ಗಣಿ ನಾಡು ಬಳ್ಳಾರಿಯಲ್ಲಿ : ಕಾಂಗ್ರೆಸ್ಸಿಗೆ ಸಿಂಹ ಪಾಲು, ಕಮಲಕ್ಕೆ ನಿರಾಶೆ
ಬೆಂಗಳೂರು, ಮೇ 17: ಕನ್ನಡ ನಾಡಿನ ಪ್ರಮುಖ ವ್ಯಾಪಾರಿ ಕೇಂದ್ರ ಬಳ್ಳಾರಿ ಗಣಿ ಧೂಳಿಯಿಂದ ಮುಚ್ಚಿದ್ದು, ನಿಧಾನಗತಿಯಲ್ಲಿ ಹಸಿರು ಕಾಣುತ್ತಿದೆ. ರಾಜಕೀಯವಾಗಿ 'ಕೈ' ಪಾಳಯದ ಆಡ್ಡವಾಗಿ ಬೆಳೆದಿದ್ದ ಬಳ್ಳಾರಿಯನ್ನು ಗಾಲಿ ಜನಾರ್ದನ ರೆಡ್ಡಿ ಅಂಡ್ ಕೋ ಬಿಜೆಪಿ ಕಡೆಗೆ ವಾಲುವಂತೆ ಮಾಡಿದ್ದು ದೊಡ್ಡ ಸಾಧನೆ.
ಗಣಿ ಧೂಳು, ವಿಶ್ವ ಖ್ಯಾತ ಸಿದ್ದ ಉಡುಪು ಕೇಂದ್ರಗಳಿಗೆ ಸಿಗದ ಮನ್ನಣೆ, ಬಳ್ಳಾರಿ ಸೇರಿದಂತೆ ನಗರಗಳಲ್ಲಿನ ಕುಡಿಯುವ ನೀರಿನ ಸಮಸ್ಯೆ, ಹಿಂದುಳಿದ ಜಿಲ್ಲೆಗಳ ಪಟ್ಟಿ ಜೊತೆಗೆ ಅತಿವೃಷ್ಟಿಯ ಪ್ರಹಾರ. ಶೈಕ್ಷಣಿಕವಾಗಿ ಒಂದೆರಡು ವಿವಿಗಳನ್ನು ಹೊಂದಿರುವುದು ಬಿಟ್ಟರೆ ಸಾಕ್ಷರತೆ ಪ್ರಮಾಣ ಈಗಲೂ ಮೇಲಕ್ಕೆದ್ದಿಲ್ಲ.

ಹಿಂದುಳಿದ ಜಾತಿ ವರ್ಗ, ಪಂಗಡಗಳ ಮತದಾರರೇ ಪ್ರಮುಖವಾಗಿದ್ದಾರೆ, ರೆಡ್ಡಿಗಳು, ಲಂಬಾಣಿ ನಾಯಕರು, ಅಲ್ಪಸಂಖ್ಯಾರ ವೋಟ್ ಬ್ಯಾಂಕ್ ಕೂಡಾ ಶಕ್ತಿಯುತವಾಗಿದೆ.
ಬಳ್ಳಾರಿ ಜಿಲ್ಲೆಯ ವಿಧಾನಸಭಾ ಕ್ಷೇತ್ರಗಳ ಪರಿಚಯಕ್ಕೆ ಕ್ಲಿಕ್ ಮಾಡಿ
2013ರ ಫಲಿತಾಂಶದಂತೆ ಬಳ್ಳಾರಿ ಜಿಲ್ಲೆಯ 9 ಕ್ಷೇತ್ರಗಳ ಕಾಂಗ್ರೆಸ್ 4 ಹಾಗೂ ಬಿಜೆಪಿ 1, ಜೆಡಿಎಸ್ 1, ಪಕ್ಷೇತರ 1 ಹಾಗೂ ಇತರೆ (ಬಿಎಸ್ ಆರ್ ಕಾಂಗ್ರೆಸ್) 2 ಗಳಿಕೆಯಾಗಿತ್ತು.
ಬಳ್ಳಾರಿ ಜಿಲ್ಲೆ ವಿಧಾನಸಭಾ ಕ್ಷೇತ್ರಗಳಲ್ಲಿ: ಗೆದ್ದವರು, ಸೋತವರ ವಿವರ ಹೀಗಿದೆ:
| ಕ್ಷೇತ್ರ | ಗೆದ್ದವರು | ಗಳಿಸಿದ ಮತಗಳು | ಪಕ್ಷ | ಸೋತವರು | ಪಕ್ಷ | ಗಳಿಸಿದ ಮತಗಳು |
| ಹಡಗಲಿ(ಎಸ್ ಸಿ) | ಪರಮೇಶ್ವರ ನಾಯಕ | 54097 | ಕಾಂಗ್ರೆಸ್ | ಓದೋ ಗಂಗಪ್ಪ | ಪಕ್ಷೇತರ | 44919 |
| ಹಗರಿಬೊಮ್ಮನಹಳ್ಳಿ (ಎಸ್ ಸಿ) | ಭೀಮಾನಾಯ್ಕ | 78337 | ಕಾಂಗ್ರೆಸ್ | ನೇಮಿರಾಜ್ ನಾಯ್ಕ | ಬಿಜೆಪಿ | 71105 |
| ವಿಜಯನಗರ (ಹೊಸಪೇಟೆ) | ಆನಂದ್ ಸಿಂಗ್ | 83214 | ಬಿಜೆಪಿ | ಎಚ್ ಆರ್ ಗವಿಯಪ್ಪ | ಬಿಜೆಪಿ | 74986 |
| ಕಂಪ್ಲಿ(ಎಸ್ ಟಿ) | ಜೆ.ಎನ್ ಗಣೇಶ್ | 80592 | ಕಾಂಗ್ರೆಸ್ | ಟಿ.ಎಚ್ ಸುರೇಶ್ ಬಾಬು | ಬಿಜೆಪಿ | 75037 |
| ಸಿರಗುಪ್ಪ(ಎಸ್ ಟಿ) | ಎಂ.ಎಸ್ ಸೋಮಲಿಂಗಪ್ಪ | 82546 | ಬಿಜೆಪಿ | ಬಿ ಮುರಳಿಕೃಷ್ಣ | ಕಾಂಗ್ರೆಸ್ | 61275 |
| ಬಳ್ಳಾರಿ ಗ್ರಾಮಾಂತರ (ಎಸ್ ಟಿ) | ಬಿ ನಾಗೇಂದ್ರ | 79186 | ಕಾಂಗ್ರೆಸ್ | ಸಣ್ಣ ಫಕೀರಪ್ಪ | ಬಿಜೆಪಿ | 76507 |
| ಬಳ್ಳಾರಿ ನಗರ | ಸೋಮಶೇಖರ ರೆಡ್ಡಿ | 76589 | ಬಿಜೆಪಿ | ಅನಿಲ್ ಲಾಡ್ | ಕಾಂಗ್ರೆಸ್ | 60434 |
| ಸಂಡೂರು(ಎಸ್ ಟಿ) | ಈ ತುಕರಾಂ | 78106 | ಕಾಂಗ್ರೆಸ್ | ಡಿ ರಾಘವೇಂದ್ರ | ಜೆಡಿಎಸ್ | 64096 |
| ಕೂಡ್ಲಿಗಿ (ಎಸ್ ಟಿ) | ಎನ್ ವೈ ಗೋಪಾಲಕೃಷ್ಣ | 50085 | ಬಿಜೆಪಿ | ಎನ್ ಟಿ ಬೊಮ್ಮಣ್ಣ | ಜೆಡಿಎಸ್ | 39272 |












Click it and Unblock the Notifications