ರಾಧಿಕಾ ಮದ್ವೆ: ಕುಮಾರಸ್ವಾಮಿ ಫುಲ್ ಸೇಫ್

ದ್ವಿಪತ್ನಿತ್ವದ ಆರೋಪ ಎದುರಿಸುತ್ತಿರುವ ಕುಮಾರಸ್ವಾಮಿ ವಿರುದ್ಧ ಸಲ್ಲಿಸಲಾಗಿದ್ದ ಮೇಲ್ಮನವಿಯನ್ನು ನ್ಯಾಯಾಲಯ ವಜಾಗೊಳಿಸಿದೆ. ಇದೇ ವೇಳೆ ದ್ವಿಪತ್ನಿತ್ವ ಪ್ರಕರಣಗಳಿಗೆ ಸಂಭಂದಿಸಿದಂತೆ ಕೋರ್ಟು ಮಾದರಿ ತೀರ್ಪನ್ನೂ ನೀಡಿದೆ.
ಅದು ಹೇಗಿದೆ ಅಂದರೆ... 'ಬಹುಪತ್ನಿತ್ವ ಕಾನೂನುಬಾಹಿರವೇ ಸರಿ' ಎಂದು ಖುದ್ದು ರಾಜ್ಯದ ನಂಬರ್ 1 ನ್ಯಾಯಮೂರ್ತಿಗಳೇ ( CJ ವಿಕ್ರಮಜಿತ್ ಸೇನ್ ನೇತೃತ್ವದ ವಿಭಾಗೀಯ ಪೀಠ) ಹೇಳಿದ್ದರೂ ವಿವಾಹ ಬಂಧನಕ್ಕೊಳಗಾದ ಮಹಿಳೆಯರು ಅದರ ಬಗ್ಗೆ ತಕರಾರು ತೆಗೆಯದಿದ್ದರೆ ಕೋರ್ಟ್ ಕಟ್ಟಳೆಗಳು ಆ ವಿಷಯದಲ್ಲಿ ಮೂಗು ತೂರಿಸುವಂತಿಲ್ಲ. ಅಷ್ಟೇ ಅಲ್ಲ ಯಾರೋ ದಾರೀಲಿ ಹೋಗೋ ದಾಸಯ್ಯ ಕೋರ್ಟಿಗೆ ಬಂದು ಸ್ವಾಮಿ ಅವರು ಎರಡೆರಡು ಮದುವೆಯಾಗಿದ್ದಾರೆ. ಅದು ಕಾನೂನುಬಾಹಿರ ಅಲ್ವಾ ಅಂತ ಕೇಳುವ ಹಾಗಿಲ್ಲ. As long as ಆ ಮಹಿಳೆಯರ ಪೈಕಿ ಯಾರೊಬ್ಬರೂ ಅದರ ವಿರುದ್ಧ ಕೋರ್ಟ್ ಕಟಕಟೆ ಹತ್ತುವುದಿಲ್ಲ ಅಂದರೆ ಕೇಸ್ ಖಲಾಸ್ ಅಷ್ಟೇ.
ಕೋರ್ಟಿಗೆ ಸಮ್ಮತವೋ !?: ಇನ್ನು ಹಾಲಿ ಪ್ರಕರಣಕ್ಕೆ ಬಂದಾಗ ಕುಮಾರಸ್ವಾಮಿ ವಿರುದ್ಧ ಅವರ ಧರ್ಮಪತ್ನಿ ಅನಿತಾ ಕುಮಾರಸ್ವಾಮಿ ಅವರಾಗಲಿ ಅಥವಾ ನಟಿ ರಾಧಿಕಾ ಅವರಾಗಲಿ ಕೋರ್ಟ್ ಮೆಟ್ಟಿಲು ತುಳಿಯುವುದು ದೂರದ ಮಾತೇ ಸರಿ. ಹಾಗಿರುವಾಗ ಕುಮಾರಸ್ವಾಮಿ ಅವರು ಫುಲ್ ಸೇಫ್! ಈ ತೀರ್ಪು ಚರ್ಚಾರ್ಹವೋ, ವಿವಾದಾತ್ಮಕವೋ ಅಥವಾ ಬಹಪತ್ನಿತ್ವಕ್ಕೆ ಜೋತುಬೀಳುವ ಪುರುಷ ಪುಂಗವರಿಗೆ ಹಾಸಿಗೆ ಹಾಸಿಕೊಟ್ಟಷ್ಟೇ ಉಪಕಾರವೂ ಆದೀತು ಎಂಬುದನ್ನು ಅವರವರ ಭಾವಕ್ಕೆ ಬಿಟ್ಟ ವಿಷಯ. ಇಲ್ಲೊಂದು ಡೌಟು ಕಾಡುತ್ತಿದೆ. ಈಗೀಗ ಎಲ್ಲದರಲ್ಲೂ ಸಮಾನತೆ ಎದ್ದು ಕಾಣುತ್ತಿದೆ. ಅಂತಹುದರಲ್ಲಿ ಒಂದು ವೇಳೆ ಮಹಿಳೆಯೊಬ್ಬರು ಎರಡು ಮದುವೆಯಾದರೆ ಕೋರ್ಟಿಗೆ ಸಮ್ಮತವೋ !?
ಧನ್ಯೋಸ್ಮಿ: ಕೋರ್ಟು ಇಷ್ಟನ್ನೇ ಹೇಳಿ ಸುಮ್ಮನಾಗಿಲ್ಲ. 'ದ್ವಿಪತ್ನಿತ್ವ ಅನುಸರಿಸುತ್ತಿದ್ದಾರೆ, ಹಣ ವಸೂಲಿ ಮಾಡುತ್ತಿದ್ದಾರೆ, ಇನ್ನೊಂದು, ಮತ್ತೊಂದು ಹಗರಣದಲ್ಲಿ ಸಿಲುಕಿದ್ದಾರೆ ಎಂದು ಕಾರಣ ನೀಡಿ, ರಾಜಕಾರಣಿಗಳನ್ನು ಅವರ ಸ್ಥಾನದಿಂದ ವಜಾಗೊಳಿಸುತ್ತಾ ಹೋದರೆ ಸಂಸತ್ತಿನಲ್ಲಿ ಒಬ್ಬರೂ ಉಳಿಯುವುದಿಲ್ಲ' ಎಂದು ಚಟಾಕಿಯನ್ನೂ ನ್ಯಾಯಪೀಠ ಹಾರಿಸಿದೆ. ಧನ್ಯೋಸ್ಮಿ.
ಸುಮ್ಮನೆ ಹಾಗೇ ಇದನ್ನೂ ಓದಿಕೊಳ್ಳಿ: In cultures that practice marital monogamy, bigamy is the act of entering into a marriage with one person while still legally married to another. Bigamy is a crime in most western countries, and when it occurs in this context often neither the first nor second spouse is aware of the other. In countries that have bigamy laws, consent from a prior spouse makes no difference to the legality of the second marriage, which is usually considered void.
-
Karnataka Weather: ಕರ್ನಾಟಕದ ಈ 9 ಜಿಲ್ಲೆಗಳಲ್ಲಿ ಮಾರ್ಚ್ 21ರವರೆಗೆ ಮಳೆ ಸಾಧ್ಯತೆ: ಹವಾಮಾನ ಇಲಾಖೆ -
Bengaluru Rent: ಬೆಂಗಳೂರು ಬಾಡಿಗೆ ಮನೆ ಸಮಸ್ಯೆ: 10 ತಿಂಗಳ ಮುಂಗಡ ಹಣ,ಮಾಲೀಕರ ಕಿರಿಕಿರಿ; 2026ರ ಹೊಸ ಬಾಡಿಗೆ ನಿಯಮವೇನು -
ಸರಕು ಖಾಲಿಯಾಯ್ತಾ ಪ್ರೇಮ್, ಇಡೀ ದೇಶದ ಮುಂದೆ ಕನ್ನಡಿಗರು ತಲೆತಗ್ಗಿಸುವಂತೆ ಮಾಡಿದಿರಿ: ಸೆರಗ ಸರ್ಸೆ ಹಾಡಿಗೆ ವಿರೋಧ -
Horoscope March 16; ಈ ರಾಶಿಯವರಿಗೆ ಶುಭ ಸುದ್ದಿ ಬರಬಹುದು -
Anil Kumble: ನಟ ಶಾರುಖ್ ಖಾನ್ ಮಾಲೀಕತ್ವದ ಕೆಕೆಆರ್ ತಂಡ ದಾರಿತಪ್ಪಿದ ಬಗ್ಗೆ ಅನಿಲ್ ಕುಂಬ್ಳೆ ಮಹತ್ವದ ಮಾಹಿತಿ -
ಪಿಯು ಮೌಲ್ಯಮಾಪನ ಬಹಿಷ್ಕಾರಕ್ಕೆ ಮುಂದಾದ ಉಪನ್ಯಾಸಕರು: ಫಲಿತಾಂಶ ವಿಳಂಬದ ಆತಂಕದಲ್ಲಿ ದ್ವಿತೀಯ ಪಿಯು ವಿದ್ಯಾರ್ಥಿಗಳು -
Amala Paul: ಡೇಟಿಂಗ್ನಲ್ಲೇ ಗರ್ಭಿಣಿಯಾದೆ, ಆತುರದಲ್ಲಿ ಎರಡನೇ ಮದುವೆ ಆಯ್ತು: ಹೆಬ್ಬುಲಿ ನಟಿ ಅಮಲಾ ಪೌಲ್ -
ಹೆಣ್ಣುಬಾಕ ಕಾಮಪೀಠಿ ವೈರಮುತ್ತು ರಾಮಸ್ವಾಮಿ ಜ್ಞಾನಪೀಠಕ್ಕೆ ಕಳಂಕ: ಲೇಖಕ ಅರುಣ್ ಜೋಳದಕೂಡ್ಲಿಗಿ -
ಟೀಂ ಇಂಡಿಯಾಗೆ ನನ್ನದೊಂದು ಸಲಾಂ, ಐಪಿಎಲ್ ಬಗ್ಗೆ ಮನದಾಳದ ಮಾತು ಬಿಚ್ಚಿಟ್ಟ ಪಂಜಾಬ್ ಕಿಂಗ್ಸ್ ಕೋಚ್ ರಿಕಿ ಪಾಂಟಿಂಗ್ -
Horoscope March 17; ಈ ರಾಶಿಯವರ ಅದೃಷ್ಟ ಇಂದು ಬದಲಾಗಬಹುದು -
Byadagi Chilli: ಕರ್ನಾಟಕದ ಕೆಂಪು ಚಿನ್ನ ಬ್ಯಾಡಗಿ ಮೆಣಸಿನಕಾಯಿಗೆ ಹೊಸ ಸಂಕಷ್ಟ, ರೈತರು ಕಂಗಾಲು -
Piped Gas: ಬೆಂಗಳೂರಿಗರಿಗೆ ತಲುಪದ ಪೈಪ್ಡ್ ಗ್ಯಾಸ್: ಮಹತ್ವಾಕಾಂಕ್ಷಿ ಯೋಜನೆಗೆ ವಿಘ್ನಗಳ ಸರಮಾಲೆ












Click it and Unblock the Notifications