• search
  • Live TV
ಅಮೃತಸರ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

Breaking: ಪಂಜಾಬ್‌ ಆಪ್ ಶಾಸಕಿ ಮೇಲೆ ಗಂಡನಿಂದ ಹಲ್ಲೆ, ವಿಡಿಯೋ ವೈರಲ್

|
Google Oneindia Kannada News

ಅಮೃತಸರ, ಸೆಪ್ಟೆಂಬರ್ 2: ಪಂಜಾಬ್‌ನ ಆಮ್ ಆದ್ಮಿ ಪಕ್ಷದ (ಎಎಪಿ) ಶಾಸಕಿಯೊಬ್ಬರ ಮೇಲೆ ಆಕೆಯ ಪತಿ ಸಾರ್ವಜನಿಕವಾಗಿ ಕಪಾಳಮೋಕ್ಷ ಮಾಡಿರುವ ವಿಡಿಯೋವೊಂದು ಆಕ್ರೋಶಕ್ಕೆ ಕಾರಣವಾಗಿದ್ದು, ಆತನ ವಿರುದ್ಧ ಕ್ರಮ ತೆಗೆದುಕೊಳ್ಳುವಂತೆ ಆಗ್ರಹ ಕೇಳಿಬಂದಿದೆ.

ಪಂಜಾಬ್ ಶಾಸಕಿ ಬಲ್ಜಿಂದರ್ ಕೌರ್ ಅವರ ಮನೆಯಲ್ಲಿ ಆಪ್ ನಾಯಕರೂ ಆಗಿರುವ ಆಕೆಯ ಪತಿ ಕಪಾಳಮೋಕ್ಷ ಮಾಡಿರುವ ವಿಡಿಯೋ ವೈರಲ್ ಆಗಿದೆ.

ಬಲವಂತದ ಮತಾಂತರ: ಪಂಜಾಬ್ ಪಾದ್ರಿಯ ಕಾರಿಗೆ ಬೆಂಕಿ, ಚರ್ಚ್‌ನಲ್ಲಿನ ಪ್ರತಿಮೆ ಧ್ವಂಸಬಲವಂತದ ಮತಾಂತರ: ಪಂಜಾಬ್ ಪಾದ್ರಿಯ ಕಾರಿಗೆ ಬೆಂಕಿ, ಚರ್ಚ್‌ನಲ್ಲಿನ ಪ್ರತಿಮೆ ಧ್ವಂಸ

ಹಲವು ಜನರ ಎದುರಲ್ಲಿ ಜಗಳವಾಡುತ್ತಿದ್ದ ವೇಳೆ ಪತಿ ಸುಖರಾಜ್ ಸಿಂಗ್ ಇದ್ದಕ್ಕಿದ್ದಂತೆ ಕೋಪದ ಭರದಲ್ಲಿ ಶಾಸಕಿ ಬಲ್ಜಿಂದರ್ ಕೌರ್‌ಗೆ ಕಪಾಳಮೋಕ್ಷ ಮಾಡಿ ಹಕ್ಕೆ ಮಾಡಿದ್ದಾರೆ. ಈ ವೇಳೆ ಸ್ಥಳದಲ್ಲಿದ್ದ ಇತರರು ಆತನನ್ನು ಎಳೆದೊಯ್ದಿದ್ದಾರೆ.

ಪಂಜಾಬ್‌ನ ತಲವಂಡಿ ಸಾಬೋ ಎಂಬಲ್ಲಿನ ದಂಪತಿಯ ಮನೆಯ ಸಮೀಪವಿರುವ ಸಿಸಿಟಿವಿ ಕ್ಯಾಮೆರಾದಲ್ಲಿ ಘಟನೆ ಸೆರೆಯಾಗಿದೆ.

ಜುಲೈ 10ರ ಘಟನೆಯ ವಿಡಿಯೋ ಇದಾಗಿದ್ದು, 50 ಸೆಕೆಂಡುಗಳ ಈ ವಿಡಿಯೋ ಇದೀಗ ವೈರಲ್ ಆಗಿದೆ. ಪಂಜಾಬ್ ರಾಜ್ಯದಲ್ಲಿ ಆಡಳಿತ ನಡೆಸುತ್ತಿರುವ ಆಪ್ ಸರಕಾರ ಈ ಬಗ್ಗೆ ಯಾವುದೇ ಪ್ರತಿಕ್ರಿಯೆ ನೀಡಿಲ್ಲ.

ಬಲ್ಜಿಂದರ್ ಕೌರ್ ತಲ್ವಾಂಡಿ ಸಾಬೊ ಕ್ಷೇತ್ರದಿಂದ ಎರಡು ಬಾರಿ ಶಾಸಕರಾಗಿದ್ದಾರೆ. ಘಟನೆ ಬಗ್ಗೆ ಆಕೆ ದೂರು ದಾಖಲಿಸಿಲ್ಲ, ಆದರೆ ಪಂಜಾಬ್ ರಾಜ್ಯ ಮಹಿಳಾ ಆಯೋಗ ಈ ಬಗ್ಗೆ ಆಕ್ರೋಶ ವ್ಯಕ್ತಪಡಿಸಿದೆ.


ಪಂಜಾಬ್ ರಾಜ್ಯ ಮಹಿಳಾ ಆಯೋಗದ ಅಧ್ಯಕ್ಷೆ ಮನೀಶಾ ಗುಲಾಟಿ ಸುದ್ದಿಗಾರರೊಂದಿಗೆ ಮಾತನಾಡಿ, "ನಾನು ಸಾಮಾಜಿಕ ಮಾಧ್ಯಮದಲ್ಲಿ ಬಲ್ಜಿಂದರ್ ಕೌರ್ ಅವರ ವಿಡಿಯೋವನ್ನು ನೋಡಿದ್ದೇನೆ. ಘಟನೆಯ ಬಗ್ಗೆ ನಾವು ಸ್ವಯಂಪ್ರೇರಿತವಾಗಿ ನೋಟಿಸ್ ತೆಗೆದುಕೊಳ್ಳುತ್ತೇವೆ. ಸಾರ್ವಜನಿಕ ಸಮಸ್ಯೆಗಳ ಬಗ್ಗೆ ಧ್ವನಿ ಎತ್ತುವ ಮಹಿಳೆಯೊಬ್ಬರು ಮನೆಯಲ್ಲಿ ಕಿರುಕುಳವನ್ನು ಎದುರಿಸುತ್ತಿರುವುದು ಬೇಸರ ತಂದಿದೆ" ಎಂದಿದ್ದಾರೆ.

Husband Slaps Punjab AAP MLA In Public; Calls for Action

ಬಲ್ಜಿಂದರ್ ಕೌರ್ 2019 ರಲ್ಲಿ AAP ನ ಮಜಾ ಪ್ರದೇಶದ ಯುವ ಘಟಕದ ಸಂಚಾಲಕ ಸುಖರಾಜ್ ಸಿಂಗ್ ಅವರನ್ನು ವಿವಾಹವಾಗಿದ್ದಾರೆ. ಬಲ್ಜಿಂದರ್ ಕೌರ್ ಆಪ್‌ನ ರಾಷ್ಟ್ರೀಯ ಕಾರ್ಯಕಾರಿಣಿಯ ಸದಸ್ಯರಾಗಿದ್ದಾರೆ ಮತ್ತು ಪಂಜಾಬ್‌ನಲ್ಲಿ ಪಕ್ಷದ ಮಹಿಳಾ ವಿಭಾಗದ ಮುಖ್ಯಸ್ಥರಾಗಿದ್ದಾರೆ.

ಅವರು ರಾಜಕೀಯಕ್ಕೆ ಪಾದಾರ್ಪಣೆ ಮಾಡುವ ಮೊದಲು ಫತೇಘರ್ ಸಾಹಿಬ್‌ನಲ್ಲಿರುವ ಮಾತಾ ಗುಜ್ರಿ ಕಾಲೇಜಿನಲ್ಲಿ ಇಂಗ್ಲಿಷ್ ಪ್ರಾಧ್ಯಾಪಕರಾಗಿ ಕೆಲಸ ಮಾಡಿದ್ದರು. ಬಳಿ ಎಎಪಿ ಸೇರಿ 2017 ರಲ್ಲಿ ಪಂಜಾಬ್‌ನ ಚುನಾವಣೆಯಲ್ಲಿ ಸ್ಪರ್ಧಿಸಿ ತಮ್ಮ ಮೊದಲ ಚುನಾವಣೆಯಲ್ಲಿಯೇ ಗೆಲುವು ದಾಖಲಿಸಿದ್ದರು.

ಈ ಹಲ್ಲೆಯ ವಿಡಿಯೋ ಅಸಹ್ಯ ಮತ್ತು ಖಂಡನೆಯನ್ನು ಉಂಟು ಮಾಡಿದೆ.

ವಿಡಿಯೋ ಹಂಚಿಕೊಂಡಿರುವ ಪಂಜಾಬ್ ಯುವ ಕಾಂಗ್ರೆಸ್ ಅಧ್ಯಕ್ಷ ಬೃಂದರ್ ಸಿಂಗ್ ಧಿಲ್ಲೋನ್, "ಮಹಿಳಾ ಸಬಲೀಕರಣವು ಮಹಿಳೆಯರ ಮೇಲಿನ ದೌರ್ಜನ್ಯವನ್ನು ತಡೆಯಲು ಆಗುತ್ತಿಲ್ಲ. ಶಾಸಕಿ ಬಲ್ಜಿಂದರ್‌ ಕೌರ್‌ ಅವರಿಗೆ ಹಗಲು ಹೊತ್ತಿನಲ್ಲಿ ಕಪಾಳಮೋಕ್ಷ ಮಾಡುತ್ತಿರುವುದು ನೋಡಿ ಆಘಾತವಾಗಿದೆ. ಎಲ್ಲದಕ್ಕಿಂತ ಹೆಚ್ಚಾಗಿ ಪುರುಷರ ಮನಸ್ಥಿತಿ ಬದಲಾಗಬೇಕು" ಎಂದಿದ್ದಾರೆ.

ಮಾಜಿ ಕೇಂದ್ರ ಸಚಿವೆ ಅಕಾಲಿದಳದ ಹರ್‌ಸಿಮ್ರತ್ ಕೌರ್ ಬಾದಲ್ ಅವರು ಶಾಸಕಿಯ ಪತಿ ವಿರುದ್ಧ ಕ್ರಮಕ್ಕೆ ಒತ್ತಾಯಿಸಿದ್ದಾರೆ.

"ತಲ್ವಾಂಡಿ ಸಾಬೋ ಶಾಸಕಿ ಬಲ್ಜಿಂದರ್ ಕೌರ್ ಅವರ ಪತಿ ಹೇಯ ದೌರ್ಜನ್ಯವನ್ನು ಸಂಪೂರ್ಣವಾಗಿ ಖಂಡಿಸುತ್ತೇವೆ. ಮಹಿಳೆಯರ ಮೇಲೆ ದೌರ್ಜನ್ಯ ಮಾಡಿ ಅದನ್ನು ಮೇಲುಗೈ ಎಂದು ಭಾವಿಸುವ ಇಂತಹವರನ್ನು ದುರ್ಬಲರು ಎಂದು ಕರೆಯಬೇಕು. ಬಲ್ಜಿಂದರ್ ಅವರ ಪತಿ ಸಾರ್ವಜನಿಕವಾಗಿ ಕ್ಷಮೆಯಾಚಿಸಬೇಕು ಮತ್ತು ಅವರ ಮಾರ್ಗವನ್ನು ಸರಿಪಡಿಸಿಕೊಳ್ಳಬೇಕು ಅಥವಾ ಆತನ ವಿರುದ್ಧ ಕಾನೂನಿನ ಪ್ರಕಾರ ಕಠಿಣ ಕ್ರಮ ತೆಗೆದುಕೊಳ್ಳಬೇಕು" ಎಂದು ಟ್ವೀಟ್ ಮಾಡಿದ್ದಾರೆ.

English summary
Punjab; Aam Aadmi Party MLA Baljinder Kaur slapped by her husband in public; video viral. know more
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X