ಇದು ಗುಪ್ತಾ ಆ್ಯಂಡ್ ಡಾಟರ್ಸ್: ಪುರುಷ ಪ್ರಧಾನ ಹೊರತಾದ ಒಂದು ಅಧ್ಯಾಯ
ಲುಧಿಯಾನಾ, ಮೇ 24: ದೇಶದಲ್ಲಿ ಈಗ ಬಹುತೇಕ ಮಂದಿ ಅಕ್ಷರಸ್ಥರಿದ್ದಾರೆ,ತಂತ್ರಜ್ಞಾನದಲ್ಲೂ ಮುನ್ನಡೆ ಸಾಧಿಸಿದೆ. ಆದರೆ ಪುರುಷ ಹಾಗೂ ಮಹಿಳೆಯರ ನಡುವಿನ ಬೇಧ ಭಾವ ಹಾಗೆಯೇ ಉಳಿದಿದೆ.
ಆದರೆ ತಂದೆಯೊಬ್ಬರು ಪುರುಷ ಪ್ರಧಾನ ಸಂಸ್ಕೃತಿಯನ್ನು ಬದಿಗಿಟ್ಟು ಹೆಣ್ಣುಮಕ್ಕಳ ಬಗ್ಗೆ ತಮ್ಮೊಳಗಿರುವ ಪ್ರೀತಿಯನ್ನು ಅಭಿವ್ಯಕ್ತಪಡಿಸಿದ್ದಾರೆ.ಲಧಿಯಾನಾದಲ್ಲಿ ಔಷಧ ಅಂಗಡಿಯೊಂದಕ್ಕೆ ಗುಪ್ತಾ ಆಂಡ್ ಡಾಟರ್ಸ್ ಎಂದು ನಾಮಕರಣ ಮಾಡಿದ್ದಾರೆ.
ಈ ವಿಚಾರವನ್ನು ಡಾ. ಅಮನ್ ಎಂಬುವವರು ಟ್ವಿಟ್ಟರ್‌ನಲ್ಲಿ ಹಂಚಿಕೊಂಡಿದ್ದಾರೆ. ಎಲ್ಲಾ ಅಂಗಡಿಗಳಲ್ಲಿ 'ಸನ್ಸ್'ಗಂಡು ಮಕ್ಕಳ ಹೆಸರಿರುವುದು ಸಾಮಾನ್ಯ, ಯಾವುದೇ ಉದ್ಯೋಗ ವ್ಯಾಪಾರ ಆರಂಭಿಸುವುದಿದ್ದರೂ ಗಂಡು ಮಕ್ಕಳ ಹೆಸರಿನಲ್ಲಿಯೇ ಆರಂಭಿಸುತ್ತಾರೆ. ಮನೆಗೆ ಅವರೇ ಆಧಾರ ಎಂದು ನಂಬಿರುತ್ತಾರೆ.

ಆದರೆ ಪುತ್ರಿಯರು ಯಾರಿಗೇನು ಕಡಿಮೆ ಇದ್ದಾರೆ, ಅವರು ಸಂಪಾದಿಸುತ್ತಾರೆ, ಅವರು ಮನೆಗೆ ಆಧಾರ ಸ್ತಂಭವಾಗಿದ್ದಾರೆ ಎನ್ನುವುದು ಈ ಔಷಧಾಲಯ ಮಾಲೀಕರ ಅಭಿಪ್ರಾಯವಾಗಿದೆ.
ಈ ವಿಚಾರವನ್ನು ಡಾ. ಅಮನ್ ಎಂಬುವವರು ಟ್ವಿಟ್ಟರ್‌ನಲ್ಲಿ ಹಂಚಿಕೊಂಡಿದ್ದಾರೆ. ಈ ಗುಪ್ತಾ ಆ್ಯಂಡ್ ಡಾಟರ್ಸ್ ಎನ್ನುವುದು ಹೊಸ ಸಂಸ್ಕೃತಿಯನ್ನು ಹುಟ್ಟುಹಾಕಲಿದೆ.
ಗಂಡು ಮಗುವಿರಲಿ ಹೆಣ್ಣುಮಗುವಿರಲಿ ಎಲ್ಲರೂ ನಮ್ಮದೇ ಮಕ್ಕಳಲ್ಲವೇ ಎಂಬುದನ್ನು ಈ ತಂದೆ ಮನಮುಟ್ಟುವಂತೆ ಹೇಳಿದ್ದಾರೆ.












Click it and Unblock the Notifications