ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

'ಎಲ್ಲ ಮೋದಿಗಳು ಕಳ್ಳರು' ಹೇಳಿಕೆ: ತಪ್ಪಿತಸ್ಥ ಅಲ್ಲ ಎಂದು ರಾಹುಲ್ ಸಮರ್ಥನೆ

|
Google Oneindia Kannada News

ಸೂರತ್, ಅಕ್ಟೋಬರ್ 10: 'ಎಲ್ಲ ಕಳ್ಳರ ಸರ್‌ನೇಮ್‌ನಲ್ಲಿ ಮೋದಿ ಎಂದೇ ಏಕೆ ಇದೆ?' ಎಂಬ ಹೇಳಿಕೆ ನೀಡಿದ್ದಾಗಿ ಮಾನಹಾನಿ ಮೊಕದ್ದಮೆ ಎದುರಿಸುತ್ತಿರುವ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ತಾವು ತಪ್ಪು ಮಾಡಿಲ್ಲ ಎಂದು ಪ್ರತಿಪಾದಿಸಿದ್ದಾರೆ.

ಗುಜರಾತ್‌ನ ಸೂರತ್‌ನಲ್ಲಿರುವ ಚೀಫ್ ಜುಡಿಷಿಯಲ್ ಮ್ಯಾಜಿಸ್ಟ್ರೇಟ್ ಬಿಎಚ್ ಕಪಾಡಿಯಾ ಅವರ ಎದುರು ಗುರುವಾರ ಹಾಜರಾದ ರಾಹುಲ್ ಗಾಂಧಿ, ಪಶ್ಚಿಮ ಸೂರತ್‌ನ ಬಿಜೆಪಿ ಶಾಸಕ ಪೂರ್ಣೇಶ್ ಮೋದಿ ಅವರು ದಾಖಲಿಸಿರುವ ಆರೋಪವನ್ನು ಒಪ್ಪಿಕೊಳ್ಳುತ್ತೀರೋ ಅಥವಾ ಇಲ್ಲವೋ ಎಂಬ ಪ್ರಶ್ನೆಗೆ ತಾವು ತಪ್ಪಿತಸ್ಥರಲ್ಲ ಎಂದು ಉತ್ತರಿಸಿದರು.

ಸೋಲಿನಿಂದ ರಾಹುಲ್ ಗಾಂಧಿ ಪಲಾಯನ: ಒಪ್ಪಿಕೊಂಡ ಕಾಂಗ್ರೆಸ್ಸೋಲಿನಿಂದ ರಾಹುಲ್ ಗಾಂಧಿ ಪಲಾಯನ: ಒಪ್ಪಿಕೊಂಡ ಕಾಂಗ್ರೆಸ್

ರಾಹುಲ್ ಅವರು ಹೇಳಿಕೆ ದಾಖಲಿಸಿದ ಬಳಿಕ ಅವರ ಪರ ವಕೀಲರು ರಾಹುಲ್ ಈ ಪ್ರಕರಣದ ವಿಚಾರಣೆಗೆ ಇನ್ನು ಮುಂದೆ ಖುದ್ದಾಗಿ ಹಾಜರಾಗುವುದರಿಂದ ವಿನಾಯಿತಿ ನೀಡಬೇಕು ಎಂದು ಮನವಿ ಸಲ್ಲಿಸಿದರು. ಇದಕ್ಕೆ ಮೋದಿ ಪರ ವಕೀಲರು ಆಕ್ಷೇಪಣೆ ಸಲ್ಲಿಸಿದ್ದರು. ಈ ಅರ್ಜಿಯ ಬಗ್ಗೆ ಡಿ. 10ರಂದು ನಿರ್ಧಾರ ಪ್ರಕಟಿಸುವುದಾಗಿ ನ್ಯಾಯಾಲಯ ತಿಳಿಸಿತು.

 Thieves Have Modi Surname Congress Leader Rahul Gandhi Pleads Not Guilty

ಲೋಕಸಭೆ ಚುನಾವಣೆಯ ವೇಳೆ ಕೋಲಾರದಲ್ಲಿ ಏಪ್ರಿಲ್ 13ರಂದು ಪ್ರಚಾರ ನಡೆಸುತ್ತಿದ್ದ ರಾಹುಲ್ ಗಾಂಧಿ, 'ನೀರವ್ ಮೋದಿ, ಲಲಿತ್ ಮೋದಿ, ನರೇಂದ್ರ ಮೋದಿ... ಇವರೆಲ್ಲರೂ ಒಂದೇ ಸರ್‌ನೇಮ್ ಹೊಂದಿದ್ದಾರೆ. ಎಲ್ಲ ಕಳ್ಳರ ಹೆಸರೂ ಮೋದಿ ಎಂಬ ಸರ್‌ನೇಮ್ ಹೊಂದಿರುವುದು ಹೇಗೆ?' ಎಂದು ವ್ಯಂಗ್ಯವಾಡಿದ್ದರು.

ರಾಹುಲ್ ಬಣ Vs ಸೋನಿಯಾ ಬಣ: ಕಾಂಗ್ರೆಸ್‌ನಲ್ಲಿ ಮುಸುಕಿನ ಗುದ್ದಾಟ ರಾಹುಲ್ ಬಣ Vs ಸೋನಿಯಾ ಬಣ: ಕಾಂಗ್ರೆಸ್‌ನಲ್ಲಿ ಮುಸುಕಿನ ಗುದ್ದಾಟ

ರಾಹುಲ್ ಗಾಂಧಿ ವಿರುದ್ಧ ಮಾನಹಾನಿ ಮೊಕದ್ದಮೆ ಹೂಡಿದ್ದ ಪೂರ್ಣೇಶ್ ಮೋದಿ, ರಾಹುಲ್ ಗಾಂಧಿ ಅವರು ಈ ಮೂಲಕ ಇಡೀ ಮೋದಿ ಸಮುದಾಯಕ್ಕೆ ಅವಮಾನ ಮಾಡಿದ್ದಾರೆ ಎಂದು ಆರೋಪಿಸಿದ್ದರು.

English summary
Congress leader Rahul Gandhi on Thursday pleaded not guilty in defamation case against him for 'Why do all thieves share the Modi surname' remarks.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X