ರಾಹುಲ್ ಗಾಂಧಿ NEET ಪ್ರತಿಭಟನೆಗೆ ನಟಿ ರಮ್ಯಾ ಬೆಂಬಲ: ಪ್ರಧಾನಿ ಮೋದಿ ಅಹಂಕಾರ ಬಿಡಬೇಕೆಂದ ಮಾಜಿ ಸಂಸದೆ

ನವದೆಹಲಿ: ನೀಟ್ (NEET) ಪರೀಕ್ಷಾ ಅಕ್ರಮ ಕುರಿತು ಸಂಸತ್‌ನಲ್ಲಿ ಚರ್ಚೆ ಅವಕಾಶ ನೀಡುವಂತೆ ಹಾಗೂ ಕೇಂದ್ರ ಸಚಿವರ ರಾಜೀನಾಮೆ ಆಗ್ರಹಿಸಿ ಪ್ರಧಾನಿ ನರೇಂದ್ರ ಮೋದಿಯವರ ಮನೆ ಮುಂದೆ ಕಾಂಗ್ರೆಸ್‌ ನಾಯಕರು ಪ್ರತಿಭಟನೆ ಹಮ್ಮಿಕೊಂಡಿದ್ದಾರೆ. ಕೇಂದ್ರ ಧೋರಣೆ ಹಾಗೂ ಕಾಂಗ್ರೆಸ್‌ನ ರಾಹುಲ್ ಗಾಂಧಿ ಬೆಂಬಲಿಸಿ ಮಾಜಿ ಸಂಸದೆ, ಸ್ಯಾಂಡಲ್‌ವುಡ್ ನಟಿ ರಮ್ಯಾ (ದಿವ್ಯ ಸ್ಪಂದನ) ಅವರು ಪೋಸ್ಟ್‌ವೊಂದನ್ನು ಹಂಚಿಕೊಂಡಿದ್ದಾರೆ. ನೀಟ್ ಪರೀಕ್ಷೆ ಪ್ರಶ್ನೆ ಪತ್ರಿಕೆ ಸೋರಿಕೆ, ವಿದ್ಯಾರ್ಥಿಗಳ ಪ್ರತಿಭಟನೆ ಕುರಿತು ಪ್ರತಿಕ್ರಿಯಿಸಿದ್ದಾರೆ.

ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ NEET ಪರೀಕ್ಷಾ ಕಾವು ಹೆಚ್ಚಾಗಿದೆ. ನೆನ್ನೆ ಸಿಜೆಪಿ ಪಾರ್ಟಿ ಮತ್ತು ವಿದ್ಯಾರ್ಥಿಗಳು ಸೇರಿ ನಡೆಸಿದ್ದ ಪ್ರತಿಭಟನೆ ಹಿಂಸಾತ್ಮಕ ಸ್ವರೂಪ ಪಡೆದ ಬೆನ್ನಲ್ಲೆ ಇಂದು ಪ್ರಧಾನಿ ನರೇಂದ್ರ ಮೋದಿ ನಿವಾಸದ ಮುಂದೆ ಲೋಕಸಭೆ ವಿಪಕ್ಷ ನಾಯಕ ರಾಹುಲ್ ಗಾಂಧಿ, ಕರ್ನಾಟಕ ಸಿಎಂ ಡಿಕೆ ಶಿವಕುಮಾರ್, ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಸೇರಿದಂತೆ ಕಾಂಗ್ರೆಸ್ಸಿಗರು ಪ್ರತಿಭಟನೆ ಆರಂಭಿಸಿದ್ದಾರೆ.

Actress Ramya backed Rahul Gandhi

ದೆಹಲಿಯಲ್ಲಿ ಪ್ರತಿಭಟನಾಕಾರರ ಮೇಲಿನ ಲಾಠಿ ಚಾರ್ಜ್ ಖಂಡಿಸಿ ಮತ್ತು ಸಂಸತ್ ಅಧಿವೇಶನದಲ್ಲಿ ನೀಟ್ ಅಕ್ರಮ ಕುರಿತು ಚರ್ಚೆ ಅವಕಾಶ ನೀಡುವಂತೆ ಕೋರಿದರು. ಇದಕ್ಕೆಲ್ಲ ಕಾರಣರಾದ ಗೃಹ ಸಚಿವ ಅಮಿತ್ ಶಾ ಹಾಗೂ ಕೇಂದ್ರ ಶಿಕ್ಷಣ ಮಂತ್ರಿ ಧರ್ಮೇಂದ್ರ ಪ್ರಧಾನ್ ಅವರ ರಾಜೀನಾಮೆಗೆ ಪ್ರತಿಭಟನಾನಿರತ ಕಾಂಗ್ರೆಸ್ ನಾಯಕರು ಒತ್ತಾಯಿಸಿದರು.

ಪ್ರಧಾನಿ ಅಹಂಕಾರ ಬದಿಗಿಡಬೇಕು: ನಟಿ ರಮ್ಯಾ ಪೋಸ್ಟ್

ನಟಿ ರಮ್ಯಾ ಅವರು, ನಾಯಕ ರಾಹುಲ್ ಗಾಂಧಿ ಅವರು ಹೇಳಿದ್ದು ಸರಿಯಾಗಿದೆ. ಸೋಮವಾರ ದೆಹಲಿಯಲ್ಲಿ ಅಮಾಯಕ ವಿದ್ಯಾರ್ಥಿಗಳ ಮೇಲೆ ಪೊಲೀಸರು ನಡೆಸಿದ ದೌರ್ಜನ್ಯದ ಹೊಣೆ ಹೊತ್ತು ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ಹಾಗೂ ನೀಟ್ ಪರೀಕ್ಷೆ ಪ್ರಶ್ನೆ ಪತ್ರಿಕೆ ಸೋರಿಕೆಗೆ ಕಾರಣವಾದ ಸಚಿವ ಧರ್ಮೇಂದ್ರ ಪ್ರಧಾನ್ ಅವರು ರಾಜೀನಾಮೆ ನೀಡಬೇಕೆಂದು ಒತ್ತಾಯಿಸಿದ್ದಾರೆ. ಈ ಸಂಬಂಧ ಇನ್‌ಸ್ಟಾಗ್ರಾಮ್‌ನಲ್ಲಿ ಅವರು ಪೋಸ್ಟ್ ಮಾಡಿದ್ದಾರೆ.

'ಊಟಕ್ಕೆ ಉಪ್ಪು ಹೇಗೋ ಹಾಗೆಯೇ ರಾಜ್ಯಕ್ಕೆ ನ್ಯಾಯ' ಬೇಕು ಎಂದು ಅವರು ಪೋಸ್ಟ್‌ನೊಂದಿಗೆ ಬರೆದುಕೊಂಡಿದ್ದಾರೆ. ಪ್ರಧಾನಿ ನರೇಂದ್ರ ಮೋದಿಯವರು ಮನಸ್ಸು ಮಾಡಿದ್ದರೆ ಇವರ ರಾಜೀನಾಮೆ ಕೆಲಸವನ್ನು ಕ್ಷಣದಲ್ಲಿಯೇ ಮಾಡಬಹುದು. ಆದರೆ ಅವರು ಅದನ್ನು ಏಕೆ ಮಾಡುತ್ತಿಲ್ಲ?. ಏಕೆಂದರೆ ಅವರಿಗೆ ಅವರಿಗೆ ದೊಡ್ಡ ಅಹಂಕಾರವಿದೆ. ಮೊದಲು ನಮ್ಮ ಅಹಂಕಾರ ತೊಡೆದು ಹಾಕುವಂತೆ ಹಿಂದೂ ಧರ್ಮದ ಬೋಧನೆಗಳಿಗೆ ತಕ್ಕಂತೆ ಇವರುಗಳು ಬದುಕುತ್ತಿಲ್ಲ ಎಂದು ಪ್ರಧಾನಿ ವಿರುದ್ಧ ಕಿಡಿ ಕಾರಿದ್ದಾರೆ.

ನೀಟ್ ಪರೀಕ್ಷೆ ಬರೆದಿದ್ದ ವಿದ್ಯಾರ್ಥಿಗಳು ಅವರ ಭವಿಷ್ಯ ಸುರಕ್ಷಿತವಾಗಿರಿಸಲು ಪ್ರಶ್ನಿಸುವುದು ಪ್ರತಿಭಟಿಸುವುದು ತಪ್ಪಲ್ಲ. ಅದು ಸಮರ್ಥನೀಯವಾಗಿದೆ. ಇಂದು ನಮ್ಮ ದೇಶದಲ್ಲಿನ ಅಸಮಾನತೆ ಕುರಿತು ಹೆಚ್ಚು ಆತಂಕವಿದೆ. ವಿದ್ಯಾರ್ಥಿಗಳಿಗೆ ಪ್ರತಿಭಟಿಸುವ ಎಲ್ಲ ಹಕ್ಕಿದ್ದು, ನಾನು ವಿದ್ಯಾರ್ಥಿಗಳ ಜೊತೆ ನಿಲ್ಲುತ್ತೇನೆ' ಎಂದು ರಮ್ಯಾ ತಿಳಿಸಿದ್ದಾರೆ.

ಅದಾನಿ ಮತ್ತು ಅಂಬಾನಿಗಳಿಗೆ ವಿನಾಯಿತಿ ನೀಡುವ ಪ್ರಧಾನಿ ಮೋದಿಯವರು ನಿಮ್ಮ ವಾದ ಮತ್ತು ಅಹಂಕಾರವನ್ನು ಬದಿಗಿಟ್ಟು ಸರಿಯಾಗಿ ಉತ್ತಮ ಕಾರ್ಯ ನಿರ್ವಹಣೆಗೆ ಮುಂದಾಗಬೇಕು. ಈಗಾಗಲೇ ನೀಟ್ ವಿದ್ಯಾರ್ಥಿಗಳು ಸಾಕಷ್ಟು ಸಂಕಷ್ಟ ಅನುಭವಿಸಿದ್ದಾರೆ' ಎಂದು ಪೋಸ್ಟ್‌ನಲ್ಲಿ ಬರೆದುಕೊಂಡಿದ್ದಾರೆ.

Actress Ramya backed Rahul Gandhi

ಸಂಸತ್ ಭವನಕ್ಕೆ ನುಗ್ಗಲು ಸಿಜೆಪಿ ಷಡ್ಯಂತ್ರ: ಎನ್.ರವಿಕುಮಾರ್

ನೀಟ್ ಪ್ರಶ್ನೆ ಪತ್ರಿಕೆ ಸೋರಿಕೆ ಹಿನ್ನೆಲೆ ಕೇಂದ್ರ ಸಚಿವ ಧಮೇರ್ಂದ್ರ ಪ್ರಧಾನ್ ರಾಜೀನಾಮೆಗೆ ಆಗ್ರಹಿಸುವುದಕ್ಕಿಂತ ದೆಹಲಿಯ ಸಂಸತ್ ಭವನಕ್ಕೆ ನುಗ್ಗುವ ಷಡ್ಯಂತ್ರ ಕಾಕ್ರೋಚ್ ಜನತಾ ಪಾರ್ಟಿ (ಸಿಜೆಪಿ) ನಡೆಸಿದೆ. ಪ್ರತಿಭಟನೆಯ ಹಿಂದೆ ಇಂಥದ್ದೊಂದು ಸಂಚು ಇತ್ತು ಎಂದು ವಿಧಾನ ಪರಿಷತ್ತಿನ ವಿಪಕ್ಷ ಮುಖ್ಯ ಸಚೇತಕ ಎನ್.ರವಿಕುಮಾರ್ ಅವರು ಬೆಂಗಳೂರಿನಲ್ಲಿ ಆರೋಪಿಸಿದ್ದಾರೆ.

ಮಲ್ಲೇಶ್ವರದ ಬಿಜೆಪಿ ರಾಜ್ಯ ಕಾರ್ಯಾಲಯ 'ಜಗನ್ನಾಥ ಭವನ'ದಲ್ಲಿ ಮಾತನಾಡಿದ ಅವರು, ದೆಹಲಿ ಪ್ರತಿಭಟನೆಯಲ್ಲಿ ತುಕ್ಡೆ ಗ್ಯಾಂಗ್‍ಗಳು ಪಾಕಿಸ್ತಾನ್ ಪರ ಘೋಷಣೆ, ಕಾಶ್ಮೀರಕ್ಕೆ ಸ್ವಾತಂತ್ರ್ಯ ಸಿಗಲಿ ಎಂದು ಘೋಷಣೆ ಕೂಗುವ ಅಗತ್ಯವೇನು?. ನಿನ್ನೆಯ ವಿದ್ಯಾರ್ಥಿಗಳಿಗಿಂತ ಹೆಚ್ಚಾಗಿ ವಿರೋಧ ಪಕ್ಷದ, ಎಡಪಂಥೀಯ ಅನೇಕ ಸಂಘಟನೆಗಳಿಗೆ ನಾಯಕರೇ ಇದ್ದರು. ವಿದ್ಯಾರ್ಥಿಗಳ ಪ್ರತಿಭಟನೆಯಲ್ಲಿ ರಾಜಕೀಯ ಬೇರೆತಿತ್ತು. ಪ್ರಜಾಪ್ರಭುತ್ವದಲ್ಲಿ ಪ್ರತಿಭಟನೆ ಮಾಡಲು ವಿರೋಧವಿಲ್ಲ. ಆದರೆ ಪೊಲೀಸರ ಮೇಲೆ ಹಲ್ಲೆ ಮಾಡುವ, ಹಿಂಸಾಚಾರ ನಡೆಸುವ ಹಕ್ಕು ಯಾರಿಗೂ ಇಲ್ಲ ಎಂದು ಆಕ್ರೋಶ ಹೊರ ಹಾಕಿದರು.

ವಿದ್ಯಾರ್ಥಿಗಳು ನ್ಯಾಯಯುತವಾಗಿ ಪ್ರತಿಭಟಿಸಬಹುದು. ದೆಹಲಿ ಪ್ರತಿಭಟನೆ ವೇಳೆ ಸಂಸತ್ತಿಗೆ ಎಸೆಯಲು ಕಲ್ಲುಗಳನ್ನು ತಂದಿದ್ದರು. ಇವು ಎಲ್ಲಿಂದ ಬಂದವು. 150 ಕ್ಕೂ ಹೆಚ್ಚು ಪೋಲಿಸರಿಗೆ ಗಾಯವಾಗಿ ಆಸ್ಪತ್ರೆ ಸೇರಿದ್ದಾರೆ. ಅವರನ್ನು ಅಟ್ಟಾಡಿಸಿಕೊಂಡು ಪ್ರತಿಭಟನಾಕಾರರು ಹೊಡೆದಿದ್ದಾರೆ. ಈ ರೀತಿ ವಿದ್ಯಾರ್ಥಿಗಳು ಮಾಡಲು ಸಾಧ್ಯವೇ ಎಂದು ಪ್ರಶ್ನಿಸಿದರು. ಎಡಪಂಥೀಯ ಸಂಘಟನೆಗಳು, ಜೆಎನ್‍ಯುದಲ್ಲಿ ಸಕ್ರಿಯವಾಗಿರುವ ಎಡಪಂಥೀಯ ಸಂಘಟನೆಗಳು ಇಂತಹ ಹಿಂಸಾಚಾರದ ಪ್ರತಿಭಟನೆಯ ಹಿಂದಿವೆ ಎಂದು ಆಕ್ಷೇಪಿಸಿದರು.

ನಟ ಪ್ರಕಾಶ್ ರಾಜ್ ಅವರೂ ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು. ಇವರೆಲ್ಲ ಮೋದಿಯವರಿಗೆ, ಭಾರತ ಮಾತೆಗೆ ಜೈ ಅಂದವರಲ್ಲ. ಪೊಲೀಸರು ಸರಿಯಾಗಿ ಕೆಲಸ ಮಾಡಿದ್ದರಿಂದ ಸಂಸತ್ತಿನ ಮೇಲಿನ ದಾಳಿ ನಡೆದಿಲ್ಲ ಎಂದರು. ಮೋದಿ ಹಾಗೂ ಸಚಿವ ಧಮೇರ್ಂದ್ರ ಪ್ರಧಾನ್ ಅವರು ವಿದ್ಯಾರ್ಥಿಗಳ ಅನುಕೂಲಕ್ಕಾಗಿ ಸಾಕಷ್ಟು ಕೆಲಸಗಳನ್ನು ಮಾಡಿದ್ದಾರೆ. ಇದೇ ಮೊದಲ ಬಾರಿಗೆ ಪ್ರಶ್ನೆ ಪತ್ರಿಕೆ ಸೋರಿಕೆ ಆಗಿಲ್ಲ. ಯುಪಿಎ ಕಾಲದಲ್ಲೂ ಸೋರಿಕೆ ಆದಾಗ ಪ್ರತಿಭಟನೆ ಆಗಿಲ್ಲ ಎಂದು ಪ್ರತಿಭಟನೆ, ಸೇರಿದಂತೆ ನೆನ್ನೆಯ ಬೆಳವಣಿಗೆ ಕುರಿತು ಅವರು ವಿವರಿಸಿದರು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+