ವಾಯಿದಾ ಮಾರುಕಟ್ಟೆಯಲ್ಲಿ ಜಾರಿಬಿದ್ದ ಚಿನ್ನದ ಬೆಲೆ

ಇದೇ ವೇಳೆ ಜಾಗತಿಒಕ ಮಟ್ಟದಲ್ಲಿ ಹೀಗೆ ತೈಲ ಮತ್ತು ಚಿನ್ನದ ಬೆಲೆಗಳು ಕುಸಿದಿರುವುದರಿಂದ ದೇಶದ ಹಣಕಾಸು ಕೊರತೆ ಮತ್ತು ಪಾವತಿ ಸಮತೋಲನಗಳು ಸ್ವಲ್ಪ ಮಟ್ಟಿಗೆ ಹಿಡಿತಕ್ಕೆ ಸಿಕ್ಕಿವೆ.
ಚಿನ್ನದ ಮಾರಾಟ ಪ್ರಮಾಣ ವಿಪರೀತವಾಗಿ ವಾಯಿದಾ ಮಾರುಕಟ್ಟೆಯಲ್ಲಿ ಚಿನ್ನದ ಬೆಲೆ ಶನಿವಾರ ಬೆಳಗ್ಗೆ 10 ಗ್ರಾಂಗೆ 27,850ಗೆ ಬಂದು ನಿಂತಿದೆ. ಕಳೆದ 11 ತಿಂಗಳಲ್ಲಿ ದೇಶೀಯ ಮಾರುಕಟ್ಟೆಯಲ್ಲಿ ಇದು ದಾಖಲೆಯ ಕುಸಿತವಾಗಿದೆ.
ಇನ್ನು ಬೆಳ್ಳಿ ಬೆಲೆ 1 ಕೆಜಿಗೆ 48,770 ರೂ. ಗೆ ತಲುಪಿದೆ. ಈ ತೀವ್ರ ಕುಸಿತವೂ ಚಿಲ್ಲರೆ ಮಾರಾಟದ ಮೇಲೂ ಪ್ರಭಾವ ಬೀರಲಿದ್ದು, ಮುಂದಿನ ವಾರದಲ್ಲಿ ಚಿನ್ನ/ಬೆಳ್ಳಿ ಬೆಲೆಗಳು ಕಡಿಮೆಯಾಗುವ ನಿರೀಕ್ಷೆಯಿದೆ.
ಇನ್ನು ಯುರೋಪಿನಲ್ಲಿ ನಿರುದ್ಯೋಗ ಪ್ರಮಾಣ ಕಡಿಮೆಯಾಗಿರುವುದು ಜತೆಗೆ ಆರ್ಥಿಕ ಸಂಕಷ್ಟದಿಂದ ಪಾರಾಗಲು ಸಿಪ್ರಸ್ ಭಾರಿ ಪ್ರಮಾಣದಲ್ಲಿ ಚಿನ್ನವನ್ನು ಮಾರಾಟ ಮಾಡುತ್ತದೆ ಎಂಬ ಊಹೆಯೂ ಚಿನ್ನದ ದರ ಕುಸಿತಕ್ಕೆ ಹೇತುವಾಗಿದೆ. ಈ ಹಿನ್ನೆಲೆಯಲ್ಲಿ 2011ರಲ್ಲಿ ಗರಿಷ್ಠ ಮಟ್ಟದಲ್ಲಿ ಹಾರಾಡುತ್ತಿದ್ದ ಚಿನ್ನದ ದರ ಇದೀಗ ಶೇ. 20ರಷ್ಟು ಕುಸಿತ ಕಂಡಿದೆ.












Click it and Unblock the Notifications