ಕರ್ನಾಟಕ ಬಜೆಟ್: ಯಾವುದು ಏರಿಕೆ? ಯಾವುದು ಇಳಿಕೆ?
ಬೆಂಗಳೂರು, ಜು.12: ಅಗತ್ಯ ವಸ್ತುಗಳ ಬೆಲೆ ಏರಿಕೆಗೆ ಕಡಿವಾಣ ಹಾಕಿ ಆರ್ಥಿಕ ಸುಸ್ಥಿರತೆಗೆ ಆದ್ಯತೆ ನೀಡುವ ಕೇಂದ್ರ ಸರ್ಕಾರದ ಬಜೆಟ್ ನ ಪ್ರತಿರೂಪವಾಗಿ ಕಾಂಗ್ರೆಸ್ ಸರ್ಕಾರದ ಚೊಚ್ಚಲ ಬಜೆಟ್ ಅನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಶುಕ್ರವಾರ ಮಂಡಿಸಿದ್ದಾರೆ.
ಲೋಕಸಭೆ ಚುನಾವಣೆ ಸಮೀಪಿಸುತ್ತಿರುವ ಹಿನ್ನೆಲೆಯಲ್ಲಿ ಜನರ ಮೇಲೆ ಹೆಚ್ಚು ಹೊರೆ ಹಾಕದೆ, ಪರಿಶಿಷ್ಟ ಜಾತಿ ಮತ್ತು ಪಂಗಡದವರಿಗೆ ಹೆಚ್ಚು ಅನುಕೂಲ ಕಲ್ಪಿಸುವ ಯತ್ನ ಮಾಡಿದ್ದಾರೆ. ಇಂದು 8ನೇ ಬಾರಿ ಬಜೆಟ್ ಮಂಡಿಸಿದ ಸಿದ್ದರಾಮಯ್ಯ ಅವರು, ಒಟ್ಟು 1 ಲಕ್ಷದ 20 ಸಾವಿರದ 717 ಕೋಟಿ ರುಪಾಯಿ ಗಾತ್ರದ ಬಜೆಟ್ ನಲ್ಲಿ ಶಿಕ್ಷೆಣಕ್ಕೆ ಅತೀ ಹೆಚ್ಚು ಹಣ ಹಂಚಿಕೆ ಮಾಡಿದ್ದಾರೆ.
ನಿರೀಕ್ಷೆಯಂತೆ ಐಷಾರಾಮಿ ವಸ್ತುಗಳು, ತಂಬಾಕು ಪದಾರ್ಥಗಳ ಬೆಲೆ/ ತೆರಿಗೆ ಹೆಚ್ಚಳ ಮಾಡಲಾಗಿದೆ. ಮದ್ಯಪಾನ ಪ್ರಿಯರಿಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಭರ್ಜರಿ ಶಾಕ್ ನೀಡಿದ್ದಾರೆ.

ಯಾವುದು ಏರಿಕೆ?
* ಮದ್ಯದ ಮೇಲಿನ ಅಬಕಾರಿ ಸುಂಕ ಹೆಚ್ಚಳ
* ಅಬಕಾರಿ ಸುಂಕ 17 ಸ್ಲ್ಯಾಬ್ ಗಳಿಗೆ ಶೇ 16 ರಿಂದ ಶೇ 40ಕ್ಕೆ ಏರಿಕೆ
* ಚಲನಚಿತ್ರ ಮಂದಿರಗಳ ತೆರಿಗೆ ರಹಿತ ಸೇವಾ ಶುಲ್ಕ
*ಎಸಿ ಚಲನಚಿತ್ರ ಮಂದಿರಗಳ ತೆರಿಗೆ ರಹಿತ ಸೇವಾ ಶುಲ್ಕ 3 ರು ಏರಿಕೆ
* ನಾನ್ ಎಸಿ ಚಲನಚಿತ್ರ ಮಂದಿರಗಳ ತೆರಿಗೆ ರಹಿತ ಸೇವಾ ಶುಲ್ಕ 2 ರು ಏರಿಕೆ
ಯಾವುದು ಇಳಿಕೆ
* ಶಾಲಾ ಮಕ್ಕಳ ಮ್ಯಾಕ್ಸಿಕ್ಯಾಬ್ ಗಳಿಗೆ ಮೋಟಾರು ವಾಹನ ತೆರಿಗೆಯಲ್ಲಿ ಶೇ. 50ರಷ್ಟು ರಿಯಾಯಿತಿ.
* 300 ರು ಒಳಗಿನ ಪಾದರಕ್ಷೆ ಮೇಲಿನ ತೆರಿಗೆ ವಿನಾಯಿತಿ
* ಡೀಸೆಲ್ ಮೇಲಿನ ಸೆಸ್ 16.75 ರೂನಿಂದ 16.65ಕ್ಕೆ ಇಳಿಕೆ. ಇದರಿಂದ ಡೀಸೆಲ್ ತುಸು ಅಗ್ಗವಾಗಲಿದೆ.
* ಮೋಟಾರು ವಾಹನ ತೆರಿಗೆಯಲ್ಲಿ ಶೇ. 50 ರಷ್ಟು ವಿನಾಯಿತಿ.
* ಕಬ್ಬಿನ ಮೇಲಿನ ತೆರಿಗೆ ಶೇ 35 ರಷ್ಟು ಇಳಿಕೆ.
* ಕಬ್ಬಿನ ಮೇಲಿನ ರಸ್ತೆ ಸುಂಕ ಶೇ 5 ರಷ್ಟು ಇಳಿಕೆ.












Click it and Unblock the Notifications