ಲೂಡೋ ಆಟದಲ್ಲಿ ಸತತವಾಗಿ ಸೋಲಿಸಿದ ಪತ್ನಿಯ ಬೆನ್ನುಮೂಳೆ ಮುರಿದ ಪತಿ

ಅಹಮದಾಬಾದ್, ಏಪ್ರಿಲ್ 29: ಕೊರೊನಾ ಲಾಕ್‌ಡೌನ್ ಇರುವ ಕಾರಣ ಮನೆಯಲ್ಲಿಯೇ, ಕೇರಂ, ಚೆಸ್ ಹಾಗೆಯೇ ಆನ್‌ಲೈನ್ ಗೇಮ್‌ಗಳನ್ನು ಆಡುತ್ತಿದ್ದಾರೆ.

ಹಾಗೆಯೇ ಆನ್‌ಲೈನ್ ನಲ್ಲಿ ಲೂಡೋ ಆಟದಲ್ಲಿ ಸತತ ಗೆದ್ದು ಸೋಲಿಸಿದ್ದಕ್ಕೆ ಕೋಪಗೊಂಡ ಪತಿ ಪತ್ನಿಯ ಬೆನ್ನು ಮೂಳೆ ಮುರಿದಿರುವ ಘಟನೆ ವರದಿಯಾಗಿದೆ.

ಗುಜರಾತ್ ನ ವಡೋದರದ ವೆಮಾಲಿಯಲ್ಲಿ ಮಹಿಳೆಯೊಬ್ಬಳು ಗಂಡ ಹೊರಗೆ ಹೋಗದಿರಲೆಂದು ಆತನಿಗೆ ಮೊಬೈಲ್ ​ನಲ್ಲಿ ಲೂಡೋ ಗೇಮ್ ಆಡುವುದನ್ನು ಕಲಿಸಿದಳು.

Man Thrashes Wife Injures Spine After Losing Ludo Game

ಆ ಮೇಲೆ ಅವರಿಬ್ಬರೂ ಟೈಂಪಾಸ್​ಗೆಂದು ಆನ್​ಲೈನ್​ನಲ್ಲಿ ಲೂಡೋ ಆಡುತ್ತಿದ್ದರು. ಲೂಡೋದಲ್ಲಿ ಸದಾ ಹೆಂಡತಿಯೇ ಮೊದಲು ಗೆಲ್ಲುತ್ತಿದ್ದಳು. ಅಲ್ಲದೆ, ಗಂಡನನ್ನು ಸೋಲಿಸಿ ಮುಂದೆ ಹೋಗುತ್ತಿದ್ದಳು. ಇದರಿಂದ ಕೋಪಗೊಂಡಿದ್ದ ಗಂಡ ಆಕೆಯೊಂದಿಗೆ ಜಗಳವಾಡುತ್ತಿದ್ದ.

ಕೆಲವೊಮ್ಮೆ ಇದೇ ವಿಷಯಕ್ಕೆ ಜಗಳ ಅತಿರೇಕಕ್ಕೆ ಹೋಗುತ್ತಿತ್ತು. ಇದರಿಂದ ಕೋಪಗೊಂಡಿದ್ದ ಗಂಡ ಆಕೆಯೊಂದಿಗೆ ಜಗಳವಾಡುತ್ತಿದ್ದ. ಕೆಲವೊಮ್ಮೆ ಇದೇ ವಿಷಯಕ್ಕೆ ಜಗಳ ಅತಿರೇಕಕ್ಕೆ ಹೋಗುತ್ತಿತ್ತು. ಪದೇಪದೇ ಹೆಂಡತಿಯಿಂದ ಲೂಡೋದಲ್ಲಿ ಸೋಲನ್ನು ಅನುಭವಿಸುತ್ತಿದ್ದುದರಿಂದ ಕೋಪಗೊಂಡ ಗಂಡ ಆಕೆಗೆ ಜೋರಾಗಿ ಥಳಿಸಿದ್ದಾನೆ.

ಒಂದೆಡೆ ಮಾರಕ ಕೊರೊನಾ ವೈರಸ್ ನಿಂದಾಗಿ ಇಡೀ ದೇಶ ಲಾಕ್ ಡೌನ್ ಆಗಿದ್ದು, ಕೆಲಸ ವಿಲ್ಲದೆ ಗಂಡಂದಿರು ಅನಿವಾರ್ಯವಾಗಿ ಮನೆಯಲ್ಲಿಯೇ ಕುಳಿತುಕೊಳ್ಳಬೇಕಿದೆ. ಲಾಕ್ ಡೌನ್ ಹೇರಿರುವ ಕಾರಣ ಟೈಮ್ ಪಾಸ್ ಗಾಗಿ ಎಲ್ಲೂ ಹೊರಗಡೆ ಹೋಗುವಂತಿಲ್ಲ.

ಹೀಗಾಗಿ ಎಲ್ಲರೂ ಮೊಬೈಲ್ ಗೇಮ್ ಗಳ ಮೊರೆ ಹೋಗುತ್ತಿದ್ದು, ಇದೀಗ ಇದೇ ಮೊಬೈಲ್ ಗೇಮ್ ನಿಂದಾಗಿ ಪತಿಯೊಬ್ಬ ತನ್ನ ಪತ್ನಿಯ ಬೆನ್ನು ಮೂಳೆ ಮುರಿದು ಹಾಕಿದ್ದಾನೆ.

ಪದೇಪದೆ ಹೆಂಡತಿಯಿಂದ ಲೂಡೋದಲ್ಲಿ ಸೋಲನ್ನು ಅನುಭವಿಸುತ್ತಿದ್ದುದರಿಂದ ಕೋಪಗೊಂಡ ಗಂಡ ಆಕೆಗೆ ಜೋರಾಗಿ ಥಳಿಸಿದ್ದಾನೆ. ಈ ವೇಳೆ ಹೆಂಡತಿಯ ಬೆನ್ನಿನ ಭಾಗಕ್ಕೆ ಬಲವಾದ ಪೆಟ್ಟು ಬಿದ್ದಿದ್ದು, ಮಹಿಳೆ ನೋವಿನಿಂದ ನರಳುತ್ತಿದ್ದಳು. ಕೂಡಲೇ ಆಕೆಯನ್ನು ಆಸ್ಪತ್ರೆಗೆ ಕರೆದುಕೊಂಡು ಹೋದಾಗ ಬೆನ್ನು ಮೂಳೆ ಮುರಿದಿದೆ ಎಂದು ವೈದ್ಯರು ಹೇಳಿದ್ದಾರೆ.

ಕೂಡಲೇ ಮಹಿಳೆ ಗುಜರಾತ್ ಸರ್ಕಾರದ ಅಭಯಮ್ ಮಹಿಳಾ ಸಹಾಯವಾಣಿಗೆ ಕರೆ ಮಾಡಿದ್ದು, ಸ್ಥಳಕ್ಕಾಗಮಿಸಿದ ಅಭ್ಯಮ್ ಅಧಿಕಾರಿ ಚಂದ್ರಕಾಂತ್ ಮಕ್ವಾನಾ ಅವರು ಸ್ಥಳಕ್ಕಾಗಮಿಸಿ ಪರಿಶೀಲನೆ ನಡೆಸಿದ್ದಾರೆ. ಪ್ರಸ್ತುತ ಮಹಿಳೆ ಗಂಡನ ವಿರುದ್ಧ ದೂರು ದಾಖಲಿಸಲು ಹಿಂದೇಟು ಹಾಕಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+