ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಬ್ರಹ್ಮ ರಹಸ್ಯ ಬಯಲು : ಸೃಷ್ಟಿಗೆ ಕಾರಣವಾದ ದೇವಕಣ ಪತ್ತೆ

By Mahesh
|
Google Oneindia Kannada News

Scientists may have discovered God particle
ಜಿನಿವಾ/ ಲಂಡನ್, ಜು.4: ಜಿನಿವಾದ CERN ಸಂಶೋಧನಾ ಕೇಂದ್ರದ ವಿಜ್ಞಾನಿಗಳು ಜೀವ ಸೃಷ್ಟಿಗೆ ಕಾರಣವಾದ ಅಣುಕಣವನ್ನು ಶೋಧಿಸಿದ್ದಾರೆ. ದೇವಕಣ ಎಂದು ಕರೆಯಲ್ಪಡುವ subatomic ಕಣವನ್ನು ಹಿಗ್ಸ್ ಬೋಸನ್ ಎಂದು ಕರೆಯಲಾಗಿದೆ.

ಪ್ರಪಂಚವು ಈ ದೇವಕಣದಿಂದ ಸೃಷ್ಟಿಯಾಗಿದೆ ಎಂದು ಸ್ವಿಜರ್ಲೆಂಡ್ ಹಾಗೂ ಫ್ರಾನ್ಸಿನ ವಿಜ್ಞಾನಿಗಳು ಹೇಳಿದ್ದಾರೆ. ಇದರಿಂದ ಬ್ರಹ್ಮಾಂಡ ಹೇಗೆ ಸೃಷ್ಟಿಯಾಯಿತು ಎಂಬ ಮಿಲಿಯನ್ ಡಾಲರ್ ಪ್ರಶ್ನೆಗೆ ಉತ್ತರ ಸಿಕ್ಕಿದೆ.

ಫ್ರಾನ್ ಗಡಿಯಲ್ಲಿ 55 ಸಾವಿರ ಕೋಟಿ ರು ವೆಚ್ಚದಲ್ಲಿ ನಿರ್ಮಾಣಗೊಂಡಿರುವ ಬೃಹತ್ ಹ್ಯಾಡ್ರನ್ ಕೊಲೈಡರ್(Large Hadron Collider (LHC) ) ನಲ್ಲಿ ಅತ್ಯಧಿಕ ಶಕ್ತಿಯುಳ್ಳ ಪ್ರೋಟಾನ್ ಗಳನ್ನು ಡಿಕ್ಕಿ ಹೊಡೆಸಿ ದೇವಕಣದ ಇರುವಿಕೆಯ ಬಗ್ಗೆ ಖಾತ್ರಿ ಪಡಿಸಿಕೊಳ್ಳಲಾಗಿದೆ.

ಬಿಗ್ ಬ್ಯಾಂಗ್ ಮೂಲಕ ಶತಕೋಟಿ ವರ್ಷಗಳ ಹಿಂದೆ ಬ್ರಹ್ಮಾಂಡ ಸೃಷ್ಟಿಯಾಯಿತು ಎಂದು ತಿಳಿದಿದ್ದರೂ ಬಿಗ್ ಬ್ಯಾಂಗ್ ಪ್ರಕ್ರಿಯೆ ಬಗ್ಗೆ ಪ್ರತ್ಯಕ್ಷ ಸಾಕ್ಷಿ ಇರಲಿಲ್ಲ.

ಪ್ರಪಂಚದ ಹುಟ್ಟಿನಲ್ಲಿ ಹಿಗ್ಸ್ ಬೋಸನ್ ಎಂಬ ಧಾತು ನಿರ್ಣಾಯಕ ಪಾತ್ರ ವಹಿಸಿದೆ. ಹಿಗ್ಸ್ ಥಿಯರಿ ಮೂಲಕ ಪ್ರಪಂಚದ ಸೃಷ್ಟಿ, ನಕ್ಷತ್ರ ಮತ್ತು ಗ್ರಹಗಳ ಹುಟ್ಟು ಹಾಗೂ ಜೀವಿತಾವಧಿಯನ್ನು ನಾವು ತಿಳಿಯ ಬಹುದಾಗಿದೆ. ಒಂದು ಕಠಿಣವಾದ ಮತ್ತು ಬಲವಾದ ದೇವಕಣದಿಂದ ಬ್ರಹ್ಮಾಂಡವು ಸೃಷ್ಟಿಯಾಗಿದೆ ಎಂಬುದು ದೃಢಪಟ್ಟಿದೆ. ಇದನ್ನೇ ಹಿಗ್ಸ್ ಬೋಸನ್ ಥಿಯರಿ ಹೇಳುತ್ತದೆ ಎಂದು ಯುಕೆ ಸೈನ್ಸ್ ಅಂಡ್ ಟೆಕ್ನಾಲಜಿ ಫೆಸಿಲಿಟೀಸ್ ಕೌನ್ಸಿಲ್ ನ ಮುಖ್ಯಸ್ಥ ಜಾನ್ ವಮರ್ಸ್ಲೇ ಹೇಳಿದ್ದಾರೆ.

ಸ್ಕಾಟ್ಲೆಂಡ್ ನ ವಿಜ್ಞಾನಿ ಪೀಟರ್ ಹಿಗ್ಸ್ ಅವರು 1960ರ ದಶಕದಲ್ಲೇ ದೇವಕಣ ಇರುವಿಕೆ ಬಗ್ಗೆ ಖಚಿತ ಪಡಿಸಿದ್ದರು. ಆದರೆ, ಅದನ್ನು ದೃಢಪಡಿಸಲು ಸೂಕ್ತವಾದ ವೇದಿಕೆ ಇರಲಿಲ್ಲ. ಐರೋಪ್ಯ ಪರಮಾಣು ಸಂಶೋಧನಾ ಸಂಸ್ಥೆಯ ಖಭೌತ ವಿಜ್ಞಾನಿಗಳು Large Hadron Collider (LHC) ನಲ್ಲಿ ಬುಧವಾರ(ಜು.4) ಈ ಬಗ್ಗೆ ಪರೀಕ್ಷೆ ನಡೆಸಿ ದೃಢಪಡಿಸಿದ್ದಾರೆ.

English summary
Scientists at the CERN research centre near Geneva said today that they have found a new subatomic particle that may well be the Higgs boson.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X