ಮೋದಿ ಭಾಷಣದ ಎಫೆಕ್ಟ್: 25 ಸೀಟ್ ಖೋತಾ
ಉಡುಪಿ, ಏ 29: ನರೇಂದ್ರ ಮೋದಿ ಬೆಂಗಳೂರಿನಲ್ಲಿ ಬಂದು ಸಾರ್ವಜನಿಕ ಸಭೆ ನಡೆಸಿದರೆ ಅದರಿಂದ ರಾಜ್ಯ ಬಿಜೆಪಿ ಘಟಕ ತನಗೆ ಲಾಭ ಆಗುತ್ತೆ ಅಂದುಕೊಂಡಿದ್ದರೆ ಅವರಷ್ಟು ಮೂರ್ಖರು ಇನ್ನೊಬ್ಬರಿಲ್ಲ ಎಂದು ಕಾಂಗ್ರೆಸ್ ಮುಖಂಡ ಜನಾರ್ಧನ ಪೂಜಾರಿ ಲೇವಡಿ ಮಾಡಿದ್ದಾರೆ.
ಕಾಪು ವಿಧಾನಸಭಾ ಕ್ಷೇತ್ರದಲ್ಲಿ ಪಕ್ಷದ ಅಭ್ಯರ್ಥಿ ವಿನಯ್ ಕುಮಾರ್ ಸೊರಕೆ ಪರ ಚುನಾವಣಾ ಪ್ರಚಾರ ಸಭೆಯಲ್ಲಿ ಮಾತನಾಡುತ್ತಿದ್ದ ಪೂಜಾರಿ, ನರೇಂದ್ರ ಮೋದಿಯವರನ್ನು ಕರ್ನಾಟಕ್ಕೆ ಕರೆಸಿ ಬಿಜೆಪಿ ತಪ್ಪು ಮಾಡಿತು. ಇದರಿಂದ ಅನ್ಯಾಯವಾಗಿ ಬಿಜೆಪಿ 25 ಸೀಟನ್ನು ಕಳೆದುಕೊಳ್ಳಲಿದೆ ಎಂದು ಪೂಜಾರಿ ಭವಿಷ್ಯ ನುಡಿದಿದ್ದಾರೆ.
ರಾಜ್ಯದ ಮತದಾರರು ಬುದ್ದಿವಂತರಿದ್ದಾರೆ, ಮೋದಿ ಮಾತಿಗೆ ಮರುಳಾಗುವವರು ನಮ್ಮ ರಾಜ್ಯದವರಲ್ಲ. ಮೋದಿಯ ಚರಿತ್ರೆ ಇಡೀ ನಾಡಿಗೆ ಗೊತ್ತಿದೆ. ಇಂಥಹ ವ್ಯಕ್ತಿಯನ್ನು ಕರೆಸಿ ಬಿಜೆಪಿಯವರು ವೋಟು ಕೊಡಿ ಅಂತಾರಲ್ಲಾ ಬಿಜೆಪಿ ಬುದ್ದಿಗೆ ಏನಾಗಿದೆ ಎಂದು ಪೂಜಾರಿ ಪ್ರಶ್ನಿಸಿದ್ದಾರೆ.
ಭ್ರಷ್ಟಾಚಾರದಲ್ಲಿ ಕರ್ನಾಟಕ ಮೇರು ಸಾಧನೆ ಮಾಡಿದೆ. ಗುಜರಾತಿನಲ್ಲಿ ಮೋದಿ ಸರಕಾರ ಅಲ್ಪ ಸಂಖ್ಯಾತರನ್ನು ಮಟ್ಟ ಹಾಕುವ ಸಾಧನೆ ಮಾಡಿದೆ. ಇಂಥಹ ಪಕ್ಷಕ್ಕೆ ಮತ ನೀಡಿ ನಿಮ್ಮ ಅಮೂಲ್ಯವಾದ ಮತದ ಪಾವಿತ್ರ್ಯತೆಯನ್ನು ಹಾಳು ಮಾಡಬೇಡಿ ಎಂದು ಜನಾರ್ಧನ ಪೂಜಾರಿ ಮತದಾರರಲ್ಲಿ ಮನವಿ ಮಾಡಿದ್ದಾರೆ.
ಸೋನಿಯಾ ಗಾಂಧಿಯಲ್ಲಿ ಅನ್ನಪೂರ್ಣೇಶ್ವರಿಯನ್ನು ಕಂಡ ಪೂಜಾರಿ..

ಜನಾರ್ಧನ ಪೂಜಾರಿ ಹೇಳಿಕೆ
ಕಾಂಗ್ರೆಸ್ ತನ್ನ ಪ್ರಣಾಳಿಕೆಯಲ್ಲಿ ಬಡವರಿಗೆ ಒಂದು ರೂಪಾಯಿ ಅಕ್ಕಿ ಕೊಡುವುದಾಗಿ ಹೇಳಿದೆ. ಇದರಿಂದ ಬಡವರಿಗೆ ಮತ್ತು ಕೂಲಿ ಕಾರ್ಮಿಕರಿಗೆ ಒಳ್ಳೆದಾಗಲಿದೆ.

ಜನಾರ್ಧನ ಪೂಜಾರಿ ಹೇಳಿಕೆ
ಪ್ರಣಾಳಿಕೆಯಿಂದ ವೈಯಕ್ತಿಕವಾಗಿ ನನಗೆ ಬಹಳ ಸಂತೋಷವಾಗಿದೆ. ನಿಜವಾಗಲೂ ಸೋನಿಯಾ ಗಾಂಧಿ ಕಲಿಯುಗದ ಅನ್ನಪೂರ್ಣೇಶ್ವರಿ ಎಂದು ಪೂಜಾರಿ ಹೊಗಳಿದ್ದಾರೆ.

ಜನಾರ್ಧನ ಪೂಜಾರಿ ಹೇಳಿಕೆ
ಕರ್ನಾಟಕದಲ್ಲಿ ಕಾಂಗ್ರೆಸ್ ಮತ್ತೆ ಅಧಿಕಾರಕ್ಕೆ ಬರುವುದು ದೇವರು ಬರೆದಿಟ್ಟ ಶಾಸನ. ಇದನ್ನು ಸಹಿಸದ ಬಿಜೆಪಿ ಮುಖಂಡರು ಅಸಂಬದ್ದ ಹೇಳಿಕೆ ನೀಡುತ್ತಿದ್ದಾರೆ.

ಜನಾರ್ಧನ ಪೂಜಾರಿ ಹೇಳಿಕೆ
ಒಂದು ಕಡೆ ಮಾತೃದೇವೋ ಭವ ಎನ್ನುವ ಬಿಜೆಪಿ ಮತ್ತು ಸಂಘಪರಿವಾರದವರು ರೇವ್ ಪಾರ್ಟಿಗೆ ಅನುಮತಿ ನೀಡುತ್ತಾರೆ. ಬಿಜೆಪಿ ಶಾಸಕರು ಅಸೆಂಬ್ಲಿಯಲ್ಲಿ ಅಶ್ಲೀಲ ವಿಡಿಯೋ ನೋಡುತ್ತಾರೆ. ರಾಜ್ಯದ ಮರ್ಯಾದೆಯನ್ನು ಅಂತರಾಷ್ಟ್ರೀಯ ಮಟ್ಟದಲ್ಲಿ ಹರಾಜು ಹಾಕಿದ ಕೀರ್ತಿ ಬಿಜೆಪಿಗೆ ಸಲ್ಲಬೇಕು.

ಜನಾರ್ಧನ ಪೂಜಾರಿ ಹೇಳಿಕೆ
ಕಾಪು ಕ್ಷೇತ್ರದ ಜೆಡಿಎಸ್ ಅಭ್ಯರ್ಥಿ ವಸಂತ್ ಸಾಲ್ಯಾನ್ (ಜೆಡಿಎಸ್ ಅಭ್ಯರ್ಥಿ) ಮಹಾನ್ ವಂಚಕ. ಅವರಿಗೆ ಮೊದಲು ಕಾಂಗ್ರೆಸ್ ಟಿಕೆಟ್ ಕೊಡಿಸಿದ್ದು ನಾನೇ. ಈಗ ನನ್ನನ್ನೇ ಮರೆತಿದ್ದಾರೆ. ಭವಿಷ್ಯ ರೂಪಿಸಿದ ಪಕ್ಷವನ್ನು ಬಿಡುವುದೂ ಒಂದೇ ಹೆತ್ತ ತಾಯಿಗೆ ಮೋಸ ಮಾಡುವುದೂ ಒಂದೇ ಅನ್ನುವುದು ಪೂಜಾರಪ್ಪನವರ ಅಭಿಪ್ರಾಯ.












Click it and Unblock the Notifications