ಹೊಸಪೇಟೆ ಹೆದ್ದಾರಿಯ ಸುರಂಗ ಮಾರ್ಗದಲ್ಲಿ ಬಿರುಕು
ಬಳ್ಳಾರಿ, ಡಿಸೆಂಬರ್ 18: ಹೊಸಪೇಟೆಯ ರಾಷ್ಟ್ರೀಯ ಹೆದ್ದಾರಿ ಎನ್‌ಎಚ್ 50 ಸುರಂಗದಲ್ಲಿ ಬಿರುಕು ಕಾಣಿಸಿಕೊಂಡಿದೆ.
ಹೊಸಪೇಟೆಯ ಹೊರವಲಯದಲ್ಲಿರುವ ಗುಂಡಾ ಸಸ್ಯ ಉದ್ಯಾನವನ ಬಳಿಯಿರುವ ಸುರಂಗ ಮಾರ್ಗ ಶಿಥಿಲಗೊಂಡು ಬಿರುಕುಗಳು ಕಾಣಿಸಿಕೊಂಡಿದೆ. ರಾಷ್ಟ್ರೀಯ ಹೆದ್ದಾರಿ 50ರ ಪ್ರಮುಖ ಸಂಪರ್ಕ ಕೊಂಡಿಯಾಗಿರುವ ಸುರಂಗದ ಒಳಭಾಗ ಸಿಮೆಂಟ್ ಬ್ಲಾಕ್ ಗಳಿಂದ ಕೂಡಿದೆ. ಕಳೆದೆರಡು ತಿಂಗಳಿನಿಂದ ಅಲ್ಲಿ ಬಿರುಕು ಕಾಣಿಸಿಕೊಳ್ಳುತ್ತಿದೆ.
ಸುರಂಗ ಮಾರ್ಗವು ವಿಶ್ವದರ್ಜೆಯಲ್ಲಿ ನಿರ್ಮಾಣವಾಗಿತ್ತು. ಸುರಂಗದೊಳಗೆ ವಾಹನ ಸಂಚಾರ, ಗುಡ್ಡದ ಮೇಲೆ ರೈಲು ಸಂಚಾರ. ಈ ಸುರಂಗದಲ್ಲಿ ಚಿತ್ರೀಕರಣವೂ ಕೂಡ ನಡೆದದ್ದುಂಟು.

ಈ ಸುರಂಗ ಮಾರ್ಗವು ಬೆಂಗಳೂರು, ಚಿತ್ರದುರ್ಗ, ದಾವಣಗೆರೆ, ಶಿವಮೊಗ್ಗೆ, ಮಂಗಳೂರು, ವಿಜಯಪುರ, ಬಾಗಲಕೋಟೆ, ಮಹಾರಾಷ್ಟ್ರದ ಸೋಲಾಪುರ ಸೇರಿದಂತೆ ಅನೇಕ ಪ್ರಮುಖ ನಗರಗಳಿಗೆ ಸಂಪರ್ಕ ಕಲ್ಪಿಸುತ್ತದೆ.
ಸುರಂಗದ ಮೇಲ್ಭಾಗದಲ್ಲಿ ಬೀಳುವ ಮಳೆ ನೀರು ನೇರವಾಗಿ ಬಿರುಕುಬಿಟ್ಟ ಬ್ಲಾಕ್ ಗಳಿಂದ ಹೆದ್ದಾರಿ ಮೇಲೆ ಬಂದು ನಿಲ್ಲುತ್ತಿವೆ. ಬ್ಲಾಕ್ ಗಳಲ್ಲಿ ಫಂಗಸ್ ಕಾಣಿಸಿಕೊಂಡು, ಹಲವೆಡೆ ಸಿಮೆಂಟ್ ಕಿತ್ತುಹೋಗಿದೆ. ಈ ಬ್ಲಾಕ್ ಗಳ ಮೂಲಕ ವಿದ್ಯುತ್ ತಂತಿ ಹಾದುಹೋಗಿದ್ದು, ವಿದ್ಯುದೀಪಗಳನ್ನು ಅಳವಡಿಸಲಾಗಿದ್ದು, ಸೋರಿಕೆ ತಡೆಗಟ್ಟದಿದ್ದರೆ ಶಾರ್ಟ್ ಸರ್ಕ್ಯೂಟ್ ಆಗುವ ಅಪಾಯವೂ ಇದೆ.












Click it and Unblock the Notifications