ಚಿನ್ನದ ಬೆಲೆ ಕುಸಿಯುತ್ತಿದೆ; ಚಿನ್ನ ಚಿನ್ನ ಆಸೈ ಗರಿಗೆದರಿದೆ

ಬೆಂಗಳೂರು, ಏ.23: ಬಂಗಾರಕ್ಕೆ ಇದ್ದ ಚಿನ್ನದಂತಹ ಬೆಲೆ ವಾರ, ಹತ್ತು ದಿನದಿಂದ ಕುಸಿದುಬಿದ್ದಿತ್ತು. ಆದರೆ ಈಗ ಹೇಗಿದೆ? ತಾಜಾ ವರದಿಗಳ ಪ್ರಕಾರ ಮಂಗಳವಾರ ಮಧ್ಯಾಹ್ನ ಚಿನ್ನದ ಬೆಲೆ 10 ಗ್ರಾಂಗೆ 26,269 ರೂ. ಗೆ ಬಿದ್ದುಹೋಗಿದೆ. ಬೆಳ್ಳಿಯೂ ಸಹ ಬೆಲೆ ಕಳೆದುಕೊಳ್ಳುತ್ತಿದೆ.

ಕಳೆದ ವಾರ ಚಿನ್ನದ ಬೆಲೆ 26,000 ರೂ. ಗೆ ಕುಸಿದಿತ್ತು. ಆದರೆ ಪ್ರಸಕ್ತ ವಾರಾಂಭದಿಂದಲೇ ಚಿನ್ನದ ಬೆಲೆ ಮತ್ತೆ ಗರಿಗೆದರಿದೆ. ಬೆಲೆ ಕಡಿಮೆಯಾಯ್ತು ಎಂದು ಜನ ಅಂಗಡಿಗಳಿಗೆ ಮುಗಿಬಿದ್ದಿದ್ದು ಒಂದು ಕಾರಣವಾದರೆ ಕುಸಿತಕ್ಕೆ ಕಾರಣವಾಗಿದ್ದ ಅಂತಾರಾಷ್ಟ್ರೀಯ ಕಾರಣಗಳು ಸರಿಹೋಗಿವೆ.

ಚಿನ್ನ ಚಿನ್ನ ಆಸೈ ಗರಿಗೆದರಿದೆ : ನಿನ್ನೆ ಸೋಮವಾರ ದಿಢೀರನೆ 300 ರೂ. ಏರಿಕೆ ಗಳಿಸಿದ ಚಿನ್ನದ ಬೆಲೆ ಇಂದು ಮಂಗಳವಾರವೂ 100 ಏರಿಕೆಯೊಂದಿಗೆ ಮತ್ತೆ ದುಬಾರಿಯಾಗತೊಡಗಿತ್ತು. ಆದರೆ ಮಧ್ಯಾಹ್ನದ ವೇಳೆಗೆ ಮತ್ತೆ ಕುಸಿಯತೊಡಗಿದೆ. ಇದರಿಂದ ಈ ವಾರದಲ್ಲಿ ಚಿನ್ನ ಕೊಳ್ಳುವ ಚಿನ್ನ ಚಿನ್ನ ಆಸೈಗಳನ್ನು ಪೂರೈಸಿಕೊಳ್ಳಬಹುದು.

ಭಾರತದಲ್ಲಿ ಚಿನ್ನದ ಬೆಲೆಗೆ ಹೇತುವಾಗುವ ಲಂಡನ್ ಚಿನ್ನದ ಬೆಲೆ ಶೇ. 1.3ರಷ್ಟು ಏರಿಕೆಯಾಗಿದೆ. ಬೆಳ್ಳಿಯ ಬೆಲೆಯೂ ಶೇ. 0.5ರಷ್ಟು ಹೆಚ್ಚಾಗಿದೆ. ಸೋಮವಾರ ದೆಹಲಿಯಲ್ಲಿ 10 ಗ್ರಾಂ ಚಿನ್ನದ ಬೆಲೆ 27,400 ರೂ. ಗೆ ಆಗಿದೆ.
ಕೆಳಕಂಡ ನಗರಗಳಲ್ಲಿ ಸ್ಟಾಂಡರ್ಡ್ ಚಿನ್ನದ ಬೆಲೆ 10 ಗ್ರಾಂಗೆ, ಬೆಳ್ಳಿಯ ದರ 1 ಕೆಜಿಗೆ ಮಂಗಳವಾರ ಈ ಕೆಳಕಂಡಂತಿದೆ.

ಮುಂಬೈ:

ಮುಂಬೈ:

ಚಿನ್ನ: 26,840 (+445) ರೂ

ಬೆಳ್ಳಿ: 45,180 (+515) ರೂ.

ದೆಹಲಿ:

ದೆಹಲಿ:

ಚಿನ್ನ: 27,400 (+300) ರೂ
ಬೆಳ್ಳಿ: 45,800 (+500) ರೂ

ಚೆನ್ನೈ:

ಚೆನ್ನೈ:

ಚಿನ್ನ: 26,960 (+405) ರೂ
ಬೆಳ್ಳಿ: 44,850 (+300) ರೂ.

ಕೋಲ್ಕೊತ್ತಾ:

ಕೋಲ್ಕೊತ್ತಾ:

ಚಿನ್ನ: 27,850 (+465) ರೂ
ಬೆಳ್ಳಿ: 46,250 (-250) ರೂ.

ಬೆಂಗಳೂರು:

ಬೆಂಗಳೂರು:

ಚಿನ್ನ: 26,885 (+195) ರೂ
ಬೆಳ್ಳಿ: 45,800 (2,200) ರೂ

ಅಹಮದಾಬಾದ್:

ಅಹಮದಾಬಾದ್:

ಚಿನ್ನ: 26,270 ರೂ
ಬೆಳ್ಳಿ: 44,200 ರೂ

ಹೈದರಾಬಾದ್:

ಹೈದರಾಬಾದ್:

ಚಿನ್ನ: 27,800 ರೂ
ಬೆಳ್ಳಿ: 48,850 ರೂ

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+