ಮಹಿಳಾ ಎಸ್ಐ ಕಪಾಳಕ್ಕೆ ಹೊಡೆದ ಐಎಎಸ್ ಹೆಂಡತಿ

ಚಿನ್ನಸ್ವಾಮಿ ಮೈದಾನದಲ್ಲಿ ಕರ್ನಾಟಕ ಬುಲ್ದೊಜರ್ಸ್ ಮತ್ತು ಮುಂಬೈ ಹೀರೋಸ್ ನಡುವೆ ಪಂದ್ಯ ನಡೆಯುತ್ತಿತ್ತು. ಟಿ20 ಪಂದ್ಯ ನಾಚಿಸುವಂತೆ ನಲವತ್ತು ಸಾವಿರ ಪ್ರೇಕ್ಷಕರಿಂದ ತುಂಬಿ ತುಳುಕುತ್ತಿದ್ದ ಈ ಪಂದ್ಯ ನೋಡಲು ಪಂಕಜ್ ಪಾಂಡೆಯವರ ಪತ್ನಿ ತನ್ನ ಸ್ನೇಹಿತೆಯರೊಂದಿಗೆ ರಾತ್ರಿ 8.30ರ ಸುಮಾರಿಗೆ ಗೇಟ್ ನಂಬರ್ ಒಂದು ಪ್ರವೇಶಿಸಿದರು.
ಆಗ ಕರ್ತವ್ಯದಲ್ಲಿದ್ದ ಅಲಸೂರು ಗೇಟ್ ಠಾಣೆಯ ಮಹಿಳಾ ಇನ್ಸ್ಪೆಕ್ಟರ್ ಅವರನ್ನು ತಡೆದು ಪಾಸ್ ತೋರಿಸುವಂತೆ ಹೇಳಿದರು. ಕುಡಿದ ಅಮಲಿನಲ್ಲಿದ್ದ ಇವರು ಇದರಿಂದ ಕೆಂಡಾಮಂಡಲವಾಗಿ ನಾನು ಐಎಎಸ್ ಅಧಿಕಾರಿಯ ಪತ್ನಿ ನನ್ನಲ್ಲೇ ಪಾಸ್ ಕೇಳ್ತೀಯಾ ಎಂದು ಇನ್ಸ್ಪೆಕ್ಟರ್ ಮುಖಕ್ಕೆ ಎರಡು ಬೀಸಿದರು.
ಆಗ ಇವರ ವಿರುದ್ದ ತಿರುಗಿ ಬಿದ್ದ ಖಾಕಿ ಪಡೆ ಅವರನ್ನು ಸರಿಯಾಗಿ ತರಾಟೆಗೆ ತೆಗೆದುಕೊಂಡರು. ಪರಿಸ್ಥಿತಿ ವಿಕೋಪಕ್ಕೆ ಹೋಗುತ್ತಿರುವುದನ್ನು ಅರಿತ ಹಿರಿಯ ಪೋಲೀಸ್ ಅಧಿಕಾರಿಗಳು ಮತ್ತು ಮೈದಾನದ ಉಸ್ತುವಾರಿ ನೋಡಿಕೊಳ್ಳುತ್ತಿರುವವರು ಐಎಎಸ್ ಅಧಿಕಾರಿಯ ಪತ್ನಿಯನ್ನು ಅಲ್ಲಿಂದ ಹೊರ ಕಳುಹಿಸಿದರು.
ಐಎಎಸ್ ಅಧಿಕಾರಿಯ ಪತ್ನಿಯ ಮೇಲೆ ಕಬ್ಬನ್ ಪಾರ್ಕ್ ಠಾಣೆಯಲ್ಲಿ ದೂರು ದಾಖಲಾಗಿದ್ದು, ಎಫ್ಐಆರ್ ಹಾಕಲು ಖುದ್ದು ಪೊಲೀಸರು ಹಿಂದೆಮುಂದೆ ನೋಡುತ್ತಿದ್ದಾರೆ.












Click it and Unblock the Notifications