ಆಂಧ್ರಪ್ರದೇಶ: ತಿರುಪತಿಯಲ್ಲಿ ಕಡಿಮೆ ತೀವ್ರತೆಯ ಭೂಕಂಪ

ತಿರುಪತಿ, ಏಪ್ರಿಲ್ 03: ದೇಗುಲ ನಗರಿ ತಿರುಪತಿ ಸಮೀಪ ಭಾನುವಾರ ಮುಂಜಾನೆ ಭೂಕಂಪ ಸಂಭವಿಸಿದೆ. ರಿಕ್ಟರ್ ಮಾಪಕದಲ್ಲಿ 3.6 ಪ್ರಮಾಣ ದಾಖಲಾಗಿದೆ. ತಿರುಪತಿಯಿಂದ ಈಶಾನ್ಯಕ್ಕೆ 85 ಕಿ.ಮೀ ದೂರದಲ್ಲಿ ಕಂಪನದ ಅನುಭವವಾಗಿದೆ ಎಂದು ರಾಷ್ಟ್ರೀಯ ಭೂಕಂಪಶಾಸ್ತ್ರ ಕೇಂದ್ರ(NCS) ತಿಳಿಸಿದೆ.

ಸಂಸ್ಥೆಯು ತನ್ನ ಅಧಿಕೃತ ಸಾಮಾಜಿಕ ಮಾಧ್ಯಮ ಖಾತೆಯಿಂದ ಟ್ವೀಟ್ ಮೂಲಕ ಭೂಕಂಪನದ ಬಗ್ಗೆ ಪ್ರಕಟಿಸಿದೆ. ಭಾನುವಾರ ಬೆಳಗಿನ ಜಾವ 1:10 ರ ಸುಮಾರಿಗೆ ಆಂಧ್ರದ ತಿರುಪತಿ ಬಳಿ ಕಂಪನದ ಅನುಭವವಾಗಿದೆ.

"3.6 ತೀವ್ರತೆಯ ಭೂಕಂಪ, 03-04-2022, 01:10:29 IST, ಅಕ್ಷಾಂಶ(Latitude): 14.24 ರೇಖಾಂಶ(Longitude): 79.90, ಆಳ: 20 ಸ್ಥಳ: ಆಂಧ್ರಪ್ರದೇಶದ ತಿರುಪತಿಯಿಂದ ಈಶಾನ್ಯಕ್ಕೆ 85 ಕಿ.ಮೀ " ಎಂದು ರಾಷ್ಟ್ರೀಯ ಭೂಕಂಪಶಾಸ್ತ್ರ ಕೇಂದ್ರವು ಟ್ವೀಟ್ ಮಾಡಿದೆ.

Andhra Pradesh: Low-level earthquake of magnitude 3.6 strikes Tirupati

ಎನ್‌ಸಿಎಸ್ ಪ್ರಕಾರ, ತಿರುಪತಿ ಬಳಿ ಸಂಭವಿಸಿದ ಭೂಕಂಪವು ಗಣನೀಯವಾಗಿ ಕಡಿಮೆ ತೀವ್ರತೆಯನ್ನು ಹೊಂದಿದೆ ಮತ್ತು ಯಾವುದೇ ಹಾನಿಯನ್ನುಂಟು ಮಾಡಿಲ್ಲ. ಆಂಧ್ರಪ್ರದೇಶದಲ್ಲಿ ಸಂಭವಿಸಿದ ಭೂಕಂಪದಿಂದ ಇಲ್ಲಿಯವರೆಗೆ ಯಾವುದೇ ಆಸ್ತಿ-ಪಾಸ್ತಿ ಹಾನಿ ಅಥವಾ ಪ್ರಾಣ ಹಾನಿ ವರದಿಯಾಗಿಲ್ಲ ಎಂದು ಹೇಳಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+