ಮಾಸ್ಕ್ ಧರಿಸದವರು ಇನ್ಮುಂದೆ ಕೋವಿಡ್ ಕೇಂದ್ರಗಳಲ್ಲಿ ಸಮುದಾಯ ಸೇವೆ: ಹೈಕೋರ್ಟ್ ಸೂಚನೆ

ಅಹಮದಾಬಾದ್, ಡಿಸೆಂಬರ್ 2: ಫೇಸ್ ಮಾಸ್ಕ್ (ಮುಖಗವಸು) ಧರಿಸದೇ ಸಿಕ್ಕಿಬಿದ್ದವರನ್ನು ರಾಜ್ಯದ ಯಾವುದೇ ಕೋವಿಡ್ ಆರೈಕೆ ಕೇಂದ್ರದಲ್ಲಿ, ಸಮುದಾಯ ಸೇವೆಗಾಗಿ ಕಳುಹಿಸುವ ನೀತಿಯನ್ನು ಸಿದ್ಧಪಡಿಸುವಂತೆ ಗುಜರಾತ್ ಹೈಕೋರ್ಟ್ ಬುಧವಾರ ರಾಜ್ಯ ಸರ್ಕಾರಕ್ಕೆ ನಿರ್ದೇಶನ ನೀಡಿದೆ.

ಗುಜರಾತ್ ಉಚ್ಚ ನ್ಯಾಯಾಲಯವು ತನ್ನ ಆದೇಶದಲ್ಲಿ, ""ಕೋವಿಡ್ ನಿಯಮ ಉಲ್ಲಂಘಿಸುವವರು ರಾಜ್ಯದ ಯಾವುದೇ ಕೋವಿಡ್-ಆರೈಕೆ ಕೇಂದ್ರದಲ್ಲಿ ಐದರಿಂದ ಹದಿನೈದು ದಿನಗಳವರೆಗೆ ದಿನಕ್ಕೆ ಕನಿಷ್ಠ ನಾಲ್ಕರಿಂದ ಐದು ಗಂಟೆಗಳ ವೈದ್ಯಕೀಯೇತರ ಕರ್ತವ್ಯವನ್ನು ಮಾಡುವಂತೆ ಪ್ರಾಧಿಕಾರ ನಿರ್ಧರಿಸಬೇಕು'' ಎಂದು ಹೇಳಿದೆ.

ಮಾಸ್ಕ್ ಧರಿಸದೇ ನಿಯಮ ಉಲ್ಲಂಘಿಸುವವರು ಸ್ವಚ್ಛಗೊಳಿಸುವಿಕೆ, ಮನೆಗೆಲಸ, ಅಡುಗೆ, ಸಹಾಯ, ಸೇವೆ, ದಾಖಲೆ ಸಿದ್ಧಪಡಿಸುವುದು, ದತ್ತಾಂಶ, ಕೀಪಿಂಗ್ ಮುಂತಾದ ಕೆಲಸಗಳನ್ನು ಮಾಡಬೇಕಾಗುತ್ತದೆ ಎಂದು ತಿಳಿಸಿದೆ.

 Offer Community Service In Covid Centers For Those Who Dont Wear The Mask: Gujarath High Court

ಈ ಎಲ್ಲಾ ಸೇವೆಗಳು ದಂಡದ ಜೊತೆಗೆ ಇರುತ್ತದೆ. ನಿಯೋಜಿಸಲಾದ ಕರ್ತವ್ಯದ ಸ್ವರೂಪವು ಉಲ್ಲಂಘಿಸುವವರ ವಯಸ್ಸು, ಅರ್ಹತೆ, ಲಿಂಗ ಮತ್ತು ಸ್ಥಿತಿಯ ಆಧಾರದ ಮೇಲೆ ಇರುತ್ತದೆ.

ಹೈಕೋರ್ಟ್ ನ ಆದೇಶ ಅನುಸರಣೆಗೆ ಸಂಬಂಧಿಸಿದಂತೆ ಡಿಸೆಂಬರ್ 24 ರಂದು ಗುಜರಾತ್ ರಾಜ್ಯ ಸರ್ಕಾರ ಸ್ಥಿತಿ ವರದಿಯನ್ನು ಸಲ್ಲಿಸಬೇಕಾಗುತ್ತದೆ. ವಿಶಾಲ್ ಅವತಾನಿಯ ಮನವಿಗೆ ಪ್ರತಿಕ್ರಿಯೆಯಾಗಿ ನ್ಯಾಯಾಲಯದ ಈ ನಿರ್ದೇಶನ ನೀಡಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+