ಡಿಕೆಶಿ ಅಹಂಕಾರ ಬಹಳ ದಿನ ಉಳಿಯುವುದಿಲ್ಲ: ಜಗದೀಶ್ ಶೆಟ್ಟರ್

ಬಳ್ಳಾರಿ, ಮಾರ್ಚ್ 25:ಸಚಿವ ಡಿಕೆಶಿಗೆ ಅಹಂಕಾರದ ಅಮಲು ನೆತ್ತಿಗೇರಿದ್ದು, ಅದು ಬಹಳ ದಿನ ಉಳಿಯುವುದಿಲ್ಲ. ಸಂಡೂರಿನ ಕಾಂಗ್ರೆಸ್ ಸಮಾವೇಶದಲ್ಲಿ ಸ್ವತಃ ತಮ್ಮ ಶಾಸಕರೇ ಗೈರಾಗಿದ್ದಾರೆ. ಬರುವ ದಿನಗಳಲ್ಲಿ ನಿಮ್ಮವರೇ ನಿಮಗೆ ಪಾಠ ಕಲಿಸುತ್ತಾರೆ ಎಂದು ಮಾಜಿ ಮುಖ್ಯಮಂತ್ರಿ ಜಗದೀಶ್ ಶೆಟ್ಟರ್ ಹೇಳಿದರು.

ಕರ್ನಾಟಕ ಲೋಕಸಭಾ ಕ್ಷೇತ್ರಗಳ 'ಎ ಟು ಜೆಡ್' ಮಾಹಿತಿ

ಪಟ್ಟಣದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಡಿ.ಕೆ.ಶಿವಕುಮಾರ್ ಕಾಂಗ್ರೆಸ್ ಪಲ್ಲಕ್ಕಿ ಹೊರುವುದಂತೂ ಕನಸಿನ ಮಾತು. ಇನ್ನೇನಿದ್ದರೂ ಅದರ ಹೆಣ ಹೊರಬೇಕಷ್ಟೆ ಎಂದು ಲೇವಡಿ ಮಾಡಿದರು.

ಲೋಕಸಭಾ ಚುನಾವಣೆ 2019 : ವಿಶೇಷ ಪುಟ | ಗ್ಯಾಲರಿ

ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ ಡೈರಿ ವಿಷಯಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯಿಸಿದ ಶೆಟ್ಟರ್, ಲೋಕಸಭೆ ಚುನಾವಣೆ ಹಿನ್ನಲೆಯಲ್ಲಿ ಬಿಜೆಪಿ ಇಮೇಜ್ ಡ್ಯಾಮೇಜ್ ಮಾಡಲು ಡಿಕೆಶಿ ಸೃಷ್ಟಿಸಿರುವ ಕುತಂತ್ರಗಾರಿಕೆ. ಅದೊಂದು ಬೋಗಸ್ ಮತ್ತು ಜೆರಾಕ್ಸ್ ಪ್ರತಿಯಷ್ಟೆ. ಮೂಲ ಪ್ರತಿ ಎಲ್ಲಿದೆ? ಡಿಕೆಶಿಗೆ ಮನೆಗೆ ಎಲ್ಲಿಂದ ಬಂತು ಎಂಬುದನ್ನು ಸ್ಪಷ್ಟಪಡಿಸಲಿ ಎಂದರು.

Shivakumar egotism does not last long:DK Shivakumar

ಶಿವಕುಮಾರ್ ಐಟಿ ಇಲಾಖೆಯಿಂದ ತನ್ನನ್ನು ರಕ್ಷಿಸಿಕೊಳ್ಳಲು ಈ ಹುನ್ನಾರ ನಡೆಸಿದ್ದಾರೆ. ಕಾಂಗ್ರೆಸ್ ವಕ್ತಾರ ಸುರ್ಜೆವಾಲ ಸುಳ್ಳು ಆರೋಪ ಮಾಡಿದ್ದು, ಮೂಲ ಪ್ರತಿಯನ್ನು ಪ್ರದರ್ಶಿಸಲಿ. ಆ ಮೂಲಕ ನಿಜಾಂಶ ಹೊರಬರಲಿ. ಈ ಕುರಿತು ಯಡಿಯೂರಪ್ಪ ಈಗಾಗಲೇ ಸ್ಪಷ್ಟಪಡಿಸಿದ್ದಾರೆ. ಅಲ್ಲದೆ ಸ್ವತಃ ಐಟಿ ಇಲಾಖೆಯೇ ಬೋಗಸ್ ಎಂದು ಸಾಬೀತು ಮಾಡಿದೆ. ಡೈರಿ ಪ್ರಕರಣದಿಂದ ತಮ್ಮ ಪಕ್ಷಕ್ಕೆ ಯಾವುದೇ ಹಾನಿಯಾಗುವುದಿಲ್ಲ ಎಂದರು.

ಮೋದಿಯನ್ನು ಹೊರಗಿಡುವ ಉದ್ದೇಶದಿಂದ ಪ್ರತಿಪಕ್ಷಗಳು ನಡೆಸಿದ ಮಹಾಘಟಬಂಧನ್ ಚೂರು ಚೂರಾಗಿದೆ. ಯಾವುದೇ ಪಕ್ಷಗಳು ಕಾಂಗ್ರೆಸ್ ಮೈತ್ರಿಯನ್ನು ಒಪ್ಪಿಕೊಳ್ಳುತ್ತಿಲ್ಲ. ರಾಹುಲ್ ಗಾಂಧಿಯನ್ನು ಪ್ರಧಾನಿ ಅಭ್ಯರ್ಥಿಯಾಗಿ ಯಾವ ಪಕ್ಷಗಳ ಮುಖಂಡರೂ ಸಮ್ಮತಿಸುತ್ತಿಲ್ಲ. ಮೈತ್ರಿಕೂಟದ ಪ್ರಧಾನಿ ಅಭ್ಯರ್ಥಿ ಯಾರು ಎಂಬುದೇ ಪ್ರಶ್ನೆಯಾಗಿ ಉಳಿದಿದೆ. ಕಾಂಗ್ರೆಸ್ ಗೆ ಅಡ್ರೆಸ್ ಇಲ್ಲದ ಸ್ಥಿತಿ ನಿರ್ಮಾಣವಾಗಿದೆ ಎಂದು ವ್ಯಂಗ್ಯವಾಡಿದರು.

ಈ ಸಂದರ್ಭದಲ್ಲಿ ಶಾಸಕ ಶ್ರೀರಾಮುಲು, ಮಾಜಿ ಶಾಸಕ ಚಂದ್ರನಾಯ್ಕ, ಮಾಜಿ ಎಂಎಲ್ಸಿ ಮೃತ್ಯುಂಜಯ ಜಿನಗ , ಬಿಜೆಪಿ ಜಿಲ್ಲಾಧ್ಯಕ್ಷ ಚನ್ನಬಸವನಗೌಡ ಪಾಟೀಲ್, ತಾಲೂಕು ಅಧ್ಯಕ್ಷ ಎಂ.ಬಿ.ಬಸಣ್ಣ ಹಾಜರಿದ್ದರು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+