ಹೂಡಿಕೆದಾರರ ಬೃಹತ್ ಸಮಾವೇಶ: 3 ದಿನ ಗುಜರಾತಿನಲ್ಲಿ ಮೋದಿ
ಗಾಂಧಿನಗರ, ಜನವರಿ 17: ಗುಜರಾತಿನ ಗಾಂಧಿನಗರದಲ್ಲಿ ಜನವರಿ 18-20 ರವರೆಗೆ ನಡೆಯಲಿರುವ ಮೂರು ದಿನಗಳ ವೈಬ್ರಂಟ್ ಗುಜರಾತ್ ಜಾಗತಿಕ ಸಮಿತಿಯನ್ನು ಪ್ರಧಾನಿ ನರೇಂದ್ರ ಮೋದಿ ಉದ್ಘಾಟಿಸಲಿದ್ದಾರೆ.
ಗುರುವಾರ ಈ ಸಮಾವೇಶವನ್ನು ಮೋದಿ ಉದ್ಘಾಟಿಸಲಿದ್ದು, ನಂತರ ಅಹ್ಮದಾಬಾದಿನಲ್ಲಿ ಹೊಸದಾಗಿ ಕಟ್ಟಲಾದ ಆಸ್ಪತ್ರೆಯೊಂದನ್ನು ಅವರು ಉದ್ಘಾಟಿಸಲಿದ್ದಾರೆ.
ನಂತರ ಸಬರಮತಿ ನದಿಯ ಎದುರಲ್ಲಿ ನಡೆಯಲಿರುವ ಶಾಪಿಂಗ್ ಹಬ್ಬವನ್ನೂ ಅವರು ಉದ್ಘಾಟಿಸಲಿದ್ದು, ಇದು ಸಂಜೆ ನಡೆಯಲಿದೆ.

ಜನವರಿ 18 ರ ಬೆಳಗ್ಗಿನಿಂದ ಆರಂಭವಾಗುವ ಜಾಗತಿಕ ಹೂಡಿಕೆದಾರರ ಸಮಾವೇಶದಲ್ಲಿ ಐದು ದೇಶಗಳ, 30000 ಕ್ಕೂ ಹೆಚ್ಚು ಪ್ರತಿನಿಧಿಗಳು ಭಾಗವಹಿಸಲಿದ್ದಾರೆ. ಹಲವರು ಪ್ರತಿಷ್ಠಿತ ಕಂಪನಿಗಳ ಆಯಕಟ್ಟಿನ ಹುದ್ದೆಯಲ್ಲಿರುವವರೂ ಭಾಗವಹಿಸಲಿದ್ದಾರೆ.
ಮುಖೇಶ್ ಅಂಬಾನಿ, ಉದಯ್ ಕೋಟಕ್, ಕುಮಾರ್ ಮಂಗಲಂ ಬಿರ್ಲಅ, ಗೌತಮ್ ಅದಾನಿ, ಆದಿ ಗೋದ್ರೇಜ್, ಪಂಕಜ್ ಪಟೇಲ್ ಸೇರಿದಂತೆ ಭಾರತದ ಶ್ರೀಮಂತ ಉದ್ಯಮಿಗಳು ಭಾಗವಹಿಸಲಿದ್ದಾರೆ.












Click it and Unblock the Notifications