ಈ 5 ದೇವಾಲಯಗಳಿಂದ ಪ್ರಸಾದವನ್ನು ಮನೆಗೆ ತರುವಂತಿಲ್ಲ: ಈ ಸಂಪ್ರದಾಯದ ಹಿಂದಿದೆ ಧಾರ್ಮಿಕ ಕಾರಣ

ಭಾರತದಲ್ಲಿ ದೇವಾಲಯಗಳನ್ನು ಕೇವಲ ಪೂಜಾ ಸ್ಥಳಗಳಾಗಿ ಮಾತ್ರ ನೋಡುವುದಿಲ್ಲ. ಇದನ್ನು ಆಧ್ಯಾತ್ಮಿಕತೆಯ ಕೇಂದ್ರಗಳಾಗಿಯೂ ಪರಿಗಣಿಸಲಾಗುತ್ತದೆ. ಪ್ರತಿಯೊಂದು ದೇವಾಲಯವು ವಿಶಿಷ್ಟ ಇತಿಹಾಸ, ಸಂಪ್ರದಾಯ ಮತ್ತು ಕಥೆಯನ್ನು ಹೊಂದಿದೆ. ಈ ದೇವಸ್ಥಾನಗಳ ವಿಶೇಷ ಸಂಪ್ರದಾಯಗಳೇ ಇವುಗಳನ್ನು ಭಿನ್ನವಾಗಿಸುತ್ತದೆ.

ಇನ್ನು ಭಾರತದ ದೇವಸ್ಥಾನದಲ್ಲಿ ನೀಡುವ ಪ್ರಸಾದಕ್ಕೆ ವಿಶೇಷ ಮಹತ್ವವಿದೆ. ಸಾಮಾನ್ಯವಾಗಿ, ನಾವು ದೇವಸ್ಥಾನ ಅಥವಾ ತೀರ್ಥಯಾತ್ರೆಯ ಸ್ಥಳಕ್ಕೆ ಭೇಟಿ ನೀಡಿದಾಗ, ಪ್ರಸಾದವನ್ನು ಎಲ್ಲರಿಗೂ ಹಂಚಲಾಗುತ್ತದೆ. ಹೀಗಾಗಿ ಕುಟುಂಬದಲ್ಲಿ ಅಥವಾ ಮನೆಯಲ್ಲಿ ಯಾರಾದರೂ ದೇವಸ್ಥಾನಗಳಿಗೆ ಹೋದಾಗ ನಮ್ಮ ಮನೆ ಮಂದಿಗೆ ಅಲ್ಲಿನ ಪ್ರಸಾದವನ್ನು ತರವುದು ವಾಡಿಕೆ. ಈ ಮೂಲಕ ದೇವರ ದರ್ಶನ ಸಾಧ್ಯವಾಗದಿದ್ದರೂ ಪ್ರಸಾದದ ಮೂಲಕ ದೇವರ ಕೃಪೆ ಸಿಗಲಿ ಎನ್ನುವ ಆಶಯ. ಆದರೆ, ನಮ್ಮಲ್ಲಿ ಕೆಲವೊಂದು ದೇವಾಲಯಗಳಿವೆ. ಈ ದೇವಸ್ಥಾನಗಳಲ್ಲಿ ನೀಡುವ ಪ್ರಸಾದವನ್ನು ಮನೆಗೆ ತೆಗೆದುಕೊಂಡು ಹೋಗಬಾರದು. ಇಲ್ಲಿನ ಪ್ರಸಾದವನ್ನು ಹೊರಗೆ ತೆಗೆದುಕೊಂಡು ಹೋಗುವುದನ್ನು ಸಂಪೂರ್ಣವಾಗಿ ನಿಷೇಧಿಸಲಾಗಿದೆ.

Devotees

ಈ ನಿರ್ದಿಷ್ಟ ದೇವಾಲಯಗಳಲ್ಲಿ ಪ್ರಸಾದವನ್ನು ಮನೆಗೆ ತೆಗೆದುಕೊಂಡು ಹೋಗುವುದನ್ನು ತಡೆಯುವ ಅಂಶ ಯಾವುದು? ಈ ವಿಶಿಷ್ಟ ಸಂಪ್ರದಾಯ ಏನು ಎನ್ನುವುದನ್ನು ನೋಡೋಣ.

ಮೆಹಂದಿಪುರ ಬಾಲಾಜಿ ದೇವಸ್ಥಾನ, ರಾಜಸ್ಥಾನ

ಮೆಹಂದಿಪುರ ಬಾಲಾಜಿಯನ್ನು ಭಾರತದ ಅತ್ಯಂತ ನಿಗೂಢ ದೇವಾಲಯಗಳಲ್ಲಿ ಒಂದೆಂದು ಪರಿಗಣಿಸಲಾಗುತ್ತದೆ. ಈ ದೇವಾಲಯಕ್ಕೆ ಪ್ರತಿದಿನ ಅಪಾರ ಸಂಖ್ಯೆಯ ಭಕ್ತರು ಆಗಮಿಸುತ್ತಾರೆ. ನಕಾರಾತ್ಮಕ ಶಕ್ತಿಯಿಂದ ಬಳಲುತ್ತಿರುವ ವ್ಯಕ್ತಿಗಳು ಈ ದೇವಾಲಯಕ್ಕೆ ಭೇಟಿ ನೀಡುತ್ತಾರೆ. ಆಂಜನೇಯನ ಆಶೀರ್ವಾದದಿಂದ ಅವರು ತಾವು ಅನುಭವಿಸುತ್ತಿರುವ ತೊಂದರೆಗಳಿಂದ ಮುಕ್ತರಾಗುತ್ತಾರೆ ಎಂದು ನಂಬಲಾಗಿದೆ.

ಈ ದೇವಾಲಯದಲ್ಲಿ ಹನುಮಂತನನ್ನು ಬಾಲಾಜಿ ರೂಪದಲ್ಲಿ ಪೂಜಿಸಲಾಗುತ್ತದೆ. ಇಲ್ಲಿಂದ ಪ್ರಸಾದವನ್ನು ಮನೆಗೆ ತರಬಾರದು ಎಂದು ಹೇಳಲಾಗುತ್ತದೆ.ಏಕೆಂದರೆ ಇಲ್ಲಿನ ಪ್ರಸಾದವನ್ನು ಮನೆಗೆ ತೆಗೆದುಕೊಂಡು ಹೋಗುವುದರಿಂದ ನಕಾರಾತ್ಮಕ ಶಕ್ತಿಯು ಕೂಡಾ ಆ ಪ್ರಸಾದದ ಜೊತೆ ಆಹ್ವಾನಿತವಾಗಬಹುದು ಎನ್ನುವ ಭಯದಿಂದ ಈ ರೀತಿ ಹೇಳಲಾಗುತ್ತದೆ. ಇಲ್ಲಿನ ಇನ್ನೊಂದು ವಿಶೇಷವೆಂದರೆ ಈ ದೇವಸ್ಥಾನದಲ್ಲಿ ನೀಡುವ ಪ್ರಸಾದವನ್ನು ದೇವಸ್ಥಾನದ ಆವರಣದಲ್ಲೇ ಸೇವಿಸಬೇಕು. ಈ ಪ್ರಸಾದ ದೇವಾಲಯದ ಆವರಣ ಕೂಡಾ ದಾಟುವಂತಿಲ್ಲ.

ಕಾಮಾಕ್ಯ ದೇವಸ್ಥಾನ, ಅಸ್ಸಾಂ

ಕಾಮಾಕ್ಯ ದೇವಾಲಯವು ಗುವಾಹಟಿ ಬಳಿಯ ನೀಲಾಚಲ ಬೆಟ್ಟದ ಮೇಲೆ ನೆಲೆಗೊಂಡಿದೆ. ಇದು ಭಾರತದ ಅತ್ಯಂತ ಮಹತ್ವದ ಶಕ್ತಿ ಪೀಠಗಳಲ್ಲಿ ಒಂದಾಗಿದೆ. ತಂತ್ರ ಪೂಜೆಗೆ ಹೆಸರುವಾಸಿಯಾದ ಈ ದೇವಾಲಯವು ದೇವಿಯ ಯೋನಿಯನ್ನು ಪೂಜಿಸುವ ಸ್ಥಳವಾಗಿದೆ.

ಇಲ್ಲಿ ಸ್ವೀಕರಿಸಿದ ಪ್ರಸಾದವನ್ನು ದೇವಾಲಯದ ಸಂಕೀರ್ಣದೊಳಗೆ ಸೇವಿಸಬೇಕು. ಎಂದಿಗೂ ಅದನ್ನು ಮನೆಗೆ ತೆಗೆದುಕೊಂಡು ಹೋಗಬಾರದು ಎನ್ನುವ ನಂಬಿಕೆಯಿದೆ. ಈ ಪ್ರಸಾದವನ್ನು ಅತ್ಯಂತ ಪವಿತ್ರವೆಂದು ಪರಿಗಣಿಸಲಾಗುತ್ತದೆ. ಇಲ್ಲಿನ ಪ್ರಸಾದದಲ್ಲಿ ವಿಶೇಷ ಶಕ್ತಿಯಿದೆ ಎಂದು ಹೇಳಲಾಗುತ್ತದೆ. ಆದ್ದರಿಂದ, ದೇವಾಲಯದ ಒಳಗೆಯೇ ಈ ಪ್ರಸಾದವನ್ನು ಸೇವಿಸಬೇಕು.

ಕೋಟಿಲಿಂಗೇಶ್ವರ ದೇವಸ್ಥಾನ ಕರ್ನಾಟಕ

ಕೋಟಿಲಿಂಗೇಶ್ವರ ದೇವಸ್ಥಾನವು ಲಕ್ಷಾಂತರ ಶಿವಲಿಂಗಗಳನ್ನು ಹೊಂದಿರುವ ದೇವಾಲಯ. ಇಲ್ಲಿನ ಶಿವಲಿಂಗಗಳ ಕಾರಣದಿಂದಲೇ ಇದು ಹೆಸರುವಾಸಿಯಾಗಿದೆ. ಇದು ಭಾರತದ ಅತ್ಯಂತ ವಿಶಿಷ್ಟ ಧಾರ್ಮಿಕ ತಾಣಗಳಲ್ಲಿ ಒಂದಾಗಿದೆ. ದೂರದೂರದ ಭಕ್ತರನ್ನು ಇದು ಆಕರ್ಷಿಸುತ್ತದೆ.

ಇಲ್ಲಿ ನೀಡಲಾಗುವ ಪ್ರಸಾದದ ಬಗ್ಗೆ ಹೇಳುವುದಾದರೆ, ಇಲ್ಲಿ ಅರ್ಪಿಸುವ ವಸ್ತುಗಳು ಶಿವನ ಭಕ್ತನಾದ ಚಂದೇಶ್ವರನಿಗೆ ಸಾಂಕೇತಿಕವಾಗಿ ಸಲ್ಲುತ್ತವೆ ಎಂದು ಹೇಳಲಾಗುತ್ತದೆ. ಈ ಕಾರಣಕ್ಕಾಗಿ, ಭಕ್ತರು ಪ್ರಸಾದವನ್ನು ಮನೆಗೆ ತೆಗೆದುಕೊಂಡು ಹೋಗಬಾರದು ಅಥವಾ ಭಕ್ತರು ಸ್ವತಃ ಸೇವಿಸಲೂಬಾರದು ಎನ್ನುವುದು ಪದ್ದತಿ.

ಕಾಲ ಭೈರವ ದೇವಾಲಯ, ಮಧ್ಯಪ್ರದೇಶ

ಉಜ್ಜಯಿನಿಯಲ್ಲಿರುವ ಕಾಲ ಭೈರವ ದೇವಾಲಯವು ದೇಶದ ಅತ್ಯಂತ ಕುತೂಹಲಕಾರಿ ಧಾರ್ಮಿಕ ಸ್ಥಳಗಳಲ್ಲಿ ಒಂದಾಗಿದೆ. ಭಕ್ತರು ಇಲ್ಲಿ ದೇವರಿಗೆ ಮದ್ಯವನ್ನು ಅರ್ಪಿಸುತ್ತಾರೆ. ಆದರೆ, ಈ ನೈವೇದ್ಯವನ್ನು ಇತರ ದೇವಾಲಯಗಳಲ್ಲಿ ಕಂಡುಬರುವ ಸಾಂಪ್ರದಾಯಿಕ ಪ್ರಸಾದದಂತೆ ಭಕ್ತರು ಸೇವಿಸುವಂತಿಲ್ಲ. ಪರಿಣಾಮವಾಗಿ, ದೇವಾಲಯದ ಈ ಪ್ರಸಾದವನ್ನು ಮನೆಗೆ ತೆಗೆದುಕೊಂಡು ಹೋಗುವಂತೆಯೂ ಇಲ್ಲ.

ನೈನಾ ದೇವಿ ದೇವಸ್ಥಾನ, ಹಿಮಾಚಲ ಪ್ರದೇಶ

ಹಿಮಾಚಲ ಪ್ರದೇಶದ ಬಿಲಾಸ್‌ಪುರದಲ್ಲಿರುವ ನೈನಾ ದೇವಿ ದೇವಸ್ಥಾನದಿಂದಲೂ ಪ್ರಸಾದವನ್ನು ಮನೆಗೆ ತೆಗೆದುಕೊಂಡು ಹೋಗುವುದನ್ನು ನಿಷೇಧಿಸಲಾಗಿದೆ. ಶಿವಾಲಿಕ್ ಪರ್ವತ ಶ್ರೇಣಿಯಲ್ಲಿರುವ ಈ ದೇವಸ್ಥಾನವನ್ನು ಭಾರತದ ಶಕ್ತಿಪೀಠಗಳಲ್ಲಿ ಒಂದೆಂದು ಪರಿಗಣಿಸಲಾಗಿದೆ. ಇಲ್ಲಿ ಅರ್ಪಿಸುವ ಕಾಣಿಕೆಗಳನ್ನು, ನೈವೇದ್ಯವನ್ನು ಎಂದಿಗೂ ಮನೆಗೆ ತೆಗೆದುಕೊಂಡು ಹೋಗಬಾರದು ಎನ್ನುತ್ತದೆ ದೇವಸ್ಥಾನದ ಸ್ಥಳೀಯ ಪದ್ಧತಿ.

(ಬರಹ : ರಂಜಿತಾ ಆರ್.ಕೆ)

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+