ಕ್ಲಿಕ್ ಮಾಡಿ ಕರ್ನಾಟಕದ ಭವಿಷ್ಯ ತಿಳಿಯಿರಿ
'ನೀವೇ ಆಗಿರಿ ಕರ್ನಾಟಕ ಗುರು' ಎಂಬ ವಾಕ್ಯ ಒನ್ ಇಂಡಿಯಾ ಕನ್ನಡ ಪ್ರತಿ ಲೇಖನದಲ್ಲೂ ನಿಮಗೆ ಕಾಣ ಸಿಗುತ್ತದೆ. ಏನಿದೆ ಕರ್ನಾಟಕದ ಗುರು ನಾವು ಹೇಗೆ ಆಗಲು ಸಾಧ್ಯ? ಎಂದು ಹಲವು ಯೋಚಿಸಿ ಲಿಂಕ್ ಕ್ಲಿಕ್ ಮಾಡಿರುವುದೇ ಇಲ್ಲ. ಕೆಲವು ಕರ್ನಾಟಕ ಗುರು ಎಂದರೆ ಯಾರು ? ಯಾವುದಕ್ಕೆ ಇದನ್ನು ಬಳಸಿದ್ದೀರಾ? ಸಂದರ್ಭ ಸಮೇತ ವಿವರಿಸಿಸಿ ಎಂದು ನಮ್ಮ ಸಂಪಾದಕರಿಗೆ ಪತ್ರ ಬರೆದಿದ್ದಾರೆ. ಇದೇ ಹಿನ್ನೆಲೆಯಲ್ಲಿ ಕರ್ನಾಟಕ ಗುರು ಎಂಬ ಅಪ್ಲಿಕೇಷನ್ ಸಂಕ್ಷಿಪ್ತ ಪರಿಚಯ ಇಲ್ಲಿದೆ.
ಕರ್ನಾಟಕ ಗುರು ಎಂದರೆ ಮತದಾರರು ಅಂದರೆ ಇಲ್ಲಿ ಓದುಗರು. ಪ್ರಜೆಗಳೇ ಪ್ರಭುಗಳು ಎಂಬುದು ಮತದಾನದ ಸಂದರ್ಭದಲ್ಲಾದರೂ ನಿಜ ಎನಿಸುತ್ತದೆ. ಒನ್ ಇಂಡಿಯಾ ಕನ್ನಡದ ಲೇಖನದಲ್ಲಿ ಕಾಣ ಸಿಗುವ 'ನೀವೇ ಆಗಿರಿ ಕರ್ನಾಟಕ ಗುರು' ಒಂದು ಫೇಸ್ ಬುಕ್ ಗಾಗಿ ಬರೆದ ತಂತ್ರಾಂಶವಾಗಿದೆ.
ಈ ಅಪ್ಲಿಕೇಷನ್ ಮೂಲಕ ಮುಂದಿನ ವಿಧಾನಸಭೆ ಚುನಾವಣೆಯಲ್ಲಿ ಯಾವ ಪಕ್ಷ ಗೆಲ್ಲಲಿದೆ? ಆ ಪಕ್ಷದಿಂದ ಯಾರು ಮುಖ್ಯಮಂತ್ರಿ ಆಗಲು ಸಾಧ್ಯ? ಯಾವ ಪಕ್ಷ ಅಧಿಕಾರಕ್ಕೆ ಬರಲಿದೆ? ಎಂಬುದನ್ನು ತಿಳಿಯಬಹುದು.
ಅತ್ಯಂತ ಸರಳವಾಗಿ ನಿಮ್ಮ ನೆಚ್ಚಿನ ಪಕ್ಷಕ್ಕೆ ಓಟ್ ಮಾಡಿ ನಿಮ್ಮ ಅಭಿಮತ ತಿಳಿಸಬಹುದು ಕೊನೆಯಲ್ಲಿ ಒಟ್ಟಾರೆ ನೀವು ಓಟ್ ಮಾಡಿದ ಪಕ್ಷ, ಅಭ್ಯರ್ಥಿ ಈ ವರೆಗೂ ಸಿಕ್ಕಿರುವ ಮತಗಳನ್ನು ಕೂಡಾ ಕಾಣಬಹುದು.ಇನ್ನೇಕೆ ತಡ ಈಗಲೇ ಈ ಕೆಳಗಿನ ಸ್ಲೈಡ್ ನಲ್ಲಿ ವಿವರ ನೋಡಿ..ಕರ್ನಾಟಕ ಗುರು app ವೋಟಿಂಗ್ ಮುಗಿದಿದ್ದು, ಫೇಸ್ ಬುಕ್ ಪುಟ ತೆಗೆದು ಹಾಕಲಾಗಿದೆ..[ಗುರು ಕೊಟ್ಟ exit poll ಫಲಿತಾಂಶ]

ಫೇಸ್ ಬುಕ್ ಗೆ ಲಾಗ್ ಇನ್
ಮೊದಲಿಗೆ 'ನೀವೇ ಆಗಿರಿ ಕರ್ನಾಟಕದ ಗುರು' ಎಂಬುದನ್ನು ಕ್ಲಿಕ್ ಮಾಡಿ ಅಥವಾ ಬ್ರೌಸರ್ ನಲ್ಲಿ https://apps.facebook.com/karnatakaguru/ ಗೆ ಹೋಗಿ ಎಡಭಾಗದಲ್ಲಿರುವ ಪುಟ ತೆರೆದುಕೊಳ್ಳುತ್ತದೆ. ಈ ಅಪ್ಲಿಕೇಷನ್ (App) ಬಳಸಲು ನೀವು ಫೇಸ್ ಬುಕ್ ಗೆ ಲಾಗ್ ಇನ್ ಆಗುವುದು ಅವಶ್ಯ.

ವೋಟ್ ಮಾಡೋಡು ಹೇಗೆ
* ಪಕ್ಷಗಳಲ್ಲಿ ಬಿಜೆಪಿ, ಕಾಂಗ್ರೆಸ್, ಜೆಡಿಎಸ್, ಕೆಜೆಪಿ ಹಾಗೂ ಲೋಕಸತ್ತಾ ಇವುಗಳಲ್ಲಿ ಒಂದನ್ನು ಆಯ್ಕೆ ಮಾಡಿ.
* 224 ಸೀಟುಗಳಲ್ಲಿ ನೀವು ಆಯ್ಕೆ ಮಾಡಿಕೊಂಡ ಪಕ್ಷ ಎಷ್ಟು ಸೀಟು ಗೆಲ್ಲುತ್ತದೆ ಎಂದು ಸ್ಲೈಡ್ ಮಾಡಿ ಸೂಚಿಸಿ
* ನಿಮ್ಮ ಆಯ್ಕೆಯ ಪಕ್ಷದ ಮುಖ್ಯಮಂತ್ರಿ ಯಾರು ಎಂಬುದನ್ನು ಸೂಚಿಸಿ

ಆಯ್ಕೆ ಪೂರ್ಣ ಫಲಿತಾಂಶ ಪುಟ
ನಿಮ್ಮ ಮೂರು ಆಯ್ಕೆಗಳು ಆದ ಮೇಲೆ ನಿಮ್ಮ ಹೆಸರು ಹಾಗೂ ನೀವು ಅಸೆಂಬ್ಲಿ ಎಲೆಕ್ಷನ್ ನಲ್ಲಿ ಯಾವ ಪಕ್ಷ ಗೆಲುತ್ತೆ ಹಾಗೂ ಯಾರು ಮುಖ್ಯಮಂತ್ರಿ ಎಂಬುದರ ಫಲಿತಾಂಶ ತೋರಿಸುತ್ತದೆ. ನೀವು ಈ ಫಲಿತಾಂಶವನ್ನು ನಿಮ್ಮ ಸ್ನೇಹಿತರ ಜೊತೆ ಹಂಚಿಕೊಳ್ಳಬಹುದು.

ಇಷ್ಟೇನಾ? ಅರ್ಥ ಆಗಲಿಲ್ಲ
ಈಗ ಉದಾಹರಣೆಗೆ ನೀವು ಬಿಜೆಪಿ ಪಕ್ಷ ಗೆಲ್ಲುತ್ತದೆ ಎಂದು ರೆಡಿಯೋ ಬಟನ್ ಒತ್ತಿದ ಮೇಲೆ ಎಷ್ಟು ಸೀಟು ಗೆಲ್ಲಲು ಸಾಧ್ಯ ಎಂಬುದನ್ನು ಸ್ಲೈಡ್ ಮಾಡಿ ಅಂಕಿ ಸೂಚಿಸಿರುತ್ತೀರಾ ನಂತರ ಮುಖ್ಯಮಂತ್ರಿಗಳ ಆಯ್ಕೆ ಬಂದಾಗ ಜಗದೀಶ್ ಶೆಟ್ಟರ್ ಆಯ್ಕೆ ಮಾಡಿದ್ದರೆ ಎಡ ಬದಿಯ ಚಿತ್ರದಂತೆ ಕಾಣುತ್ತದೆ.

ಈ ತಂತ್ರಾಂಶದಲ್ಲಿ ಇನ್ನೇನಿದೆ?
ಫಲಿತಾಂಶ ಪುಟದಲ್ಲಿ ನಿಮ್ಮ ಆಯ್ಕೆ ಜೊತೆಗೆ ಇದುವರೆವಿಗೂ ಬಂದಿರುವ ಆಯ್ಕೆಗಳನ್ನು ಶೇಕಡಾವಾರು ಪ್ರಮಾಣದಲ್ಲಿ ತೋರಿಸಲಾಗುತ್ತದೆ.
ಉದಾಹರಣೆಗೆ ಎಡಬದಿ ಚಿತ್ರದಲ್ಲಿ ಶೇ 36.8ರಷ್ಟು ಜನ ಕಾಂಗ್ರೆಸ್ 110 ಸೀಟು ಗೆಲ್ಲುತ್ತದೆ ಎಂದಿದ್ದಾರೆ. ಶೇ 33.14ರಷ್ಟು ಜನ ಬಿಜೆಪಿ 106 ಸೀಟು ಗೆಲ್ಲುತ್ತದೆ ಎಂದಿದ್ದಾರೆ.ಅದೇ ರೀತಿ ಶೇ 25 ರಷ್ಟು ಜನ ಜಗದೀಶ್ ಶೆಟ್ಟರ್ ಮುಖ್ಯಮಂತ್ರಿಯಾಗುತ್ತಾರೆ ಎಂದಿದ್ದರೆ ಯಡಿಯೂರಪ್ಪ ಹಾಗೂ ಕುಮಾರಸ್ವಾಮಿ ಅವರ ಪರ ಶೇ 13ರಷ್ಟು ಮತಗಳು ಬಿದ್ದಿದೆ.

ಈಗಲೇ ಓಟ್ ಮಾಡಿ
ಫಲಿತಾಂಶ ಪುಟದಲ್ಲಿ ನಿಮ್ಮ ಆಯ್ಕೆಯ ಪಕ್ಷ, ಸೀಟುಗಳ ಸಂಖ್ಯೆ, ಮುಖ್ಯಮಂತ್ರಿ ಯಾರು? ಎಂಬುದರ ಜೊತೆಗೆ ಬಳಕೆದಾರರ ಪ್ರಮಾಣವನ್ನು ತೋರಿಸಲಾಗುತ್ತದೆ. ಒಟ್ಟಾರೆ ಎಷ್ಟು ಜನ ಕರ್ನಾಟಕ ಗುರು ಬಳಸಿದರು. ನಿಮ್ಮ ಸ್ನೇಹಿತರಲ್ಲಿ ಎಷ್ಟು ಜನ ವೋಟ್ ಮಾಡಿದರು ಎಂಬ ಕುತೂಹಲ ಅಂಶಗಳು ನಿಮಗೆ ಸಿಗಲಿದೆ.ಇನ್ನೇಕೆ ಯೋಚಿಸುತ್ತೀರಾ ನಿಮ್ಮ ಮತ ಹಾಕಿಬಿಡಿ.












Click it and Unblock the Notifications