ನಟಿ ರಾಧಿಕಾ ತವರಿನಲ್ಲಿ ಕುಮಾರಸ್ವಾಮಿ ನಾಗಮಂಡಲ
ಮಂಗಳೂರು,
ಮಾ. 14: ಜೆಡಿಎಸ್ ನಾಯಕ ಎಚ್ ಡಿ ಕುಮಾರಸ್ವಾಮಿ ಮತ್ತು ನಟಿ ರಾಧಿಕಾ ದಂಪತಿ, ತಮ್ಮ ಪುತ್ರಿ ಶಮಿಕಾ ಜತೆಗೂಡಿ ನಾಗಮಂಡಲ ಸೇವೆಯನ್ನು ಸಾಂಗೋಪಾಂಗವಾಗಿ ನೆರವೇರಿಸಿದ್ದಾರೆ. ಎರಡು ವರ್ಷಗಳ ಹಿಂದೆ ಕುಮಾರಸ್ವಾಮಿ ಇದೇ ರೀತಿ ಇಲ್ಲಿ ನಡೆದ ನಾಗಮಂಡಲದಲ್ಲಿ ಭಾಗಿಯಾಗಿದ್ದನ್ನು ಇಲ್ಲಿ ಸ್ಮರಿಸಬಹುದು. id="toptextpromo">ನಟಿ,
ನಿರ್ಮಾಪಕಿ ರಾಧಿಕಾ ಕುಮಾರಸ್ವಾಮಿ ಅವರ ತವರೂರಾದ ಬಂಟ್ವಾಳ ತಾಲೂಕು ವಾಲ್ತಾಜೆಯ ಸಾಲೆತ್ತೂರಿನಲ್ಲಿ ದಂಪತಿಯು ಮಂಗಳವಾರ ರಾತ್ರಿ ತಮ್ಮ ಈ ಹರಕೆಯನ್ನು ತೀರಿಸಿದರು. 'ನಾಗಮಂಡಲ ವೈಭವೋತ್ಸವ' ಹೆಸರಿನಲ್ಲಿ ರಾಧಿಕಾರ ತಂದೆ ದೇವರಾಜ್ ಹಾಗೂ ಮಕ್ಕಳೂ ಇದರಲ್ಲಿ ಪಾಲ್ಗೊಂಡಿದ್ದರು. ಮಾಣಿಲ ಶ್ರೀಧಾಮದ ಶ್ರೀಮೋಹನದಾಸ ಪರಮಹಂಸ ಸ್ವಾಮೀಜಿ ಮತ್ತಿತರರು ಹಾಜರಿದ್ದರು. id='are-slot-1' class='oiad oi-axt oiadv'> id='top-searched-articles'>ಕಕ್ಕುಂಜೆ
ನಾಗಾನಂದ ವಾಸುದೇವ ಆಚಾರ್ಯ ಹಾಗೂ ಕೃಷ್ಣ ಪ್ರಸಾದ್ ವೈದ್ಯ ನೇತೃತ್ವದಲ್ಲಿ ರಾತ್ರಿ 9ರ ಬಳಿಕ ಹಾಲಿಟ್ಟು ಸೇವೆ, ನಾಗದರ್ಶನ ಆರಂಭವಾಯಿತು. ಉಡುಪಿ-ಚಿಕ್ಕಮಗಳೂರು ಲೋಕಸಭೆ ಉಪಚುನಾವಣೆ ಪ್ರಚಾರ ನಿಮಿತ್ತ ಕುಂದಾಪುರದಲ್ಲಿದ್ದ ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ ಅವರು ರಾತ್ರಿ 11 ಗಂಟೆಗೆ ನಾಗಮಂಡಲ ನಡೆಯುವ ಸ್ಥಳಕ್ಕೆ ತಲುಪಿದರು. ಮಾರ್ಚ್ 31ಕ್ಕೆ ಇಲ್ಲಿ ದೈವಗಳ ನೇಮೋತ್ಸವ ನಡೆಯಲಿದೆ.











Click it and Unblock the Notifications