ಜ.17ರಂದು ಮಲೆನಾಡು ಮಿತ್ರವೃಂದದ ವಾರ್ಷಿಕ ಕ್ರೀಡಾಕೂಟ

By: ಹುಬ್ಬಳ್ಳಿ ಪ್ರತಿನಿಧಿ
Subscribe to Oneindia Kannada

ಬೆಂಗಳೂರು, ಜನವರಿ 16 : ಮಲೆನಾಡು ಮಿತ್ರವೃಂದ ವಾರ್ಷಿಕ ಕ್ರೀಡಾಕೂಟವನ್ನು ಭಾನುವಾರ ಬೆಂಗಳೂರಿನಲ್ಲಿ ಹಮ್ಮಿಕೊಂಡಿದೆ. ಜಾಲಹಳ್ಳಿ ಬಳಿಯ ಎಚ್‌ಎಂಟಿ ಆಟದ ಮೈದಾನದಲ್ಲಿ ಜ.17ರ ಭಾನುವಾರ ಈ ಕ್ರೀಡಾಕೂಟ ನಡೆಯಲಿದೆ.

ಎಚ್‌ಎಂಟಿ ಆಟದ ಮೈದಾನದಲ್ಲಿ ಭಾನುವಾರ ಬೆಳಗ್ಗೆ 10 ರಿಂದ ಸಂಜೆ 5 ಗಂಟೆವರೆಗೆ ವಿವಿಧ ಕ್ರೀಡಾಕೂಟಗಳು ನಡೆಯಲಿವೆ ಎಂದು ಮಲೆನಾಡು ಮಿತ್ರವೃಂದದ ಅಧ್ಯಕ್ಷ ಅನಿಲ್ ಹೊಸಕೊಪ್ಪ ಹೇಳಿದ್ದಾರೆ. 5ರಿಂದ 35 ವರ್ಷದ ತನಕ ವಿವಿಧ ವಯೋಮಾನದವರು ಕ್ರೀಡಾಕೂಟದಲ್ಲಿ ಕುಟುಂಬದವರೊಂದಿಗೆ ಪಾಲ್ಗೊಳ್ಳಬಹುದಾಗಿದೆ.

sport

ಈ ಕ್ರೀಡಾಕೂಟದಲ್ಲಿ ಮಲೆನಾಡು ಭಾಗದ ರಾಜಕಾರಣಿಗಳು ಹಾಗೂ ಬೆಂಗಳೂರಿನಲ್ಲಿ ನೆಲೆಸಿರುವ ಸಾವಿರಾರು ಮಲೆನಾಡಿಗರು ಪಾಲ್ಗೊಳ್ಳಲಿದ್ದಾರೆ. ಇದೇ ಸಂದರ್ಭದಲ್ಲಿ 'ಮಲೆನಾಡಿನ ಸ್ಮರಣಿಯರು' ಎಂಬ ತಲೆಬರಹದ2016ರ ಕ್ಯಾಲೆಂಡರ್‌ ಬಿಡುಗಡೆ ಮಾಡಲಾಗುತ್ತದೆ.

ಆಟಗಳು : 50 ಮೀಟರ್ ಮತ್ತು 100 ಮೀಟರ್ ಓಟ, ಲೆಮನ್ ಇನ್ ದ ಸ್ಪೂನ್, ಮ್ಯೂಜಿಕಲ್ ಛೇರ್, ಥ್ರೋ ಬಾಲ್, ಮಡಕೆ ಒಡೆಯುವುದು, ಪಾಸಿಂಗ್ ದ ಬಾಲ್, ವಾಲಿಬಾಲ್, ಸ್ಲೋ ಬೈಕ್ ರೇಸ್ ಮುಂತಾದ ಆಟಗಳನ್ನು ಏರ್ಪಡಿಸಲಾಗಿದೆ.

ಬಿಎಂಟಿಸಿ ಬಸ್ಸಿನ ಮಾರ್ಗ : ಎಚ್‌ಎಂಟಿ ಆಟದ ಮೈದಾನಕ್ಕೆ ಹೋಗಲು ಮೆಜೆಸ್ಟಿಕ್‌ನಿಂದ 273, ಶಿವಾಜಿನಗರದಿಂದ 270 ಹಾಗೂ ಮಾರ್ಕೆಟ್‌ನಿಂದ 275ನೇ ಬಸ್‌ನಲ್ಲಿ ಬಂದು ಎಚ್‌ಎಂಟಿ ಆಡಿಟೋರಿಯಂ ನಿಲ್ದಾಣದಲ್ಲಿ ಇಳಿಯಬೇಕು. ಹೆಚ್ಚಿನ ವಿವರಗಳಿಗೆ ಅನಿಲ್ ಹೊಸಕೊಪ್ಪ 9448241148, ವನಮಾಲಯ್ಯ ಡಿ.ಟಿ.ಇಳಿಮನೆ 9243407146 ಅವರನ್ನು ಸಂಪರ್ಕಿಸಬಹುದಾಗಿದೆ.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ - ನೋಂದಣಿ ಉಚಿತ!

English summary
Malnad Mitra Vrinda invite you and your family and friends on grand celebration of annual sports meets in Bengaluru On January 17, 2016, at HMT ground Jalahalli.
Please Wait while comments are loading...