ಪಾಕಿಸ್ತಾನಕ್ಕೆ ನನ್ನನ್ನು ಕಳಿಸಿದ್ದು ನನ್ನ ಕ್ಯಾಪ್ಟನ್ ರಾಹುಲ್ : ಸಿಧು
Recommended Video

ನವದೆಹಲಿ, ನವೆಂಬರ್ 30: 'ಪಾಕಿಸ್ತಾನಕ್ಕೆ ನನ್ನನ್ನು ಕಳಿಸಿದ್ದು ನನ್ನ ಕ್ಯಾಪ್ಟನ್ ರಾಹುಲ್ ಗಾಂಧಿ' ಎಂದು ಕಾಂಗ್ರೆಸ್ ನಾಯಕ, ಪಂಜಾಬ್ ಸಚಿವ ನವಜ್ಯೋತ್ ಸಿಂಗ್ ಸಿಧು ಹೇಳಿದ್ದಾರೆ.
ರಾಹುಲ್ ಗಾಂಧಿ ನನ್ನ ಕ್ಯಾಪ್ಟನ್, ನಾನು ಯಾವಾಗ ಅಲ್ಲಿಗೆ ಹೋದರೂ ಅವರ ಅನುಮತಿ ಕೇಳಿಕೊಂಡೆ ಹೋಗುತ್ತೇನೆ. ಕನಿಷ್ಟ 20ಕ್ಕೂ ಅಧಿಕ ಕಾಂಗ್ರೆಸ್ ನಾಯಕರು ನನ್ನ ನಿರ್ಧಾರವನ್ನು ಬೆಂಬಲಿಸಿದ್ದರು.
ಕ್ಯಾಪ್ಟನ್ ಅಮರೀಂದರ್ ಸಿಂಗ್ ನನಗೆ ತಂದೆ ಸಮಾನ. ನಾನು ಅವರಿಗೆ (ಪಾಕಿಸ್ತಾನ) ವಾಗ್ದಾನ ನೀಡಿದ್ದೇನೆ. ನಾನು ಅಲ್ಲಿಗೆ ಹೋಗುವ ವಿಷಯವನ್ನು ತಿಳಿಸಿದ್ದೆ ಎಂದಿದ್ದಾರೆ. ಆದರೆ, ಸಿಧು ಅವರ ಪಾಕಿಸ್ತಾನ ಭೇಟಿ ಬಗ್ಗೆ ಸಿಎಂ ಅಮರೀಂದರ್ ಅವರು ಆಕ್ಷೇಪ ವ್ಯಕ್ತಪಡಿಸಿದ್ದರು.

ಪಾಕಿಸ್ತಾನದ ಪ್ರಧಾನಿ ಇಮ್ರಾನ್ ಖಾನ್ ಅವರ ಆಹ್ವಾನದ ಮೇರೆಗೆ ನವೆಂಬರ್ 28ರಂದು ಕರ್ತಾರ್ ಪುರ್ ಸಾಹೀಬ್ ಕಾರಿಡಾರ್ ಸಮಾರಂಭದಲ್ಲಿ ನವಜ್ಯೋತ್ ಸಿಂಗ್ ಸಿಧು ಅವರು ಪಾಲ್ಗೊಂಡಿದ್ದರು. ಕರ್ತಾರ್ ಪುರ್ ಬಗ್ಗೆ ಜನಮಾನಸದಲ್ಲಿ ನೆನಪು ಉಳಿಯುವಂಥ ಕೆಲಸವನ್ನು ಇಮ್ರಾನ್ ಖಾನ್ ಮಾಡಿದ್ದಾರೆ ಎಂದು ಸಿಧು ಹೊಗಳಿದ್ದರು.
ಪಾಕಿಸ್ತಾನದ ಪ್ರಧಾನಿ ಇಮ್ರಾನ್ ಖಾನ್ ಅವರ ಪ್ರಮಾಣ ವಚನ ಸ್ವೀಕಾರ ಸಮಾರಂಭಕ್ಕೆ ಹಾಜರಾಗುವ ಮೂಲಕ ಸಿಧು ಅವರು ಹೊಸ ವಿವಾದ ಹುಟ್ಟು ಹಾಕಿದ್ದರು. ಈ ಸಂದರ್ಭದಲ್ಲಿ ಪಾಕಿಸ್ತಾನದ ಆರ್ಮಿ ಮುಖ್ಯಸ್ಥ ಜನರಲ್ ಬಾಜ್ವಾ ಅವರನ್ನು ಆಲಿಂಗಿಸಿಕೊಂಡಿದ್ದರು. ಈ ಬಗ್ಗೆ ಚರ್ಚೆ ಇನ್ನೂ ಮುಂದುವರೆದಿದೆ.












Click it and Unblock the Notifications