ಮದ್ಯ ತುಟ್ಟಿ:ಪೆಗ್ ಏರಿಸುವ ಮುನ್ನವೇ ಗ್ರಾಹಕ ಟೈಟ್
ಬೆಂಗಳೂರು, ಆ 5: ಸರಕಾರ ಯಾವುದೇ ಇರಲಿ ದೈನಂದಿನ ಪದಾರ್ಥಗಳು, ದ್ರವ್ಯಗಳು, ತೈಲ ಉತ್ಪನ್ನಗಳ ಬೆಲೆಗಳು ರಾಜ್ಯದ ಜಲಾಶಯಗಳ ಮಟ್ಟ ತುಂಬಿದಂತೆ ಏರುತ್ತಿದ್ದಯೇ ಹೊರತು ಇಳಿಮುಖ ಕಾಣುತ್ತಿಲ್ಲ.
ತರಕಾರಿ, ದಿನಸಿ ಪದಾರ್ಥಗಳ ಬೆಲೆ ಗಗನಮುಖಿಯಾಗಿ ಜನರ ದೈನಂದಿನ ಬದುಕಿನ ಖರ್ಚಿನ ಲೆಕ್ಕಾಚಾರ ಹಳಿ ತಪ್ಪುತ್ತಿದೆ. ಐನೂರು ರೂಪಾಯಿಯ ನೋಟು ಚಿಲ್ಲರೆ ಮಾಡಿಸಿದರೆ ಅದು ಹೇಗೆ ಖರ್ಚಾಯಿತು ಎಂದು ತಲೆ ಕೆಡಿಸಿಕೊಂಡು ಕೂರ ಬೇಕೇ ಹೊರತು ದುಡ್ಡಿಗೆ ಬೆಲೆ ಇಲ್ಲದಂತಾಗಿದೆ.
ವಾರಕ್ಕೊಮ್ಮೆಯಂತೆ ತೈಲ ಉತ್ಪನ್ನಗಳ ಬೆಲೆ ಏರಿಕೆ ಬರುಬರುತ್ತಾ ಜನರಿಗೆ ಮಾಮೂಲು ಎನಿಸಿದೇ ಬೇರೆ ದಾರಿ ಇಲ್ಲದಂತಾಗಿದೆ. ಹತ್ತರ ಜೊತೆ ಹನ್ನೊಂದರಂತೆ ಈಗ ಎಣ್ಣೆ ಉತ್ಪನ್ನಗಳ ಬೆಲೆ ಕೂಡ ಗಗನಮುಖಿಯಾಗಿದೆ.
ಇದು ಪಾನಪ್ರಿಯರಿಗೆ ಒಂದು ರೀತಿ ಪೆಗ್ ಏರಿಸುವ ಮುನ್ನವೇ ಫುಲ್ ಟೈಟಾದಂತೆ. ರಾಜ್ಯದ ಶ್ರೀಮಂತ ಇಲಾಖೆಗಳಲ್ಲಿ ಒಂದಾದ ಅಬಕಾರಿ ಇಲಾಖೆ ಮದ್ಯದ ಬೆಲೆಗಳನ್ನು ಹಿಗ್ಗಾಮುಗ್ಗ ಏರಿಸಿದೆ. ಇದು ಬಜೆಟ್ ಪರಿಣಾಮ, ಮದ್ಯದ ಮೇಲಿನ ಅಬಕಾರಿ ಸುಂಕವನ್ನು 17 ಸ್ಲ್ಯಾಬ್ ಗಳಿಗೆ ಶೇ 16 ರಿಂದ ಶೇ 40ಕ್ಕೆ ಏರಿಕೆ ಮಾಡಲಾಗಿತ್ತು
ದಿನಾಂಕ ಆಗಸ್ಟ್ 1, 2013ರಿಂದ ಅನ್ವಯವಾಗುವಂತೆ ಮದ್ಯದ ಬೆಲೆಗಳು ಶೇ.15ರಿಂದ ಶೇ.25ರ ವರೆಗೆ ಏರಿಕೆಯಾಗಿದೆ. ಸಗಟು ವ್ಯಾಪಾರದಿಂದ ಹಿಡಿದು ಚಿಲ್ಲರೆ ವ್ಯಾಪಾರದ ವರೆಗೆ ಮದ್ಯದ ಬೆಲೆ ಈ ಪಾಟಿ ಹೆಚ್ಚಾಗಿದೆ. ಹಾಗಾಗಿ ಮದ್ಯ ಪ್ರಿಯರು ಗಡಂಗ್ (ಬಾರ್) ಹೋಗುವ ಮುನ್ನ ಒಂದು ಕ್ಷಣ ಯೋಚಿಸಿ, ಇಲ್ಲವೇ ಒಂದು ಪೆಗ್ ಕಮ್ಮಿ ಏರಿಸಿ ಎನ್ನುವುದು ನಮ್ಮ ಕಡೆಯಿಂದ ಪುಕ್ಕಟೆ ಸಲಹೆ.
ಕೆಲವೊಂದು ಮದ್ಯದ ಪರಿಷ್ಕೃತ ದರ ಸ್ಲೈಡಿನಲ್ಲಿದೆ. ಒಂದೊಂದು ಮದ್ಯದ ಅಂಗಡಿಯಲ್ಲಿ ಬೆಲೆಗಳು ಬೇರೆ ಬೇರೆ ರೀತಿ ಇರುವುದರಿಂದ ಪಟ್ಟಿಯಲ್ಲಿ ಕೊಡಲಾದ ಬೆಲೆಗಳು ಕರಾರುವಕ್ಕಾದ ಬೆಲೆಗಳಲ್ಲ. ಆವರಣದಲ್ಲಿ ಈಗಿರುವ ಹಳೇ ಬೆಲೆ.

ಬಿಯರ್
ಕಿಂಗ್ ಫಿಷರ್ ಅಲ್ಟ್ರಾ - 135 ರಿಂದ 145/- (120/-)
ಮಿಲ್ಲರ್ ಹೈ ಲೈಫ್ - 120 ರಿಂದ 125/- (100/-)
ನಾಕೌಟ್ - 110 ರಿಂದ 115/- (90/-)
ಹೇವರ್ಡ್ಸ್ - 110 ರಿಂದ 115/- (90/-)
ಫೋಸ್ಟರ್ಸ್ - 110 ರಿಂದ 115/- (90/-)
ಕಿಂಗ್ ಫಿಷರ್ ಸ್ಟ್ರಾಂಗ್ - 110 ರಿಂದ 115/- (90/-)

ವಿಸ್ಕಿ
ಡಿಎಸ್ಪಿ - 105- 110/- (90/-, 180ML)
100 ಪೈಪರ್ಸ್ - 1812 - 1890/- (1576/-, 1000ML)
ವ್ಯಾಟ್ 69 - 1300 - 1360/-(1130/-, 750ML)

ರಮ್
ಹರ್ಕ್ಯುಲಸ್ ಡಿಲಕ್ಸ್ - 605 - 630/- (527/-, 1000ML)
ಖೋಡೇಸ್ XXX - 328 - 345/- (285/-, 1000ML)
ಓಲ್ಡ್ ಮಾಂಕ್ - (374. 750 ML)
ಬಕಾರ್ಡಿ ವೈಟ್ ರಮ್ - 490 - 510/- (425/-, 375ML)
ಮೆಕ್ಡೋವೆಲ್ - 330 - 345/- (285/-, 1000ML)

ಬ್ರಾಂಡಿ
ಮೋಂಟ್ ಕ್ಯಾಸ್ಟಲ್ - 530 - 555/-(463/-, 750ML)
ಮ್ಯಾನ್ಸನ್ ಹೌಸ್ - 530 - 560/-(463/-, 750ML)
ಮೆಕ್ಡೋವೆಲ್ - 40 - 45/- (35/-, 60ML)
ಓಲ್ಡ್ ಎಡ್ಮಿರಲ್ - 280 - 295/- (244/-, 1000ML)

ವೋಡ್ಕಾ
ಸ್ಮಿರ್ನಾಫ್ - 1140 - 1190/-(990/-, 1000ML)
ಸ್ಮಿರ್ನಾಫ್ ಆರೆಂಜ್ - 975 - 1020/-(850, 750ML)
ಮ್ಯಾಜಿಕ್ ಮೂಮೆಂಟ್ - 635 - 665/- (554, 750ML)
ಎರಿಸ್ಟಾಫ್ - 455 - 475/- (395/-, 375ML)
ರೊಮನೋವ್ - 217 - 225/- (189/-, 375ML)












Click it and Unblock the Notifications