್ದಾನಂತೆ.

ಇನ್ನು ಈ ವಿಚಾರವಾಗಿ ಪುಲ್ಕಿತ್‌ ನಡೆಗೆ ಬೈಕ್‌ ಪ್ರಿಯರು ಖಂಡನೆ ವ್ಯಕ್ತಪಡಿಸಿದ್ದಾರೆ. ಬೈಕ್‌ ಅಂದ್ರೆ ಎಲ್ಲರ ಕನಸು ಕೂಡ. ಅದನ್ನು ಒಳ್ಳೆಯ ಮಾರ್ಗದಲ್ಲಿ ಸಂಪಾದಿಸಿ, ತಂದು ಓಡಿಸಿದರೆ ಮಾತ್ರ ಮಜಾ. ಇಲ್ಲದಿದ್ದರೆ ಅಂತಹ ದಿನಕ್ಕೆ ಕಾಯಬೇಕು. ಅದನ್ನು ಬಿಟ್ಟು ಇಂತಹ ನೀಚ ಕೆಲಸ ಮಾಡಿದರೆ ಆತ ಬೈಕ್‌ ಪ್ರಿಯ ಎಂದು ಕರೆಸಿಕೊಳ್ಳಲು ಯೋಗ್ಯನಲ್ಲ ಎಂದು ಕಾಮೆಂಟ್‌ ಮಾಡಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+