E‌xit Poll : ಪಬ್ಲಿಕ್, ಟೈಮ್ಸ್ ನೌ, ಟಿವಿ 9 ರಿಪೋರ್ಟ್

Exit Poll Results : Karnataka Assembly Election 2013
ಬೆಂಗಳೂರು, ಮೇ. 5: ಕರ್ನಾಟಕ ವಿಧಾನಸಭೆಯ 223 ಸ್ಥಾನಕ್ಕಾಗಿ ಮೇ.5 ರಂದು ಮತದಾನ ಪ್ರಕ್ರಿಯೆ ಶಾಂತಿಯುತವಾಗಿ ಅಂತ್ಯ ಕಂಡಿದೆ. ಈಗ ಚುನಾವಣೋತ್ತರ ಸಮೀಕ್ಷೆ, ಫಲಿತಾಂಶದ ಕಾಲ.

ಭಾನುವಾರ ಬೆಳಗ್ಗೆ ಆರಂಭದ ಮತದಾನ ವೇಗವನ್ನು ಗಮನಿಸಿದರೆ ಶೇ.70ಕ್ಕಿಂತ ಹೆಚ್ಚು ಮತದಾನ ನಡೆಯುವ ನಿರೀಕ್ಷೆಗಳನ್ನು ಆಯೋಗ ಹೊಂದಿತ್ತು. ಆದರೆ, ಲಭ್ಯ ಮಾಹಿತಿ ಪ್ರಕಾರ ಶೇ 66.81ರಷ್ಟು ಮಾತ್ರ ಮತದಾನ ದಾಖಲಾಗಿದೆ.

ಕೊನೆ ಗಳಿಗೆಯಲ್ಲಿ ಮತದಾರರು ಕ್ಯೂನಲ್ಲಿ ಬಂದು ನಿಂತರೆ ರಾತ್ರಿ ಹತ್ತು ಗಂಟೆಯಾದರೂ ಮತದಾನ ಮಾಡುವ ಅವಕಾಶ ನೀಡಬೇಕಾಗುತ್ತದೆ. ಹೀಗಾಗಿ ಜಿಲ್ಲಾವರು ಹಾಗೂ ಸಂಪೂರ್ಣ ಮತದಾನ ಪ್ರಮಾಣದ ಹೆಚ್ಚಿನ ವಿವರಗಳಿಗೆ ನಿರೀಕ್ಷಿಸಿ. ಚುನಾವಣಾ ಆಯೋಗ ಅಧಿಕೃತವಾಗಿ ರಾತ್ರಿ 8.30ರ ವೇಳೆಗೆ ಮತದಾನ ಪ್ರಮಾಣವನ್ನು ಪ್ರಕಟಿಸಲಿದೆ.

ಬಿಜೆಪಿ, ಕಾಂಗ್ರೆಸ್, ಜೆಡಿಎಸ್, ಕೆಜೆಪಿ, ಬಿಎಸ್ ಆರ್ ಸೇರಿದಂತೆ ಹತ್ತು ಹಲವು ಪಕ್ಷಗಳ ಸಾವಿರಾರು ಅಭ್ಯರ್ಥಿಗಳು ಹಾಗೂ ಕರ್ನಾಟಕದ ರಾಜಕೀಯ ಭವಿಷ್ಯ ಮತಯಂತ್ರದಲ್ಲಿ ಭದ್ರವಾಗಿದೆ. ಈ ನಡುವೆ exit poll ಗಳನ್ನು ಹಲವು ಮಾಧ್ಯಮಗಳು ಹೊರ ಹಾಕಿದ್ದು, ಮಿಶ್ರ ಫಲಿತಾಂಶ ಕಂಡು ಬಂದಿದೆ.

ಎಲೆಕ್ಟ್ರಾನಿಕ್ ಮಾಧ್ಯಮಗಳು ಮತದಾನಕ್ಕೂ 48 ಗಂಟೆಗಳಿಗೂ ಮುನ್ನ ಯಾವುದೇ ಸಮೀಕ್ಷೆ, ಫಲಿತಾಂಶ ಹೊರ ಹಾಕದಂತೆ ಚುನಾವಣಾ ಆಯೋಗ ನಿಯಮ ಜಾರಿಗೊಳಿಸಿತ್ತು. ಅದರಂತೆ, ಮತದಾನ ಪ್ರಕ್ರಿಯೆ ಮುಗಿದ ನಂತರ ಚುನಾವಣೋತ್ತರ ಸಮೀಕ್ಷೆ ಫಲಿತಾಂಶವನ್ನು ಎಲ್ಲಾ ಮಾಧ್ಯಮಗಳು ಪ್ರಕಟಿಸಿದೆ.

ಸದ್ಯಕ್ಕೆ ಇಲ್ಲಿ ಪಬ್ಲಿಕ್ ಟಿವಿ, ಟಿವಿ 9 ಕನ್ನಡ, ಟೈಮ್ಸ್ ನೌ, ಸಿಎನ್ ಎನ್ ಐಬಿಎನ್ ಹಾಗೂ ಸೈಲಂಟ್ ಮೆಜಾರಿಟಿ ಸಂಸ್ಥೆ ಹೊರ ಹಾಕಿರುವ exit poll ವಿವರ ಇಂತಿದೆ: | ಕರ್ನಾಟಕ ಗುರು ಭವಿಷ್ಯ ನೋಡಿ

ಸಿ ವೋಟರ್:
* ಕಾಂಗ್ರೆಸ್ : 110-118
* ಬಿಜೆಪಿ : 51-59
* ಜೆಡಿಎಸ್: 31-37
* ಕೆಜೆಪಿ : 9-13
* ಇತರೆ :7-11
*****
ಸಮಯ ವಾಹಿನಿ :
* ಬಿಜೆಪಿ : 55
* ಕಾಂಗ್ರೆಸ್ : 95
* ಜೆಡಿಎಸ್ : 43
* ಕೆಜೆಪಿ : 20
* ಬಿಎಸ್ ಆರ್ : 47
* ಇತರೆ : 6
*****

ಸಿಎನ್ ಎನ್ ಐಬಿಎನ್:
* ಕಾಂಗ್ರೆಸ್ : 100-116
* ಬಿಜೆಪಿ : 43-53
* ಜೆಡಿಎಸ್ : 43-53
* ಕೆಜೆಪಿ + ಇತರೆ : 26
****
ಪಬ್ಲಿಕ್ ಟಿವಿ:
* ಕಾಂಗ್ರೆಸ್ : 119,
* ಬಿಜೆಪಿ : 39-49,
* ಜೆಡಿಎಸ್ : 34-44
* ಕೆಜೆಪಿ + ಇತರೆ : 14
****
ಟೈಮ್ಸ್ ನೌ ಟಿವಿ ವಾಹಿನಿ/ ಹೆಡ್ ಲೈನ್ಸ್ ಟುಡೇ ಪರಿಷ್ಕೃತ :
* ಕಾಂಗ್ರೆಸ್ : 132 / 114
* ಬಿಜೆಪಿ : 38/ 55
* ಜೆಡಿಎಸ್: 38/ 34
* ಕೆಜೆಪಿ / 11
* ಇತರೆ : 15/ 9
****
ಟಿವಿ 9 ಕನ್ನಡ ವಾಹಿನಿ :
* ಕಾಂಗ್ರೆಸ್ : 110-118
* ಬಿಜೆಪಿ : 51-59
* ಜೆಡಿಎಸ್: 31-37
* ಕೆಜೆಪಿ : 09-13
* ಇತರೆ : 07-11
****
ದಿ ಸೈಲೆಂಟ್ ಮೆಜಾರಿಟಿ. ಆರ್ಗ್.ಇನ್
* ಕಾಂಗ್ರೆಸ್ : 90
* ಬಿಜೆಪಿ : 40
* ಜೆಡಿಎಸ್: 60
* ಕೆಜೆಪಿ : 15
* ಇತರೆ : 15
* ಬಿಎಸ್ ಆರ್ : 03

ಇನ್ನಷ್ಟು ಇ ಮಾಧ್ಯಮ ಚುನಾವಣೋತ್ತರ ಫಲಿತಾಂಶಗಳನ್ನು ನಿರೀಕ್ಷಿಸಿ...

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+