ಕರ್ನಾಟಕ ಗುರು ಕೊಟ್ಟ exit poll ಫಲಿತಾಂಶ

ಬೆಂಗಳೂರು, ಮೇ. 5: ಕರ್ನಾಟಕ ವಿಧಾನಸಭೆಯ 224 ಸ್ಥಾನಗಳಿಗೆ ಭಾನುವಾರ(ಮೇ.5) ಮತದಾನ ಮುಕ್ತಾಯವಾಗಿದ್ದು, ಈಗ ಫಲಿತಾಂಶದ ಸರದಿ. ಈ ನಡುವೆ exit poll ಗಳನ್ನು ಹಲವು ಮಾಧ್ಯಮಗಳು ಹೊರ ಹಾಕಿದ್ದು, ಒನ್ ಇಂಡಿಯಾ ಸಂಸ್ಥೆಯ ತಂತ್ರಾಂಶದ ಮೂಲಕ ಫಲಿತಾಂಶ ಹೊರ ಬಿದ್ದಿದೆ.

ಬಿಜೆಪಿ, ಕಾಂಗ್ರೆಸ್, ಜೆಡಿಎಸ್, ಕೆಜೆಪಿ, ಬಿಎಸ್ ಆರ್ ಸೇರಿದಂತೆ ಹತ್ತು ಹಲವು ಪಕ್ಷಗಳ ಸಾವಿರಾರು ಅಭ್ಯರ್ಥಿಗಳು ಹಾಗೂ ಕರ್ನಾಟಕದ ರಾಜಕೀಯ ಭವಿಷ್ಯ ಮತಯಂತ್ರದಲ್ಲಿ ಭದ್ರವಾಗಿದೆ.

ಎಲೆಕ್ಟ್ರಾನಿಕ್ ಮಾಧ್ಯಮಗಳು ಮತದಾನಕ್ಕೂ 48 ಗಂಟೆಗಳಿಗೂ ಮುನ್ನ ಯಾವುದೇ ಸಮೀಕ್ಷೆ, ಫಲಿತಾಂಶ ಹೊರ ಹಾಕದಂತೆ ಚುನಾವಣಾ ಆಯೋಗ ನಿಯಮ ಜಾರಿಗೊಳಿಸಿತ್ತು. ಅದರಂತೆ, ಮತದಾನ ಪ್ರಕ್ರಿಯೆ ಮುಗಿದ ನಂತರ ಚುನವಣೋತ್ತರ ಸಮೀಕ್ಷೆ ಫಲಿತಾಂಶವನ್ನು ಮತದಾನ ಪ್ರಕ್ರಿಯೆ ಮುಗಿದ ನಂತರ ಪ್ರಕಟಿಸಲಾಗಿದೆ.

Karnataka Guru App Prediction

ಇದುವರೆವಿಗೂ ಪಬ್ಲಿಕ್ ಟಿವಿ, ಟಿವಿ 9 ಕನ್ನಡ, ಟೈಮ್ಸ್ ನೌ, ಸಿಎನ್ ಎನ್ ಐಬಿಎನ್ ಹಲವಾರು ಸಂಸ್ಥೆ ಹೊರ ಹಾಕಿರುವ exit poll ವಿವರ ಇಲ್ಲಿ ಓದಿದ್ದೀರಿ. ಈಗ ಒನ್ ಇಂಡಿಯಾ ಕನ್ನಡದ ಲೇಖನದಲ್ಲಿ ಕಾಣ ಸಿಗುವ 'ನೀವೇ ಆಗಿರಿ ಕರ್ನಾಟಕ ಗುರು' ಒಂದು ಫೇಸ್ ಬುಕ್ ಗಾಗಿ ಬರೆದ ತಂತ್ರಾಂಶ ಹೊರ ಹಾಕಿರುವ ಫಲಿತಾಂಶವನ್ನು ಇಲ್ಲಿ ಕಾಣಿರಿ..

ಕರ್ನಾಟಕ ಗುರು ಭವಿಷ್ಯ: ಏನಿದು ಕರ್ನಾಟಕ ಗುರು? | ಯಾರು ಮುಂದಿನ ಮುಖ್ಯಮಂತ್ರಿ? ಫಲಿತಾಂಶಕ್ಕಾಗಿ ಕ್ಲಿಕ್ಕಿಸಿ
* ಕಾಂಗ್ರೆಸ್: 102 ಸ್ಥಾನಗಳು [ಶೇ 45.72 ಜನರ ಮತ]
* ಬಿಜೆಪಿ : 66 [ಶೇ 29.29 ಜನರ ಮತ]
* ಜೆಡಿಎಸ್ : 30 [ಶೇ 13.5 ಜನರ ಮತ]
* ಕೆಜೆಪಿ : 23 [ಶೇ 10.42 ಜನರ ಮತ]
* ಲೋಕಸತ್ತಾ : 2 [ಶೇ 1.08 ಜನರ ಮತ]

ಈ ಅಪ್ಲಿಕೇಷನ್ ಮೂಲಕ ಮುಂದಿನ ವಿಧಾನಸಭೆ ಚುನಾವಣೆಯಲ್ಲಿ ಯಾವ ಪಕ್ಷ ಗೆಲ್ಲಲಿದೆ? ಆ ಪಕ್ಷದಿಂದ ಯಾರು ಮುಖ್ಯಮಂತ್ರಿ ಆಗಲು ಸಾಧ್ಯ? ಯಾವ ಪಕ್ಷ ಅಧಿಕಾರಕ್ಕೆ ಬರಲಿದೆ? ಎಂಬುದನ್ನು ತಿಳಿಯಬಹುದಾಗಿತ್ತು. ಅತ್ಯಂತ ಸರಳವಾಗಿ ಓದುಗರು ತಮ್ಮ ನೆಚ್ಚಿನ ಪಕ್ಷಕ್ಕೆ ಓಟ್ ಮಾಡಿ ನಿಮ್ಮ ಅಭಿಮತ ತಿಳಿಸಿದ್ದರು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+