Greater Bengaluru: ಬೆಂಗಳೂರಿಗೆ ಮೂರು ಪಾಲಿಕೆ ಫಿಕ್ಸ್‌... ನಾಳೆಯಿಂದ ಬಿಬಿಎಂಪಿ ಯುಗಾಂತ್ಯ!

Greater Bengaluru: ಬೆಂಗಳೂರಿನ ಪಾಲಿಕೆಗೆ ಸಂಬಂಧಿಸಿದಂತೆ ಮಹತ್ವದ ಬದಲಾವಣೆಗಳು ಆಗುತ್ತಿವೆ. ಬೃಹತ್‌ ಬೆಂಗಳೂರು ಮಹಾನಗರ ಪಾಲಿಕೆಯ ಯುಗಾಂತ್ಯವಾಗಿದೆ. ಬೆಂಗಳೂರಿನ ಮಹಾನಗರ ಪಾಲಿಕೆಗೆ ಸುದೀರ್ಘ ಇತಿಹಾಸವಿದೆ. ಬೆಂಗಳೂರಿಗೆ ಹೊಸ ಪ್ರದೇಶಗಳು ಸೇರ್ಪಡೆ ಆಗುವುದರೊಂದಿಗೆ ಬೆಂಗಳೂರಿನ ಮಹಾನಗರ ಪಾಲಿಕೆಯ ವಿಸ್ತೀರ್ಣ ಹಾಗೂ ಜವಾಬ್ದಾರಿಗಳು ಹೆಚ್ಚಾಗಿದ್ದವು. ಇನ್ನು ಇದೀಗ ಬೆಂಗಳೂರಿನ ಪಾಲಿಕೆಯುನ್ನು 3ರಿಂದ 5 ವಿಭಜನೆ ಮಾಡುವುದಕ್ಕೆ ರಾಜ್ಯ ಕಾಂಗ್ರೆಸ್‌ ಸರ್ಕಾರವು ಮುಂದಾಗಿದ್ದು. ಇದರ ಭಾಗವಾಗಿ ಗ್ರೇಟರ್ ಬೆಂಗಳೂರು ಆಡಳಿತ ಅಧಿನಿಯಮ, 2024 ಜಾರಿ ಮಾಡಿದೆ. ಗ್ರೇಟರ್ ಬೆಂಗಳೂರು ಆಡಳಿತ ಅಧಿನಿಯಮವು 15-05-2025ರಿಂದ ಅಧಿಕೃತವಾಗಿ ಜಾರಿಗೆ ಬರಲಿದೆ. ಈ ಮೂಲಕ ಆಡಳಿತಾತ್ಮಕವಾಗಿ ಬೃಹತ್‌ ಬೆಂಗಳೂರು ಮಹಾನಗರ ಪಾಲಿಕೆಯು ಯುಗಾಂತ್ಯವಾಗುತ್ತಿದೆ.

ಹೌದು ಬೆಂಗಳೂರಿನ ಜನಸಂಖ್ಯೆ ಹೆಚ್ಚಳವಾಗಿ ಒತ್ತಡದ ವಾತಾವರಣ ನಿರ್ಮಾಣವಾಗುತ್ತಿರುವುದು ಹಾಗೂ ಬೆಂಗಳೂರಿನ ಜನರಿಗೆ ವಿಕೇಂದ್ರೀಕರಣ ಮಾದರಿಯ ಆಡಳಿತ (ಸರಳ ಹಾಗೂ ಸುಲಭ ಸೇವೆ) ನೀಡುವ ಉದ್ದೇಶದಿಂದ ಗ್ರೇಟರ್ ಬೆಂಗಳೂರು ಆಡಳಿತ ಅಧಿನಿಯಮ, 2024 ಜಾರಿ ಮಾಡುತ್ತಿರುವುದಾಗಿ ರಾಜ್ಯ ಸರ್ಕಾರವು ಹೇಳಿದೆ. ಇದೀಗ ಗ್ರೇಟರ್ ಬೆಂಗಳೂರು ಆಡಳಿತ ಜಾರಿ ಮಾಡುವುದಕ್ಕೆ ರಾಜ್ಯ ಸರ್ಕಾರವು ಮಹತ್ವ ಆದೇಶವನ್ನು ಮಾಡಿದೆ.

3 municipalities fixed for Bengaluru BBMP era ends from tomorrow

ಬಿಬಿಎಂಪಿ ಯುಗಾಂತ್ಯ: ಬೆಂಗಳೂರಿಗೆ ಮೂರು ಪಾಲಿಕೆಗಳು

ಇನ್ಮುಂದೆ ಬೃಹತ್‌ ಬೆಂಗಳೂರು ಮಹಾನಗರ ಪಾಲಿಕೆಯ ಯುಗಾಂತ್ಯವಾಗಲಿದ್ದು. ಗ್ರೇಟರ್ ಬೆಂಗಳೂರು ಆಡಳಿತ ಜಾರಿಯಾಗಲಿದೆ. ಈ ಮೂಲಕ ಬೆಂಗಳೂರಿನಲ್ಲಿ ಮೂರು ಅಥವಾ ಐದು ಪಾಲಿಕೆಗಳು ಬರಲಿವೆ ಎಂದು ಹೇಳಲಾಗಿದೆ. ಪ್ರಾರಂಭಿಕವಾಗಿ ಮೊದಲ ಹಂತದಲ್ಲಿ ಮೂರು ಪಾಲಿಕೆಗಳನ್ನು ಮಾಡುವ ಲೆಕ್ಕಾಚಾರದಲ್ಲಿ ರಾಜ್ಯ ಸರ್ಕಾರ ಇದೆ ಎಂದು ಹೇಳಲಾಗಿದೆ. ಇದೆಲ್ಲವೂ ನಾಳೆಯಿಂದ ಅಧಿಕೃತವಾಗಿ ಪ್ರಾರಂಭವಾಗಲಿದೆ. ಈಗಾಗಲೇ ಬಿಬಿಎಂಪಿಯ ವಿಭಜನೆಗೆ ಬೇಕಾದ ಎಲ್ಲಾ ಮಾದರಿಯ ಸಿದ್ಧತೆಗಳನ್ನೂ ರಾಜ್ಯ ಸರ್ಕಾರವು ಮಾಡಿಕೊಳ್ಳುತ್ತಿದೆ. ಇನ್ಮುಂದೆ ಬಿಬಿಎಂಪಿಯೊಂದಿಗಿರುವ ಭಾವನಾತ್ಮಕ ಸಂಬಂಧ ಬೆಂಗಳೂರಿನ ಜನರಿಗೆ ಮರಿಚಿಕೆಯಾಗಲಿದೆ. ಮುಂದಿನ ದಿನಗಳಲ್ಲಿ ಹೊಸ ಪಾಲಿಕೆಗಳು ಬರಲಿವೆ.

ಸರ್ಕಾರದ ಅಧೀನ ಕಾರ್ಯದರ್ಶಿ ನಗರಾಭಿವೃದ್ಧಿ ಇಲಾಖೆಯ ನಂದಕುಮಾರ್.ಬಿ ಅವರು ಅಧಿಸೂಚನೆ ಹೊರಡಿಸಿದ್ದಾರೆ. ಇದರಲ್ಲಿ ಗ್ರೇಟರ್ ಬೆಂಗಳೂರು ಆಡಳಿತ ಅಧಿನಿಯಮ, 2024 (2025ರ ಕರ್ನಾಟಕ ಅಧಿನಿಯಮ ಸಂಖ್ಯೆ 36) ರ 1ನೇ ಪ್ರಕರಣದ (3)ನೇ ಉಪ-ಪುಕರಣದಲ್ಲಿ ಪ್ರದತ್ತವಾದ ಅಧಿಕಾರವನ್ನು ಚಲಾಯಿಸಿ, ಕರ್ನಾಟಕ ಸರ್ಕಾರವು ಈ ಮೂಲಕ ಸದರಿ ಅಧಿನಿಯಮವು / ಅಧಿನಿಯಮದ ಎಲ್ಲಾ ಪ್ರಕರಣಗಳು ಹಾಗೂ ಉಪಬಂಧಗಳು "ದಿನಾಂಕ:15-05-2025" ರಿಂದ ಜಾರಿಗೆ ಬರತಕ್ಕದಂದು ಗೊತ್ತುಪಡಿಸಿದೆ ಎಂದು ಆದೇಶಿಸಿದ್ದಾರೆ.

3 municipalities fixed for Bengaluru BBMP era ends from tomorrow

ಇನ್ನು ಈ ಸಂಬಂಧ ಬೃಹತ್‌ ಬೆಂಗಳೂರು ಮಹಾನಗರ ಪಾಲಿಕೆ ಸಹ ಮಹತ್ವದ ಮಾಹಿತಿಯನ್ನು ಹಂಚಿಕೊಂಡಿದೆ. ದಿನಾಂಕ: 15-05-2025 ರಿಂದ ಗ್ರೇಟರ್ ಬೆಂಗಳೂರು ಆಡಳಿತ ಕಾಯ್ದೆ, 2024 ಜಾರಿಗೊಳ್ಳಲು ನೇಮಕಾತಿ ದಿನಾಂಕವೆಂದು ಅಧಿಸೂಚಿಸಿ ಅದೇ ಕಾಯ್ದೆಯ ಕಲಂ 1(3) ರಲ್ಲಿನ ಅವಕಾಶಗಳ ಅನ್ವಯ ದಿನಾಂಕ: 14-05-2025 ರಂದು ರಾಜ್ಯ ಸರ್ಕಾರವು ಅಧಿಸೂಚನೆಯನ್ನು ಹೊರಡಿಸಿರುತ್ತದೆ. ಗ್ರೇಟರ್ ಬೆಂಗಳೂರು ಆಡಳಿತ ಕಾಯ್ದೆ, 2024 ರ ಕಲಂ 1(2) ರಲ್ಲಿನ ಅವಕಾಶವನ್ನು ಕಲಂ 3 ರೊಂದಿಗೆ ಓದಿಕೊಂಡಂತೆ ಪ್ರಸ್ತುತ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ಪ್ರದೇಶವನ್ನು ಗ್ರೇಟರ್ ಬೆಂಗಳೂರು ಪ್ರದೇಶವೆಂದು ಅಧಿಸೂಚಿಸಿ ದಿನಾಂಕ: 15-05-2025 ರಂದು ಅಧಿಸೂಚನೆಯೊಂದನ್ನು ಹೊರಡಿಸಲಾಗುವುದು. ಮುಂದುವರಿದು, ಗ್ರೇಟರ್ ಬೆಂಗಳೂರು ಆಡಳಿತ ಕಾಯ್ದೆ, 2024 ರ ಅವಕಾಶಗಳನ್ವಯ ಪ್ರಕ್ರಿಯೆಯು ಪೂರ್ಣಗೊಳ್ಳುವವರೆಗೆ, ಅದೇ ಕಾಯ್ದೆಯ ಕಲಂ-7(5) ಮತ್ತು ಕಲಂ-360 ರಲ್ಲಿ ಪ್ರದತ್ತವಾದ ಅಧಿಕಾರದನ್ವಯ ಬಿ.ಬಿ.ಎಂ.ಪಿ ಅಧಿನಿಯಮ, 2020 ರ ಅಡಿ ಪ್ರದತ್ತವಾಗಿರುವ ಅಧಿಕಾರ ಮತ್ತು ಕರ್ತವ್ಯಗಳನ್ನು ಸಂಬಂಧಿತ ಅಧಿಕಾರಿಗಳು ಚಲಾಯಿಸುತ್ತಾರೆ ಎಂದು ಹೇಳಲಾಗಿದೆ.

Take a Poll

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+