ದಾವಣಗೆರೆ : ಕಾಂಗ್ರೆಸ್ ಗೆ ಬೆಣ್ಣೆ, ಬಿಜೆಪಿಗೆ ಸುಣ್ಣ

Davanagere
ದಾವಣಗೆರೆ, ಮೇ 9 : ಟಿಕೆಟ್ ಹಂಚಿಕೆ ವಿಚಾರದಿಂದಲೇ ರಾಜ್ಯದ ಜನರ ಗಮನ ಸೆಳೆದಿದ್ದ ದಾವಣಗೆರೆ ಜಿಲ್ಲೆಯಲ್ಲಿ ಕಾಂಗ್ರೆಸ್ ತನ್ನ ಪ್ರಾಬಲ್ಯ ಮೆರೆದಿದೆ. ಜೆಡಿಎಸ್ ಪಕ್ಷಕ್ಕೆ ಒಂದು ಕ್ಷೇತ್ರವನ್ನು ಬಿಟ್ಟುಕೊಟ್ಟು, ಜಿಲ್ಲೆಯಲ್ಲಿ ಕಮಲದ ಹೂ ಅರಳದಂತೆ ಮಾಡುವಲ್ಲಿ ಕೈ ನಾಯಕರು ಯಶಸ್ವಿಯಾಗಿದ್ದಾರೆ.

ಜಿಲ್ಲೆಯ ನಾಲ್ವರು ಶಾಸಕರು ಬಿಜೆಪಿ ಬಿಟ್ಟು ಕೆಜೆಪಿ ಸೇರಿದ್ದರು. ಆದರೆ, ಯಾವ ಅಭ್ಯರ್ಥಿಗಳು ಗೆಲುವು ಸಾಧಿಸಿಲ್ಲ ಎಂಬುದು ಗಮನಾರ್ಹ. ಹರಪನಹಳ್ಳಿ ಕ್ಷೇತ್ರದಲ್ಲಿ ಸಜ್ಜನ ರಾಜಕಾರಣಿ ದಿ.ಎಂ.ಪಿ.ಪ್ರಕಾಶ್ ಪುತ್ರ ಎಂ.ಪಿ.ರವೀಂದ್ರ ಮಾಜಿ ಸಚಿವ ಜಿ.ಕರುಣಾಕರ ರೆಡ್ಡಿ ಅವರಿಗೆ ಸೋಲುಣಿಸಿದ್ದಾರೆ.

ದಾವಣಗೆರೆ ನಗರದಲ್ಲಿ ಕೆಪಿಸಿಸಿ ಖಜಾಂಚಿ ಶಾಮನೂರು ಶಿವಶಂಕರಪ್ಪ ಮತ್ತು ಅವರ ಪುತ್ರ ಎಸ್.ಎಸ್.ಮಲ್ಲಿಕಾರ್ಜುನ್ ದಕ್ಷಿಣ ಮತ್ತು ಉತ್ತರ ಕ್ಷೇತ್ರಗಳಲ್ಲಿ ಗೆಲುವು ಸಾಧಿಸಿದ್ದು, ಅಪ್ಪ-ಮಗ ಇಬ್ಬರು ವಿಧಾನಸಭೆ ಪ್ರವೇಶಿಸಲಿದ್ದಾರೆ. ಕೊನೆಯ ಹಂತದಲ್ಲಿ ಟಿಕೆಟ್ ಪಡೆದ ಶಾಮನೂರು ಪುತ್ರ ಗೆಲುವಿನ ನೆಗೆ ಬೀರಿದ್ದಾರೆ.

ಮಾಜಿ ಸಚಿವ ಎಂ.ಪಿ.ರೇಣುಕಾಚಾರ್ಯ, ಹರಿಹರ ಮಾಜಿ ಶಾಸಕ ಬಿ.ಪಿ.ಹರೀಶ್, ಜಗಳೂರು ಮಾಜಿ ಶಾಸಕ ಎಸ್.ವಿ.ರಾಮಚಂದ್ರ, ಚನ್ನಗಿರಿ ಮಾಜಿ ಶಾಸಕ ಮಾಡಾಳು ವಿರೂಪಾಕ್ಷಪ್ಪ ಮುಂತಾದ ನಾಯಕರು ಬಿಜೆಪಿ ತೊರೆದು ಕೆಜೆಪಿ ಸೇರಿದ್ದರು. ಆದರೆ, ಯಾವ ನಾಯಕರು ಚುನಾವಣೆಯಲ್ಲಿ ಜಯಗಳಿಸಿಲ್ಲ.

ಬಿಜೆಪಿ ಶಾಸಕರಾಗಿ ತೋಟಗಾರಿಕಾ ಸಚಿವರಾಗಿದ್ದ ದಾವಣಗೆರೆ ಉತ್ತರ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಎಸ್.ವಿ.ರವೀಂದ್ರನಾಥ್ ಅವರಿಗೆ ಎಸ್.ಎಸ್.ಮಲ್ಲಿಕಾರ್ಜುನ್ ಸೋಲಿನ ರುಚಿ ತೋರಿಸಿದ್ದಾರೆ. 20ಕ್ಕೂ ಹೆಚ್ಚು ಸ್ಪರ್ಧಿಗಳಿದ್ದ ಮಾಯಕೊಂಡ ಮೀಸಲು ಕ್ಷೇತ್ರ ಸಹ ಬಿಜೆಪಿ ಕೈ ತಪ್ಪಿದೆ.

ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲಿಯೂ ದಾವಣಗೆರೆ ಮಹಾನಗರ ಪಾಲಿಕೆಯಲ್ಲಿ ಒಂದು ಸ್ಥಾನವನ್ನು ಪಡೆಯಲು ಬಿಜೆಪಿ ವಿಫಲವಾಗಿತ್ತು. ಅದೇ ಫಲಿತಾಂಶ ವಿಧಾನಸಭೆ ಚುನಾವಣೆಯಲ್ಲಿಯೂ ಬಂದಿದ್ದು, ಜಿಲ್ಲೆಯಲ್ಲಿ ಕಮಲ ಅರಳಲು ವಿಫಲವಾಗಿದೆ.

ದಾವಣಗೆರೆ ಜಿಲ್ಲೆ ವಿಧಾನಸಭಾ ಕ್ಷೇತ್ರಗಳಲ್ಲಿ : ಗೆದ್ದವರು, ಸೋತವರ ವಿವರ ಹೀಗಿದೆ:

ಕ್ಷೇತ್ರ ಗೆದ್ದವರು ಪಕ್ಷ ಪಡೆದ ಮತಗಳು ಸೋತವರು ಪಕ್ಷ ಪಡೆದ ಮತಗಳು
ದಾವಣಗೆರೆ (ದಕ್ಷಿಣ) ಶಾಮನೂರು ಶಿವಶಂಕರಪ್ಪ
ಕಾಂಗ್ರೆಸ್
66,320 ಸೈಯದ್ ಸೈಫುಲ್ಲಾ
ಜೆಡಿಎಸ್
26,162
ದಾವಣಗೆರೆ (ಉತ್ತರ)
ಎಸ್.ಎಸ್.ಮಲ್ಲಿಕಾರ್ಜುನ್
ಕಾಂಗ್ರೆಸ್ 87,521 ಎಸ್.ವಿ.ರವೀಂದ್ರನಾಥ್
ಬಿಜೆಪಿ
30,639
ಜಗಳೂರು
ಎಚ್.ಪಿ.ರಾಜೇಶ್
ಕಾಂಗ್ರೆಸ್
77,805 ಎಸ್.ವಿ.ರಾಮಚಂದ್ರ
ಕೆಜೆಪಿ
40,915
ಹರಿಹರ
ಎಚ್.ಎಸ್.ಶಿವಶಂಕರ್
ಜೆಡಿಎಸ್
59,666 ಎಸ್.ರಾಮಪ್ಪ
ಕಾಂಗ್ರೆಸ್
40,613
ಮಾಯಕೊಂಡ (ಮೀಸಲು)
ಶಿವಮೂರ್ತಿ ನಾಯಕ್ ಕಾಂಗ್ರೆಸ್
32,435 ಪ್ರೊ.ಲಿಂಗಣ್ಣ
ಕೆಜೆಪಿ 31,741
ಚನ್ನಗಿರಿ ವಡ್ನಾಳ್ ರಾಜಣ್ಣ ಕಾಂಗ್ರೆಸ್ 53,355 ಮಾಡಾಳು ವಿರೂಪಾಕ್ಷಪ್ಪ ಕೆಜೆಪಿ 51,582
ಹೊನ್ನಾಳಿ ಡಿ.ಜಿ.ಶಾಂತನಗೌಡ ಕಾಂಗ್ರೆಸ್ 78,789 ಎಂ.ಪಿ.ರೇಣುಕಾಚಾರ್ಯ ಕೆಜೆಪಿ 60,051
ಹರಪನಹಳ್ಳಿ ಎಂ.ಪಿ.ರವೀಂದ್ರ ಕಾಂಗ್ರೆಸ್ 56,525 ಕರುಣಾಕರ ರೆಡ್ಡಿ ಬಿಜೆಪಿ 48,427
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+