117 ಕೋಟಿ ಆಸ್ತಿ ಘೋಷಿಸಿದ ವಿಜಯನಗರ ಕಾಂಗ್ರೆಸ್ ಅಭ್ಯರ್ಥಿ ಆನಂದ್ ಸಿಂಗ್
ವಿಜಯನಗರ (ಬಳ್ಳಾರಿ), ಏಪ್ರಿಲ್ 19: ಬಿಜೆಪಿ ತೊರೆದು ಕಾಂಗ್ರೆಸ್ ಸೇರಿ ಬಳ್ಳಾರಿಯ ವಿಜಯನಗರದಿಂದ ಸ್ಪರ್ಧಿಸಿರುತ್ತಿರುವ ಆನಂದ್ ಸಿಂಗ್ 117 ಕೋಟಿ ರೂಪಾಯಿ ಆಸ್ತಿ ಘೋಷಿಸಿಕೊಂಡಿದ್ದಾರೆ. 2013ರಲ್ಲಿಅವರು 53 ಕೋಟಿ ರೂಪಾಯಿ ಆಸ್ತಿ ಘೋಷಿಸಿದ್ದರು. ಕಳೆದ 5 ವರ್ಷಗಳಲ್ಲಿ ಅವರ ಆಸ್ತಿಯಲ್ಲಿ ದುಪ್ಪಟ್ಟು ಏರಿಕೆಯಾಗಿದೆ.
ಇಂದು ನಾಮಪತ್ರ ಸಲ್ಲಿಸಿರುವ ಅವರು 42.06 ಕೋಟಿ ರೂಪಾಯಿ ಮೌಲ್ಯದ ಚರಾಸ್ತಿ ಮತ್ತು 75.45 ಕೋಟಿ ರೂಪಾಯಿ ಮೌಲ್ಯದ ಸ್ಥಿರಾಸ್ತಿ ಘೋಷಿಸಿದ್ದಾರೆ. ತಮ್ಮ ಮೇಲೆ 16 ಪ್ರಕರಣಗಳಿವೆ ಮತ್ತು 27.01 ಕೋಟಿ ರೂಪಾಯಿ ಸಾಲ ಇರುವುದಾಗಿ ಅವರು ಅಫಿಡವಿಟ್ ನಲ್ಲಿ ಹೇಳಿದ್ದಾರೆ.

ಇದೇ ವೇಳೆ ಸರಕಾರದ ಜತೆ 17.42 ಕೋಟಿ ರೂಪಾಯಿಯ ದಂಡ ವಿವಾದವಿದೆ ಎಂದೂ ಅವರು ಹೇಳಿದ್ದಾರೆ. ಇದೇ ವೇಳೆ 64.65 ಕೋಟಿ ರೂಪಾಯಿ ಸಾಲವನ್ನು ಆನಂದ್ ಸಿಂಗ್ ನೀಡಿದ್ದಾರೆ.
ಆಸ್ತಿ-ಪಾಸ್ತಿ
ಕೈಯಲ್ಲಿರುವ ಒಟ್ಟು ನಗದು - 32.5 ಲಕ್ಷ ರೂ.
ಆನಂದ್ ಸಿಂಗ್ ಕೈಯಲ್ಲಿ - 25.63 ಲಕ್ಷ ರೂ.
ಪತ್ನಿ ಲಕ್ಷ್ಮೀ ಸಿಂಗ್ ಕೈಯಲ್ಲಿ - 6.69 ಲಕ್ಷ ರೂ.
ವೈಷ್ಣವಿ (ಅವಲಂಬಿತರು) - 15 ಸಾವಿರ ರೂ.
ಸಿದ್ಧಾರ್ಥ್ (ಅವಲಂಬಿತರು) - 5 ಸಾವಿರ ರೂ.
ಯಶಸ್ವಿ (ಅವಲಂಬಿತರು) - ಇಲ್ಲ
ಚರಾಸ್ತಿ - 42.06 ಕೋಟಿ ರೂ.
ಆನಂದ್ ಸಿಂಗ್ ಹೆಸರಿನಲ್ಲಿರುವ ಆಸ್ತಿ - 25.91 ಕೋಟಿ ರೂ.
ಪತ್ನಿ ಹೆಸರಿನಲ್ಲಿರುವ ಆಸ್ತಿ - 12.73 ಕೋಟಿ ರೂ.
ಮಕ್ಕಳ ಹೆಸರಿನಲ್ಲಿರುವ ಆಸ್ತಿ - 3.31 ಕೋಟಿ ರೂ.
ಸ್ಥಿರಾಸ್ತಿ - 75.45 ಕೋಟಿ ರೂ.
ಆನಂದ್ ಸಿಂಗ್ ಹೆಸರಿನಲ್ಲಿರುವ ಆಸ್ತಿ - 45.44 ಕೋಟಿ ರೂ.
ಪತ್ನಿ ಹೆಸರಿನಲ್ಲಿರುವ ಆಸ್ತಿ - 27.95 ಕೋಟಿ ರೂ.
ಮಕ್ಕಳ ಹೆಸರಿನಲ್ಲಿರುವ ಆಸ್ತಿ - 2.05 ಕೋಟಿ ರೂ.
ಒಟ್ಟು ಆಸ್ತಿ - 117.51 ಕೋಟಿ ರೂ.
ಒಟ್ಟು ಸಾಲ - 27.01 ಕೋಟಿ ರೂ.
ಪತ್ನಿ ಹೆಸರಲ್ಲಿ ಸಾಲ - 9.58 ಕೋಟಿ ರೂ.
ಸರಕಾರದ ಜೊತೆ ವಿವಾದದಲ್ಲಿರುವ ದಂಡ - 17.42 ಕೋಟಿ ರೂ.
ವಿಚಾರಣೆ ನಡೆಯುತ್ತಿರುವ ಪ್ರಕರಣಗಳು - 16 (ಲೋಕಾಯುಕ್ತ, ಎಸ್ಐಟಿ, ಸಿಬಿಐ-ಎಸಿಬಿ ಬೆಂಗಳೂರು, ಸಿಬಿಐ-ಎಸಿಬಿ ಚೆನ್ನೈ, ಹೊಸಪೇಟೆ ರೇಂಜ್ ಫಾರೆಸ್ಟ್ ಆಫೀಸ್)
ನೀಡಿರುವ ಒಟ್ಟು ಸಾಲ - 64.65 ಕೋಟಿ ರೂ.
ಆನಂದ್ ಸಿಂಗ್ ನೀಡಿರುವ ಸಾಲ - 10 ಕೋಟಿ ರೂ.
ಪತ್ನಿ ನೀಡಿರುವ ಸಾಲ - 54.65 ಕೋಟಿ ರೂ.
ಒಟ್ಟು ಆಭರಣ ಮೌಲ್ಯ - 2.84 ಕೋಟಿ ರೂ.
ಆನಂದ್ ಸಿಂಗ್ ಬಳಿಯಲ್ಲಿರುವ ಆಭರಣಗಳು
ಚಿನ್ನ - 1.85 ಕೆಜಿ, ಮೌಲ್ಯ - 55.74 ಲಕ್ಷ ರೂ.
ಬೆಳ್ಳಿ - 18 ಕೆಜಿ, ಮೌಲ್ಯ 5.58 ಲಕ್ಷ ರೂ.
ವಜ್ರ - 195.515 ಕ್ಯಾರೆಟ್, 1.74 ಕೋಟಿ ರೂ.
ಪತ್ನಿ ಬಳಿಯಲ್ಲಿರುವ ಆಭರಣಗಳು
ಚಿನ್ನ - 0.455 ಕೆಜಿ, ಮೌಲ್ಯ - 13.65 ಲಕ್ಷ ರೂ.
ಬೆಳ್ಳಿ - 1.58ಕೆಜಿ, ಮೌಲ್ಯ 0.82 ಲಕ್ಷ ರೂ.
ಮಕ್ಕಳ ಬಳಿಯಲ್ಲಿರುವ ಆಭರಣಗಳು
ಚಿನ್ನ - 1.2ಕೆಜಿ, ಮೌಲ್ಯ - 35ಲಕ್ಷ ರೂ.
ಬೆಳ್ಳಿ - 1.18 ಕೆಜಿ, ಮೌಲ್ಯ 0.65ಲಕ್ಷ ರೂ.
ವಾಹನಗಳು
ಒಟ್ಟು ವಾಹನಗಳು- 19, ಮೌಲ್ಯ - 1.61 ಕೋಟಿ ರೂ.
ಬೆಂಜ್ ಕಾರ್- 3
ಸ್ಕಾರ್ಪಿಯೋ - 2
ರೇಂಜ್ ರೋವರ್ -1
ಇನ್ನೋವಾ - 2
ಬಿಎಂಡಬ್ಲ್ಯೂ - 1
ವೋಲ್ವೋ - 1
ಫೋಕ್ಸ್ ವ್ಯಾಗನ್ - 1
ಮತ್ತು ಇತರ












Click it and Unblock the Notifications