ಕರ್ನಾಟಕ ಗುರು ಪ್ರಕಾರ ಸಿದ್ದು ಮುಂದಿನ ಸಿಎಂ

Who will become CM, Exit Poll Results
ಬೆಂಗಳೂರು, ಮೇ.6: ಮುಂದಿನ ಮುಖ್ಯಮಂತ್ರಿ ನೀವೇನಾ? ಎಂದು ಕೇಳಿದರೆ, ಗೊತ್ತಿಲ್ಲಪ್ಪ, ಹೈಕಮಾಂಡ್ ನಿರ್ಧಾರಕ್ಕೆ ನಾನು ಬದ್ಧ ಎಂದು ವರುಣಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ, ವಿಪಕ್ಷ ನಾಯಕ ಸಿದ್ದರಾಮಯ್ಯ ಹೇಳಿದ್ದಾರೆ. ಆದರೆ, ಒನ್ ಇಂಡಿಯಾ ಸಂಸ್ಥೆ ಕರ್ನಾಟಕ ಗುರು ತಂತ್ರಾಂಶದ ಪ್ರಕಾರ ಮತ ಹಾಕಿರುವ ಓದುಗರು ಸಿದ್ದರಾಮಯ್ಯ ಅವರನ್ನು ಮುಂದಿನ ಮುಖ್ಯಮಂತ್ರಿ ಎಂದು ಘೋಷಿಸಿದ್ದಾರೆ.

ಪಬ್ಲಿಕ್ ಟಿವಿ, ಟಿವಿ 9 ಕನ್ನಡ, ಟೈಮ್ಸ್ ನೌ, ಸಿಎನ್ ಎನ್ ಐಬಿಎನ್ ಹಲವಾರು ಸಂಸ್ಥೆ ಹೊರ ಹಾಕಿರುವ exit poll ವಿವರ ಇಲ್ಲಿ ಓದಿದ್ದೀರಿ. ಈಗ ಒನ್ ಇಂಡಿಯಾ ಕನ್ನಡದ ಲೇಖನದಲ್ಲಿ ಕಾಣ ಸಿಗುವ 'ನೀವೇ ಆಗಿರಿ ಕರ್ನಾಟಕ ಗುರು' ಒಂದು ಫೇಸ್ ಬುಕ್ ಗಾಗಿ ಬರೆದ ತಂತ್ರಾಂಶ ಹೊರ ಹಾಕಿದ ವಿವರದಂತೆ ಯಾವ ಪಕ್ಷ ಅಧಿಕಾರ ಚುಕ್ಕಾಣಿ ಹಿಡಿಯಲಿದೆ ಎಂಬ ವಿವರಗಳನ್ನು ಇಲ್ಲಿ ಓದಿದ್ದೀರಿ. ಈಗ ಮುಂದಿನ ಸಿಎಂ ಯಾರು ಎಂಬುದನ್ನು ತಿಳಿಯಿರಿ...

ಕರ್ನಾಟಕ ಮುಖ್ಯಮಂತ್ರಿ ಪಟ್ಟಕ್ಕಾಗಿ ಕಾಂಗ್ರೆಸ್ ನ ಸಿದ್ದರಾಮಯ್ಯ, ಎಸ್ ಎಂ ಕೃಷ್ಣ, ಜಿ ಪರಮೇಶ್ವರ್, ಬಿಜೆಪಿಯ ಜಗದೀಶ್ ಶೆಟ್ಟರ್,ಡಿವಿ ಸದಾನಂದ ಗೌಡ, ಅನಂತಕುಮಾರ್, ಕೆಎಸ್ ಈಶ್ವರಪ್ಪ, ಜೆಡಿಎಸ್ ನ ಎಚ್ ಡಿ ಕುಮಾರಸ್ವಾಮಿ, ಕೆಜೆಪಿಯ ಬಿಎಸ್ ಯಡಿಯೂರಪ್ಪ ಅಲ್ಲದೆ ಲೋಕಸತ್ತಾ ಅಭ್ಯರ್ಥಿ ಅಶ್ವಿನ್ ಮಹೇಶ್ ಅವರ ಹೆಸರನ್ನು ಸೇರಿಸಲಾಗಿತ್ತು. ಈ ಪೈಕಿ ಹೆಚ್ಚಿನ ಮತ ಪಡೆದು ಸಿದ್ದರಾಮಯ್ಯ ಅವರು ವಿಜಯಿಯಾಗಿದ್ದು, ಜಗದೀಶ್ ಶೆಟ್ಟರ್ ಹಾಗೂ ಎಚ್ ಡಿ ಕುಮಾರಸ್ವಾಮಿ ಕ್ರಮವಾಗಿ ಎರಡನೇ ಹಾಗೂ ಮೂರನೇ ಸ್ಥಾನ ಪಡೆದಿದ್ದಾರೆ.

ಕರ್ನಾಟಕ ಗುರು ನೀಡಿದ ಸಿಎಂ ಭವಿಷ್ಯ:
* ಸಿದ್ದರಾಮಯ್ಯ (ಕಾಂಗ್ರೆಸ್) [ಶೇ 28.26 ಜನರ ಮತ]
* ಜಗದೀಶ್ ಶೆಟ್ಟರ್ (ಬಿಜೆಪಿ) [ಶೇ 24.91 ಜನರ ಮತ]
* ಎಚ್ ಡಿ ಕುಮಾರಸ್ವಾಮಿ (ಜೆಡಿಎಸ್) [ಶೇ 12.86 ಜನರ ಮತ]
* ಬಿಎಸ್ ಯಡಿಯೂರಪ್ಪ (ಕೆಜೆಪಿ) [ಶೇ 10.24 ಜನರ ಮತ]
* ಎಸ್ ಎಂ ಕೃಷ್ಣ (ಕಾಂಗ್ರೆಸ್) [ಶೇ 9.54 ಜನರ ಮತ]
* ಜಿ ಪರಮೇಶ್ವರ್ ( ಕಾಂಗ್ರೆಸ್) [ಶೇ 6.04 ಜನರ ಮತ]
* ಡಿವಿ ಸದಾನಂದ ಗೌಡ (ಬಿಜೆಪಿ) [ಶೇ 4.68 ಜನರ ಮತ]
* ಅನಂತಕುಮಾರ್(ಬಿಜೆಪಿ) [ಶೇ 1.77 ಜನರ ಮತ]
* ಡಾ. ಅಶ್ವಿನ್ ಕುಮಾರ್ (ಲೋಕಸತ್ತಾ) [ಶೇ 1.11 ಜನರ ಮತ]
* ಕೆಎಸ್ ಈಶ್ವರಪ್ಪ (ಬಿಜೆಪಿ) [ಶೇ 0.59 ಜನರ ಮತ]

ಬಿಜೆಪಿ ಹಿರಿಯ ನಾಯಕ ಕೆಎಸ್ ಈಶ್ವರಪ್ಪ ಅವರನ್ನು ಸೋಲಿಸಿ ಲೋಕ ಸತ್ತಾ ಪಕ್ಷದ ರಾಜ್ಯಾಧ್ಯಕ್ಷ ಅಶ್ವಿನ್ ಮಹೇಶ್ ಅವರು ಹೆಚ್ಚಿನ ಮತ ಗಳಿಸಿದ್ದು ವಿಶೇಷವಾಗಿದೆ.

ಕರ್ನಾಟಕ ಗುರು ಅಪ್ಲಿಕೇಷನ್ ಮೂಲಕ ಮುಂದಿನ ವಿಧಾನಸಭೆ ಚುನಾವಣೆಯಲ್ಲಿ ಯಾವ ಪಕ್ಷ ಗೆಲ್ಲಲಿದೆ? ಆ ಪಕ್ಷದಿಂದ ಯಾರು ಮುಖ್ಯಮಂತ್ರಿ ಆಗಲು ಸಾಧ್ಯ? ಯಾವ ಪಕ್ಷ ಅಧಿಕಾರಕ್ಕೆ ಬರಲಿದೆ? ಎಂಬುದನ್ನು ತಿಳಿಯಬಹುದಾಗಿತ್ತು. ಅತ್ಯಂತ ಸರಳವಾಗಿ ಓದುಗರು ತಮ್ಮ ನೆಚ್ಚಿನ ಪಕ್ಷಕ್ಕೆ ಓಟ್ ಮಾಡಿ ನಿಮ್ಮ ಅಭಿಮತ ತಿಳಿಸಿದ್ದರು

ಎಲೆಕ್ಟ್ರಾನಿಕ್ ಮಾಧ್ಯಮಗಳು ಮತದಾನಕ್ಕೂ 48 ಗಂಟೆಗಳಿಗೂ ಮುನ್ನ ಯಾವುದೇ ಸಮೀಕ್ಷೆ, ಫಲಿತಾಂಶ ಹೊರ ಹಾಕದಂತೆ ಚುನಾವಣಾ ಆಯೋಗ ನಿಯಮ ಜಾರಿಗೊಳಿಸಿತ್ತು. ಅದರಂತೆ, ಮತದಾನ ಪ್ರಕ್ರಿಯೆ ಮುಗಿದ ನಂತರ ಚುನಾವಣೋತ್ತರ ಸಮೀಕ್ಷೆ ಫಲಿತಾಂಶವನ್ನು ಮತದಾನ ಪ್ರಕ್ರಿಯೆ ಮುಗಿದ ನಂತರ ಪ್ರಕಟಿಸಲಾಗಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+