ಕುಮಾರಸ್ವಾಮಿಯತ್ತ ಸುಬ್ಬಯ್ಯ ಮುಜುಗರದ ಪ್ರಶ್ನೆ

tell-truth-on-radhika-ak-subbaiah-demand-hd-kumaraswamy
ಮಡಿಕೇರಿ, ಏ.27: ಜಾತ್ಯಾತೀತ ಜನತಾದಳ ಪಕ್ಷದ ರಾಜ್ಯಾಧ್ಯಕ್ಷ ಎಚ್ ಡಿ ಕುಮಾರಸ್ವಾಮಿ ಅವರು ಚುನಾವಣೆ ಸಂದರ್ಭದಲ್ಲಿ ತೀವ್ರ ಮುಜುಗರದ ಪ್ರಶ್ನೆ ಎದುರಿಸುವಂತಾಗಿದೆ. ವಿಧಾನ ಪರಿಷತ್ ಮಾಜಿ ಸದಸ್ಯ ಎಕೆ ಸುಬ್ಬಯ್ಯ ಅವರು ಕುಮಾರಸ್ವಾಮಿ ಅವರ ಖಾಸಗಿ ಬದುಕಿನತ್ತ ಈ ಪ್ರಶ್ನೆ ಎಸೆದಿದ್ದು ಇಡೀ ಲೋಕಕ್ಕೆ ಗೊತ್ತಿರುವ ವಿಷಯದ ಬಗ್ಗೆ ಸ್ಪಷ್ಟನೆ ನೀಡಿ ನೈತಿಕತೆ ಮೆರೆಯಿರಿ ಎಂದು ಸವಾಲು ಎಸೆದಿದ್ದಾರೆ. ಇದರಿಂದ ಕುಮಾರಸ್ವಾಮಿ ಇಕ್ಕಟ್ಟಿಗೆ ಸಿಲುಕಿರುವಂತಿದೆ.

ನೈತಿಕತೆ ಬಗ್ಗೆ ಮಾತನಾಡುವ ಎಚ್ ಡಿ ಕುಮಾರಸ್ವಾಮಿ ಅವರು ರಾಧಿಕಾ ಕುಮಾರಸ್ವಾಮಿ ಮತ್ತು ಆಕೆಯ ಮಗುವಿನ ಬಗ್ಗೆ ನಾಡಿನ ಜನತೆಗೆ ಸತ್ಯಾಂಶ ತಿಳಿಸಬೇಕು ಎಂದು ಹಿರಿಯ ನಾಯಕ ಎಕೆ ಸುಬ್ಬಯ್ಯ ಅವರು ಆಗ್ರಹಿಸಿದ್ದಾರೆ.

ರಾಧಿಕಾ ಕುಮಾರಸ್ವಾಮಿ ಯಾರು ಎಂದು ಎಚ್ಡಿಕೆ ಅವರು ಸ್ಪಷ್ಟವಾಗಿ ಹೇಳಬೇಕು. ವಿವಾಹವಾಗಿದ್ದಲ್ಲಿ 2ನೇ ಪತ್ನಿ ಎಂದು ಒಪ್ಪಿಕೊಳ್ಳಬೇಕು. ಕುಮಾರಸ್ವಾಮಿ ಅವರೇ ತಮ್ಮ ಪತಿ ರಾಧಿಕಾ ಹೇಳಿಕೊಂಡಿದ್ದಾರೆ. ಹೀಗಿರುವಾಗ ಕುಮಾರಸ್ವಾಮಿ ಅವರು ನಾಮಪತ್ರ ಸಲ್ಲಿಸುವಾಗ ರಾಧಿಕಾ ಕುಮಾರಸ್ವಾಮಿ ಅವರ ಆಸ್ತಿ ವಿವರವನ್ನೂ ಏಕೆ ಪ್ರಕಟಿಸಲಿಲ್ಲ ಎಂದು ಹಿರಿಯ ನ್ಯಾಯವಾದಿಯೂ ಆದ ಎಕೆ ಸುಬ್ಬಯ್ಯ ಅವರು ಕುಮಾರಸ್ವಾಮಿಯವರನ್ನು ಪ್ರಶ್ನಿಸಿದ್ದಾರೆ.

ಸಾರ್ವಜನಿಕ ಜೀವನದಲ್ಲಿರುವ ನಾಯಕರಿಗೆ ವೈಯಕ್ತಿಕ ಹಾಗೂ ಬಹಿರಂಗ ಬದುಕು ಎಂಬುದು ಇರುವುದಿಲ್ಲ. ನಾಯಕರ ಜೀವನ ಪಾರದರ್ಶಕವಾಗಿರಬೇಕು ಎಂದೂ ಅವರು ಕುಮಾರಸ್ವಾಮಿಗೆ ಹಿತವಚನ ಹೇಳಿದ್ದಾರೆ. Over to Kumaraswamy...

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+