ವಿಡಿಯೋ: ಗುಜರಾತ್‌ನಲ್ಲಿ ರಾಹುಲ್ ಗಾಂಧಿಗೆ ಸಿಕ್ತು ಮುತ್ತಿನ ಸ್ವಾಗತ

ವಲ್ಸದ್, ಫೆಬ್ರವರಿ 14: ಸಾಮಾನ್ಯವಾಗಿ ಅತಿಥಿಗಳು ವೇದಿಕೆ ಮೇಲೆ ಬರುತ್ತಿದ್ದಂತೆ, ಹೂವಿನ ಹಾರವೋ, ಬೊಕ್ಕೆಯನ್ನೋ ನೀಡುವುದು ಸಾಮಾನ್ಯ ಆದರೆ ಎಐಸಿಸಿ ರಾಹುಲ್ ಗಾಂಧಿ ವೇದಿಕೆಗೆ ಬರುತ್ತಿದ್ದಂತೆಯೇ ಮೊದಲು ಮಹಿಳೆಯೊಬ್ಬಳು ಅವರ ಕೆನ್ನೆಯನ್ನು ಚುಂಬಿಸಿ ಬಳಿಕ ಹೂವಿನ ಹಾರ ಹಾಕಿ ಸ್ವಾಗತಿಸಿದ ಘಟನೆ ಗುಜರಾತ್‌ನಲ್ಲಿ ಇಂದು ನಡೆಯಿತು.

ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ ಹಾಗೂ ಎಐಸಿಸಿ ಪ್ರಧಾನ ಕಾರ್ಯದರ್ಶಿ ಪ್ರಿಯಾಂಕಾ ಗಾಂಧಿ ವಾದ್ರಾ ಅವರು ಗುಜರಾತ್, ಉತ್ತರ ಪ್ರದೇಶ ಸೇರಿದಂತೆ ಹಲವು ಕಡೆ ಕಾಂಗ್ರೆಸ್ ಮೆರವಣಿಗೆಯನ್ನು ಹಮ್ಮಿಕೊಂಡಿದ್ದಾರೆ. ಅದರ ಭಾಗವಾಗಿ ಗುಜರಾತ್‌ನ ವಲ್ಸದ್‌ನಲ್ಲಿ ಇಂದು ಸಭಾ ಕಾರ್ಯಕ್ರಮವನ್ನು ಹಮ್ಮಿಕೊಂಡಿದ್ದರು.

Video: A woman kisses Congress President Rahul Gandhi during a rally in Valsad

ಎಲ್ಲ ಅತಿಥಿಗಳಂತೆಯೇ ರಾಹುಲ್ ವೇದಿಕೆಗೆ ಬಂದು ಕುಳಿತುಕೊಳ್ಳಲು ಮುಂದಾದರು ಅಷ್ಟರೊಳಗೆ ಬೊಕ್ಕೆ, ಹೂವಿನ ಹಾರವನ್ನು ಹಿಡಿದುಕೊಂಡು ಮಹಿಳೆಯರ ಗುಂಪೊಂದು ಬಂದಿತು, ಆಗ ರಾಹುಲ್ ಎದ್ದು ನಿಲ್ಲುತ್ತಿದ್ದಂತೆಯೇ ಮಹಿಳೆಯೊಬ್ಬರು ರಾಹುಲ್ ಅವರ ಮುಖವನ್ನು ಹಿಡಿದು ಕೆನ್ನೆಗೆ ಮುತ್ತು ಕೊಟ್ಟೇ ಬಿಟ್ಟರು. ರಾಹುಲ್ ಆಶ್ಚರ್ಯದಿಂದ ನೋಡುತ್ತಾ ಕುಳಿತೇ ಬಿಟ್ಟರು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+