ಐಟಿ ದಾಳಿ, ಬಿಜೆಪಿ ಆಫರ್ ಬಗ್ಗೆ ಈಗ ಬಾಯ್ಬಿಡಲ್ಲ: ಡಿಕೆಶಿ

Posted By:
Subscribe to Oneindia Kannada

ಬೆಂಗಳೂರು, ಆಗಸ್ಟ್ 08: 'ಆದಾಯ ತೆರಿಗೆ ಬಗ್ಗೆ ನಾನು ಹೆಚ್ಚೇನು ಮಾತನಾಡುವುದಿಲ್ಲ. ಇಡೀ ಪ್ರಕ್ರಿಯೆ ಪ್ರಸವ ವೇದನೆ ರೀತಿ ಇತ್ತು' ಎಂದು ಇಂಧನ ಸಚಿವ ಡಿಕೆ ಶಿವಕುಮಾರ್ ಹೇಳಿದ್ದಾರೆ. ಐಟಿ ದಾಳಿ ದೆಸೆಯಿಂದ ನಮ್ಮವರಿಗೆ ನೋವುಂಟಾಗಿದೆ ಎಂದರು.

ಡಿಕೆ ಶಿವಕುಮಾರ್ ರನ್ನು ಬಿಜೆಪಿಗೆ ಸೆಳೆಯಲು ಯತ್ನಿಸಿಲ್ಲ: ಸುರೇಶ್ ಕುಮಾರ್

ಇಂಧನ ಸಚಿವ ಡಿಕೆಶಿಗೆ ಬಿಜೆಪಿ ಸೇರುವಂತೆ ಕೇಂದ್ರ ಸಚಿವರೊಬ್ಬರು ಆಹ್ವಾನ ನೀಡಿದ್ದರು ಎಂಬ ಸುದ್ದಿಯ ಬಗ್ಗೆ ಪ್ರತಿಕ್ರಿಯಿಸಿದ ಶಿವಕುಮಾರ್, ಈ ಬಗ್ಗೆ ಈಗ ಬಾಯ್ಬಿಡುವುದಿಲ್ಲ. ಸಮಯ ಬಂದಾಗ ಉತ್ತರಿಸುವೆ. ಬಾಯ್ಬಿಟ್ಟರೆ ಹಲವಾರು ಜನರಿಗೆ ತೊಂದರೆ ಎಂದಿದ್ದಾರೆ.

Minister DK Shivakumar keeps mum about Offer by BJP and IT raid

ಬಿಜೆಪಿ ಆಫರ್ ತಿರಸ್ಕರಿಸಿದ್ದಕ್ಕೆ ಆದಾಯ ತೆರಿಗೆ ಇಲಾಖೆ ದಾಳಿ ನಡೆಸಲಾಗಿದೆ' ಎಂದು ಕೆಲ ಮಾಧ್ಯಮಗಳಲ್ಲಿ ಬಂದಿರುವ ವರದಿಯನ್ನು ಶಾಸಕ ಸುರೇಶ್ ಕುಮಾರ್ ಅವರು ತಳ್ಳಿ ಹಾಕಿದ್ದರು.

DK Shivakumars First Reaction After IT Raid | Oneindia Kannada

'ಐಟಿ ದಾಳಿ ನಡೆಯುತ್ತದೆ. ದಾಳಿ ತಪ್ಪಿಸಿಕೊಳ್ಳಬೇಕಾದರೆ ಬಿಜೆಪಿ ಸೇರಿ ಅಂತಾ ಯಾರೂ ಹೇಳಿಲ್ಲ. ಅಷ್ಟೊಂದು ವಿವೇಚನೆ ಇಲ್ಲದಿರುವ ಕೇಂದ್ರ ಸಚಿವರು ನಮ್ಮಲ್ಲಿ ಯಾರು ಇಲ್ಲ. ಈ ಸಂಬಂಧ ಕಾಂಗ್ರೆಸ್ ಆರೋಪ ಮಾಡುತ್ತಿರುವುದು ಸುಳ್ಳು ಆರೋಪ' ಎಂದಿದ್ದನ್ನು ಇಲ್ಲಿ ಸ್ಮರಿಸಬಹುದು.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ - ನೋಂದಣಿ ಉಚಿತ!

English summary
Energy minister DK Shivakumar said he won't talk much about recent IT raid and offer by BJP. If I open my mouth it will make big impact he added.
Please Wait while comments are loading...