ಆಕ್ರೋಶ್ ದಿವಸ್: ಬೆಂಗಳೂರು ವಿವಿ ಪರೀಕ್ಷೆ ಮುಂದೂಡಿಕೆ

Posted By:
Subscribe to Oneindia Kannada

ಬೆಂಗಳೂರು, ನವೆಂಬರ್ 27: ಭಾರಿ ಮೌಲ್ಯದ ನೋಟು ನಿಷೇಧದ ವಿರುದ್ಧ ಕಾಂಗ್ರೆಸ್ ಹಾಗೂ ಎಡಪಕ್ಷಗಳು ನಡೆಸಲು ಉದ್ದೇಶಿಸಿರುವ ಆಕ್ರೋಶ್ ದಿವಸ್ ಆಚರಣೆ ಹಿನ್ನಲೆಯಲ್ಲಿ ಬೆಂಗಳೂರು ವಿಶ್ವವಿದ್ಯಾಲಯದ ಪರೀಕ್ಷೆಗಳನ್ನು ಮುಂದೂಡಲಾಗಿದೆ.

ಬೆಂಗಳೂರು ವಿಶ್ವವಿದ್ಯಾಲಯ ಈ ಬಗ್ಗೆ ಪ್ರಕಟಣೆ ಹೊರಡಿಸಿ ನವೆಂಬರ್ 28ರಂದು ನಡೆಯಬೇಕಿದ್ದ ಪರೀಕ್ಷೆಯನ್ನು ಡಿಸೆಂಬರ್ 8ರಂದು ನಡೆಸಲಾಗುವುದು ಎಂದು ಹೇಳಿದೆ.[ಆಕ್ರೋಶ್ ದಿವಸ್: ಕರ್ನಾಟಕದಲ್ಲಿ ಬಸ್ ಮೆಟ್ರೋ ಸಂಚಾರ ಸ್ಥಗಿತ]

ಅಪನಗದೀಕರಣ (demonetisation) ವಿರುದ್ಧದ ಆಕ್ರೋಶ್ ದಿವಸಕ್ಕೆ ಕರ್ನಾಟಕ ಸರ್ಕಾರ ಕೂಡಾ ಬೆಂಬಲ ವ್ಯಕ್ತಪಡಿಸಿದೆ. ಹೀಗಾಗಿ ಬೆಂಗಳೂರು ವಿಶ್ವವಿದ್ಯಾಲಯ ತನ್ನ ಸೆಮಿಸ್ಟರ್ ಪರೀಕ್ಷೆಗಳನ್ನು ಅನಿವಾರ್ಯವಾಗಿ ಮುಂದೂಡಿದೆ.

Bharat bandh: Bangalore University postpones exams

ಸೋಮವಾರ(ನವೆಂಬರ್ 28)ರಂದು ಮೂರನೇ ಹಾಗೂ ಐದನೇ ಸೆಮಿಸ್ಟರ್ ಬಿಎ/ಬಿಕಾಂ/ಬಿಬಿಎಂ/ಬಿಎಚ್ಎಂ ಪರೀಕ್ಷೆ ನಿಗದಿಯಾಗಿತ್ತು. ಸೋಮವಾರದಂದು ಎಲ್ಲಾ ಸರ್ಕಾರಿ ಶಾಲೆ ಹಾಗೂ ಕಾಲೇಜುಗಳಿಗೆ ರಜೆ ಘೋಷಿಸುವಂತೆ ಸಿದ್ದರಾಮಯ್ಯ ಸರ್ಕಾರ ಸುತ್ತೋಲೆ ಹೊರೆಡಿಸಿರುವ ಬೆನ್ನಲ್ಲೇ ಬೆಂಗಳೂರು ವಿವಿ ಈ ನಿರ್ಧಾರ ಕೈಗೊಂಡಿದೆ.

ಅಗತ್ಯ ಸೇವೆಗಳನ್ನು ಹೊರತುಪಡಿಸಿ ಸರ್ಕಾರಿ ಸಾರಿಗೆ ವ್ಯವಸ್ಥೆ ವ್ಯತ್ಯಯವಾಗುವ ಸಾಧ್ಯತೆ ಕಂಡು ಬಂದಿದೆ. ತುಮಕೂರು ವಿವಿ ಈಗಾಗಲೇ ಪರೀಕ್ಷೆಗಳನ್ನು ಮುಂದೂಡಿರುವುದನ್ನು ಇಲ್ಲಿ ಸ್ಮರಿಸಬಹುದು. (ಒನ್ಇಂಡಿಯಾ ಸುದ್ದಿ)

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
The Bangalore University in a notification declared that the exams that were to be held on November 28 were rescheduled to December 8.
Please Wait while comments are loading...