ಚಂದ್ರಬಾಬು ನಾಯ್ಡು 'ಬಾಹುಬಲಿ'ಯ ಬಲ್ಲಾಳದೇವ: ಮೋದಿ ಹೋಲಿಕೆ
ವಾರ್ಧಾ, ಏಪ್ರಿಲ್ 1: ಪ್ರಧಾನಿ ನರೇಂದ್ರ ಮೋದಿ ಅವರು ಸೋಮವಾರ ಮಹಾರಾಷ್ಟ್ರ, ಆಂಧ್ರಪ್ರದೇಶ ಮತ್ತು ತೆಲಂಗಾಣದಲ್ಲಿ ಚುನಾವಣಾ ಪ್ರಚಾರ ನಡೆಸಿದರು. ಮೊದಲು ವಿದರ್ಭದ ವಾರ್ಧಾದಲ್ಲಿ ಬಿಜೆಪಿ-ಶಿವಸೇನಾ ಅಭ್ಯರ್ಥಿ ಪರ ಪ್ರಚಾರ ನಡೆಸಿದ ಅವರು, ಆಂಧ್ರಪ್ರದೇಶದ ರಾಜಮುಂಡ್ರಿಯಲ್ಲಿ ಸಮಾವೇಶ ನಡೆಸಿದರು.
ಲೋಕಸಭಾ ಚುನಾವಣೆ 2019 : ವಿಶೇಷ ಪುಟ | ಗ್ಯಾಲರಿ
ಮೋದಿ ಅವರ ಭಾಷಣದ ಕೆಲವು ಪ್ರಮುಖ ಅಂಶಗಳು ಇಲ್ಲಿವೆ.
* ಟಿಡಿಪಿ ಹೊಸ ಕಾರ್ಯ ಆರಂಭಿಸಿದೆ. ಇದು ಸೈಬರ್ ಅಪರಾಧಕ್ಕೆ ಸಂಬಂಧಿಸಿದ್ದು. ಚಂದ್ರಬಾಬು ನಾಯ್ಡು ಅವರು ಹೇಳುವ 'ಸೇವಾ ಮಿತ್ರ' ಆಪ್ ಸೇವೆಯೂ ಅಲ್ಲ ಅಥವಾ ಸ್ನೇಹಿತನೂ ಅಲ್ಲ. ವಾಸ್ತವವಾಗಿ ಆಪ್‌ನಲ್ಲಿ ಜನರಿಗೆ ಸಂಬಂಧಿಸಿದ ಮಾಹಿತಿಗಳನ್ನು ಕದಿಯುತ್ತಿದ್ದಾರೆ.
* ಈ ಮಹಾಮೈತ್ರಿಕೂಟದ ಜನರು ಅವರ ಕುಟುಂಬಗಳು ಮತ್ತು ಸಂಬಂಧಿಕರ ಬದುಕು ಹಸನಾಗಲು ನೆರವಾಗುವಂತೆ ಕೆಲಸ ಮಾಡುತ್ತಿದ್ದಾರೆ. ಅವರಿಗೆ ದೇಶ ಅಥವಾ ಆಂಧ್ರಪ್ರದೇಶದ ಜನರ ಬಗ್ಗೆ ಕಾಳಜಿ ಇಲ್ಲ. ಇದು ಟಿಡಿಪಿ ಆಗಿರಬಹುದು ಅಥವಾ ಜಗನ್ ಮೋಹನ್ ರೆಡ್ಡಿ ಅವರ ವೈಎಸ್‌ಆರ್‌ಸಿಪಿ ಅಥವಾ ಕಾಂಗ್ರೆಸ್ ಆಗಿರಬಹುದು. ಇದು ಭವಿಷ್ಯದಲ್ಲಿನ ಅವರ ದೃಷ್ಟಿಕೋನವಾಗಿದೆ.

* ಚಂದ್ರಬಾಬು ನಾಯ್ಡು ಅವರು 'ಯು-ಟರ್ನ್' ಮತ್ತು ಸ್ಟಿಕ್ಕರ್ ಬಾಬು. ಪೊಲಾವರಂ ಯೋಜನೆಯಲ್ಲಿ ನಾಯ್ಡು ಅವರು ಭ್ರಷ್ಟಾಚಾರ ನಡೆಸಿದ್ದಾರೆ.
* ಕಳೆದ ಐದು ವರ್ಷಗಳಲ್ಲಿ ಯಾವುದೇ ಹೊಸ ತೆರಿಗೆ ವಿಧಿಸಿಲ್ಲ. ಅಷ್ಟೇ ಅಲ್ಲ. ಇರುವುದನ್ನೂ ಕಡಿಮೆ ಮಾಡಿದ್ದೇವೆ. ಆದರೆ, ಅಭಿವೃದ್ಧಿಯ ವೇಗ ಹೆಚ್ಚಾಗಿದೆ.
* 'ಬಾಹುಬಲಿ' ಚಿತ್ರದ ಬಲ್ಲಾಳದೇವನ ಪಾತ್ರವನ್ನು ನೆನಪಿಸಿಕೊಂಡ ಮೋದಿ, ಚಂದ್ರಬಾಬು ನಾಯ್ಡು ಅವರು ಬಲ್ಲಾಳದೇವನಿದ್ದಂತೆ ಎಂದರು.
* ಐದು ವರ್ಷಗಳಿಂದ ಪೋಲಾವರಂ ಯೋಜನೆ ಆಮೆಗತಿಯಲ್ಲಿ ಸಾಗುತ್ತಿದೆ. ಸೂಕ್ತ ಸಮಯದೊಳಗೆ ಯೋಜನೆಯನ್ನು ಪೂರ್ಣಗೊಳಿಸಲು ಯಾವುದೇ ಉದ್ದೇಶ ಹೊಂದಿಲ್ಲದ ಟಿಡಿಪಿ ಸರ್ಕಾರವೇ ಇದಕ್ಕೆ ಕಾರಣ.
* ಪೊಲಾವರಂ ಯೋಜನೆಗೆ ಕೇಂದ್ರ ಸರ್ಕಾರ ಇದುವರೆಗೂ 7,000 ಕೋಟಿ ರೂಪಾಯಿ ಬಿಡುಗಡೆ ಮಾಡಿದೆ. ಆದರೆ, ಈ ಯೋಜನೆಯನ್ನು ಪೂರ್ಣಗೊಳಿಸಲು ಚಂದ್ರಬಾಬು ನಾಯ್ಡು ಅವರಿಗೆ ಆಸಕ್ತಿ ಇಲ್ಲ. ಟಿಡಿಪಿ ಸರ್ಕಾರ ಈ ಹಣವನ್ನು ಸದ್ಬಳಕೆ ಮಾಡಿಕೊಂಡಿಲ್ಲ. ಈ ಯೋಜನೆ ಮುಗಿದರೆ ಅನೇಕರಿಗೆ ಕುಡಿಯುವ ನೀರು ಮತ್ತು ನೀರಾವರಿ ಸೌಲಭ್ಯ ಸಿಗಲಿದೆ. ಆದರೆ, ಅದಕ್ಕೆ ಟಿಡಿಪಿ ಸರ್ಕಾರ ಅಡೆತಡೆಗಳನ್ನು ಒಡ್ಡುತ್ತಿದೆ.
* ಪೊಲಾವರಂ ಯೋಜನೆ ಅವರ ಪಾಲಿನ ಎಟಿಎಂ ಇದ್ದಂತೆ. ಅದರಿಂದ ಹಣ ಪಡೆದುಕೊಳ್ಳುವುದು ಮತ್ತು ಭ್ರಷ್ಟಾಚಾರ ಮಾಡುವುದು. ಈ ಯೋಜನೆ ರೈತರ ಸಾವು ಮತ್ತು ಬದುಕಿನ ಪ್ರಶ್ನೆಯಾಗಿತ್ತು.
* ಇದರಲ್ಲಿ 'ಯೂ ಟರ್ನ್ ಬಾಬು' ಲಾಭ ಪಡೆಯಲು ಬಯಸಿದ್ದಾರೆ ಎಂಬುದು ಎಲ್ಲರಿಗೂ ತಿಳಿದಿದೆ. ರೈತರ ಬಗ್ಗೆ ಯೋಜನೆ ಮಾಡಲು ನಾಯ್ಡು ಅವರಿಗೆ ಸಮಯವಿಲ್ಲ. ಆದರೆ, ಕೇಂದ್ರ ಸರ್ಕಾರದ ಯೋಜನೆಗಳಿಗೆ ಅವರು ತಮ್ಮ ಸ್ಟಿಕ್ಕರ್‌ಗಳನ್ನು ಹಾಕಿಕೊಳ್ಳುತ್ತಿದ್ದಾರೆ.












Click it and Unblock the Notifications