ಮನ ಕಲಕುವ ದೃಶ್ಯ: ಜೆಸಿಬಿಯಲ್ಲಿ ಕೊರೊನಾ ರೋಗಿಯ ಶವ ಸಾಗಣೆ

ಅಮರಾವತಿ, ಜೂನ್ 27: ಕೊರೊನಾ ಸೋಂಕಿನಿಂದ ಮೃತಪಟ್ಟ ವ್ಯಕ್ತಿಗಳ ಶವವನ್ನು ಜಿಲ್ಲಾಡಳಿತದ ಸಮ್ಮುಖದಲ್ಲಿ ಅಂತ್ಯಸಂಸ್ಕಾರ ಮಾಡಲಾಗುತ್ತದೆ. ದುರಂತ ಅಂದ್ರೆ ಈ ಮಹಾಮಾರಿಯಿಂದ ಮೃತಪಟ್ಟವರೆ ಕುಟುಂಬದವರಿಗೂ ಶವದ ಮುಖ ನೋಡುವ ಅದೃಷ್ಟವೂ ಸಿಗುವುದಿಲ್ಲ.

Recommended Video

      Shivraj Singh Chouhan MP CM visits Mandya's melukote with family | Oneindia Kannada

      ಜಿಲ್ಲಾಡಳಿತ ಸಹ ಕೊರೊನಾದಿಂದ ಸಾವನ್ನಪ್ಪಿದವರ ಶವ ಸಾಗಿಸುವುದು ಹಾಗೂ ಅಂತ್ಯ ಸಂಸ್ಕಾರ ನಡೆಸುವ ವಿಧಾನದಲ್ಲಿ ಬಹಳ ಕಟ್ಟೆಚ್ಚರ ವಹಿಸುತ್ತಾರೆ. ಸಾರ್ವಜನಿಕರಿಗೆ ಹಾಗೂ ಸಂಬಂಧಿಕರಿಗೆ ಹತ್ತಿರಕ್ಕೆ ಸೇರಿಸದೆ ಅಂತಿಮ ವಿಧಾನ ಮಾಡಲಾಗುವುದು.

      ಆದರೆ, ಆಂಧ್ರಪ್ರದೇಶದ ಶ್ರೀಕಾಕುಲಂ ಜಿಲ್ಲೆಯ ಪಟ್ಟಣವೊಂದರಲ್ಲಿ ಕೊರೊನಾದಿಂದ ಮೃತಪಟ್ಟ 70 ವರ್ಷದ ವ್ಯಕ್ತಿಯ ಶವವನ್ನು ಸಾಗಿಸಲು ಜೆಸಿಬಿ ಬಳಸಿರುವ ಘಟನೆ ವರದಿಯಾಗಿದೆ.

      ಈ ವಿಡಿಯೋ ವೈರಲ್ ಆಗಿದ್ದು, ಶವವನ್ನು ಜೆಸಿಬಿಯಲ್ಲಿ ಸಾಗಿಸಲಾಗುತ್ತಿದೆ. ಜೆಸಿಬಿ ಪಕ್ಕದಲ್ಲಿ ಓರ್ವ ಮಹಿಳೆ ಅಳುತ್ತಿರುವ ದೃಶ್ಯ ಹೃದಯ ಹಿಂಡುವಂತಿದೆ.

      Covid 19 Patient Dead Body Disposed Through Jcb, Two Officers Suspended


      ಆಸ್ಪತ್ರೆ ಎಡವಟ್ಟು: ಕೊರೊನಾ ರೋಗಿಯ ಶವ ಅದಲು-ಬದಲು, ಆಮೇಲೆ ಏನಾಯ್ತು?

      ಜಿಲ್ಲಾಡಳಿತ ಈ ನಡೆಗೆ ತೀವ್ರ ವಿರೋಧ ವ್ಯಕ್ತವಾಗಿದೆ. ಮಾನವೀಯತೆ ಮರೆತು ಜೆಸಿಬಿಯಲ್ಲಿ ಶವ ಸಾಗಿಸುತ್ತಿರುವುದಕ್ಕೆ ನೆಟ್ಟಿಗರು ಅಧಿಕಾರಿಗಳನ್ನು ದೂಷಿಸುತ್ತಿದ್ದಾರೆ. ಈ ಹಿನ್ನೆಲೆ ಶವ ಸಾಗಿಸಲು ಜೆಸಿಬಿ ಬಳಕೆ ಮಾಡಿದ ಹಾಗೂ ಅನುಮತಿ ನೀಡಿದ ಇಬ್ಬರು ಅಧಿಕಾರಿಗಳನ್ನು ಅಮಾನತು ಮಾಡಲಾಗಿದೆ ಎಂದು ಶ್ರೀಕಾಕುಲಂ ಜಿಲ್ಲಾಧಿಕಾರಿ ಮಾಹಿತಿ ನೀಡಿದ್ದಾರೆ.

      ಈ ಘಟನೆ ಬಗ್ಗೆ ಆಂಧ್ರ ಪ್ರದೇಶ ಸಿಎಂ ಜಗನ್ ಮೋಹನ್ ರೆಡ್ಡಿ ಸಹ ಬೇಸರ ವ್ಯಕ್ತಪಡಿಸಿದ್ದಾರೆ. ಆದರೆ, ಕೊರೊನಾ ಎಂಬ ಮಹಾಮಾರಿ ಭೀತಿಯಲ್ಲಿರುವಾಗ ಆ ಶವವನ್ನು ಮುಟ್ಟಲು ಯಾರೂ ಮುಂದಾಗುವುದಿಲ್ಲ. ಇಂತಹ ವೇಳೆಯಲ್ಲೂ ಆ ಸಿಬ್ಬಂದಿಗಳು ಅಂತ್ಯಸಂಸ್ಕಾರ ಮಾಡಲು ಪ್ರಯತ್ನ ಮಾಡಿರುವುದನ್ನ ಮಾತ್ರ ಇಲ್ಲಿ ಪರಿಗಣಿಸಬೇಕು ಎಂದು ಕೆಲವರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

      Notifications
      Settings
      Clear Notifications
      Notifications
      Use the toggle to switch on notifications
      • Block for 8 hours
      • Block for 12 hours
      • Block for 24 hours
      • Don't block
      Gender
      Select your Gender
      • Male
      • Female
      • Others
      Age
      Select your Age Range
      • Under 18
      • 18 to 25
      • 26 to 35
      • 36 to 45
      • 45 to 55
      • 55+