ಕೋರ್ಟ್ ವಿಚಾರಣೆ ವೇಳೆಯೇ ಧೂಮಪಾನ ಮಾಡಿ ಸಿಕ್ಕಿಬಿದ್ದ ವಕೀಲ

ಅಹಮದಾಬಾದ್, ಸೆಪ್ಟೆಂಬರ್ 25: ಕೋರ್ಟ್ ವಿಚಾರಣೆ ವೇಳೆಯೇ ಧೂಮಪಾನ ಮಾಡಿ ವಕೀಲರೊಬ್ಬರು ಸಿಕ್ಕಿಬಿದ್ದು, ಕೋರ್ಟ್ 10 ಸಾವಿರ ರೂ. ದಂಡ ವಿಧಿಸಿದೆ.

ಕೊರೊನಾನಾ ವೈರಸ್​ ಹಿನ್ನೆಲೆಯಲ್ಲಿ ಎಲ್ಲಾ ಕೋರ್ಟ್​ಗಳೂ ವಿಡಿಯೋ ಕಾನ್ಫರೆನ್ಸ್​ ಮೂಲಕ ವಿಚಾರಣೆ ನಡೆಸಿದ್ದವು. ಇದೀಗ ಕೆಲವು ಕೋರ್ಟ್​ಗಳು ಕಲಾಪ ಆರಂಭಿಸಿದ್ದರೂ ಇನ್ನು ಕೆಲವೆಡೆ ಕೋರ್ಟ್​ಗಳು ತೆರೆದಿಲ್ಲ.

ವಕೀಲಿ ವೃತ್ತಿಗೆ ಅವಮಾನ ಮಾಡುವ ರೀತಿಯಲ್ಲಿ ನಡೆದುಕೊಳ್ಳುತ್ತಿದ್ದಾರೆ, ಈ ವೃತ್ತಿಯ ಮರ್ಯಾದೆ ಕಳೆಯುತ್ತಿರುವುದು ತುಂಬಾ ವಿಷಾದಕರ ಎಂದಿರುವ ನ್ಯಾಯಮೂರ್ತಿಗಳು ಅಜ್ಮೇರಾ ಅವರಿಗೆ 10 ಸಾವಿರ ರೂಪಾಯಿ ದಂಡ ವಿಧಿಸಿದ್ದಾರೆ.

Gujarat Lawyer Caught Smoking During Virtual Hearing

ಇದೊಂದು ಅತ್ಯಂತ ಬೇಜವಾಬ್ದಾರಿಯ ವರ್ತನೆ. ವಕೀಲರ ಇಂತಹ ನಡವಳಿಕೆಯನ್ನು ಕಟ್ಟುನಿಟ್ಟಾಗಿ ಖಂಡಿಸುವ ಅಗತ್ಯವಿದೆ ಎಂದು ನ್ಯಾಯಮೂರ್ತಿಗಳು ಅಭಿಪ್ರಾಯ ಪಟ್ಟರು.

ಜೆ.ವಿ.ಅಜ್ಮೇರಾ ಎಂಬ ಅಹಮದಾಬಾದ್​ ವಕೀಲನೊಬ್ಬ, ಕಾರು ಚಲಾಯಿಸುತ್ತಾ ವಿಚಾರಣೆ ಹಾಜರಾಗಿದ್ದು ಮಾತ್ರವಲ್ಲದೇ, ವಿಚಾರಣೆ ಸಂದರ್ಭದಲ್ಲಿಯೇ ಧೂಮಪಾನ ಮಾಡುತ್ತಿದ್ದರು. ಇದನ್ನು ಗಮನಿಸಿದ ನ್ಯಾಯಮೂರ್ತಿ ಎ.ಎಸ್.ಸುಪೇಹಿಯಾ ಕೆಂಡಾಮಂಡಲವಾಗಿದ್ದಾರೆ.

ವಿಚಾರಣೆ ವೇಳೆ ಹಲವಾರು ವಕೀಲರು ಅಸಂಬದ್ಧ ರೀತಿಯಲ್ಲಿ ನಡೆದುಕೊಳ್ಳುತ್ತಿರುವುದು ವರದಿಯಾಗಿದೆ. ಟೀ ಸೇವನೆ ಮಾಡುತ್ತಾ, ಕಾರು ಚಲಾಯಿಸುತ್ತಾ, ಹೀಗೆ ವಕೀಲಿ ವೃತ್ತಿಗೆ ಅವಮಾನ ಆಗುವ ರೀತಿಯಲ್ಲಿ ನಡೆದುಕೊಂಡಿರುವ ಬಗ್ಗೆ ಕೆಲವು ಕಡೆಗಳಲ್ಲಿ ವರದಿಯಾಗಿದೆ.

ಹಿರಿಯ ವಕೀಲ ರಾಜೀವ್ ಧವನ್ ಕೂಡ ಧೂಮಪಾನ ಮಾಡುತ್ತಿದ್ದುದು ಹಾಗೂ ಇನ್ನೊಬ್ಬ ವಕೀಲ ಗುಟ್ಕಾ ತಿನ್ನುತ್ತ ವಿಚಾರಣೆಗೆ ಹಾಜರಾಗಿ ಸುಪ್ರೀಂಕೋರ್ಟ್​ನಿಂದ ಛೀಮಾರಿ ಹಾಕಿಸಿಕೊಂಡಿದ್ದರು. ಕೆಲವು ಕಡೆ ಕಪ್ಪು ಸಮವಸ್ತ್ರ ಧರಿಸಿ ವಿಚಾರಣೆಗೆ ಬರುವುದರಿಂದ ವಿನಾಯಿತಿ ನೀಡಲಾಗಿತ್ತು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+