ಚಿನ್ನದ ರೇಟು ಮತ್ತೆ ಬಿತ್ತು, 500 ರೂ ಚೀಪಾಗಿದೆ

ಇವತ್ತಿನ ಈ ಕ್ಷಣದ ರೇಟು ಎಷ್ಟಿದೆ ಗೊತ್ತಾ?: ನೀವು ಖರೀದಿಸಬಹುದುದಾದ 22 ಕ್ಯಾರೆಟ್ ಚಿನ್ನಾಭರಣದ ಬೆಲೆ 1 ಗ್ರಾಂ.ಗೆ 2,569 ರೂಪಾಯಿ ಇದೆ. ಕಳೆದ ವಾರ 2,828 ರೂ. ಇತ್ತು.
ಸುಮಾರು ಒಂದೆರಡು ತಿಂಗಳ ಹಿಂದೆ ಈ ದರ 3,100 ಇತ್ತು! ಅಂದರೆ ಅಂದಾಜು 500 ರೂಪಾಯಿ ಚೀಪಾಗಿದೆ ಚಿನ್ನ. ಚಿನ್ನದ ಬೆಲೆ ಇನ್ನೂ ಕಡಿಮೆಯಾಗಲಿದ್ದು, ಶೇ. 5ರಷ್ಟು ಕುಸಿಯಲಿದೆ ಎಂದು ಚಿನ್ನದ ಅಂಗಡಿ ಮಾಲೀಕರು ತಿಳಿಸಿದ್ದಾರೆ.
ಮದುವೆ ಆಗುವವರಿಗೆ ಚಿನ್ನದಂತಹ ಅವಕಾಶ: ಇನ್ನು 24 ಕ್ಯಾರೆಟ್ ಚಿನ್ನದ ಬೆಲೆ ಗ್ರಾಂಗೆ 2,839 ರೂ. ಇದೆ. ಅದೂ ಒಂದರೆಡು ತಿಂಗಳ ಹಿಂದೆ 3,300 ರೂ. ಇತ್ತು. ಹಾಗೆಯೇ ಬೆಳ್ಳಿ ಆಭರಣದ ಬೆಲೆಯೂ ಕುಸಿದಿದೆ. ಒಂದು ಕೆಜಿ ಬೆಳ್ಳಿ ಬೆಲೆ 48,000 ರೂ. ಆಗಿದೆ. ತಿಂಗಳ ಹಿಂದೆ ಇದರ ಬೆಲೆ 56,800 ರೂ. ನಷ್ಟಿತ್ತು. ಹಾಗಾಗಿ ಮದುವೆ ಆಗುವವರಿಗೆ ಇದು ಚಿನ್ನದಂತಹ ಅವಕಾಶ. ನೋಡಿ, ಒಂದು ಟ್ರೈ ಕೊಡಿ.
2011 ರಲ್ಲಿ ಗಗನಕ್ಕೇರಿದ್ದ ಚಿನ್ನದ ಬೆಲೆ ಈ ಎರಡು ವರ್ಷಗಳಲ್ಲಿ ಶೇ. 20ರಷ್ಟು ಬಿದ್ದಿದೆ. ಕಳೆದೊಂದು ವಾರದಲ್ಲಿ ಶೇ. 5ರಷ್ಟು ಕುಸಿದಿದೆ.












Click it and Unblock the Notifications