ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಐಎಎಸ್ ಪಂಕಜ್ ಪಾಂಡೆ ಪತ್ನಿ ಅನುಜಾ ನಾಪತ್ತೆ?

By Mahesh
|
Google Oneindia Kannada News

Pankaj Kumar Pandey IAS
ಬೆಂಗಳೂರು, ಜ.30: ಮುಂಬೈ ಹೀರೋಸ್ ಮೇಲೆ ಕಿಚ್ಚ ಸುದೀಪ್ ಅವರ ಕರ್ನಾಟಕ ಬುಲ್ಡೋಜರ್ಸ್ ತಂಡ ಭರ್ಜರಿ ಜಯ ಸಾಧಿಸಿದ ಬೆನ್ನಲ್ಲೇ ಭಾನುವಾರ ರಾತ್ರಿ ಇಡೀ ಕಬ್ಬನ್ ಪಾರ್ಕ್ ಪೊಲೀಸರು ನಿದ್ದೆಗೆಡಿಸಿದ ಪ್ರಕರಣ ಎಲ್ಲರಿಗೂ ತಿಳಿದಿದೆ. ಮಹಿಳಾ ಎಸ್ ಐ ಮೇಲೆ ಹಲ್ಲೆ ಮಾಡಿದವರ ಮಲೆ ನಿರ್ದಾಕ್ಷಿಣ್ಯ ಕ್ರಮ ಜರುಗಿಸಿ ಎಂದು ನಗರ ಪೊಲೀಸ್ ಆಯುಕ್ತ ಜ್ಯೋತಿಪ್ರಕಾಶ್ ಮಿರ್ಜಿ ಹೇಳಿದ್ದಾರೆ.

ಪಾಂಡೆ ಪತ್ನಿ ಎಲ್ಲಿ? : ಹಲಸೂರು ಗೇಟ್ ಠಾಣೆ ಮಹಿಳಾ ಇನ್ಸ್ ಪೆಕ್ಟರ್ ಅಂಜುಮಾಲ ಟಿ ನಾಯಕ್ ಅವರ ಮೇಲೆ ಹಲ್ಲೆ ಮಾಡಿದ್ದಾರೆ ಎಂಬುದು ನಿಜವಾದರೆ ಪ್ರಕರಣ ದಾಖಲಿಸಿ ವಿಚಾರಣೆ ಕೈಗೊಳ್ಳಿ ಎಂದು ಐಎಎಸ್ ಅಧಿಕಾರಿ ಪಾಂಡೆ ಹೇಳಿದ್ದಾರೆ. ಕೆಎಸ್ ಸಿಎ ಕ್ರೀಡಾಂಗಣದ ಸಿಸಿಟಿವಿ ಕ್ಲಿಪಿಂಗ್ ಪರಿಶೀಲಿಸುವುದಾಗಿ ಪಾಂಡೆ ತಿಳಿಸಿದ್ದಾರೆ.

ನಂತರ ಕಬ್ಬನ್ ಪಾರ್ಕ್ ಠಾಣೆಯಲ್ಲಿ ಹಲ್ಲೆ ಪ್ರಕರಣ ದಾಖಲಿಸಲಾಗಿದೆ. ಆದರೆ, ಎಫ್ ಐಆರ್ ಪ್ರತಿಯಲ್ಲಿ ಅನುಜಾ ಅವರ ಹೆಸರು ಮಾಯಾವಾಗಿದೆ. ಯಾವುದಕ್ಕೂ ಪ್ರಕರಣದ ಬಗ್ಗೆ ವಿಚಾರಣೆ ಮಾಡೋಣ ಎಂದು ತಾವರೆಕೆರೆಯಲ್ಲಿರುವ ಸೆಂಟ್ ಜಾನ್ ವುಡ್ ಅಪಾರ್ಟ್ ಮೆಂಟ್ ನ ಪಾಂಡೆ ನಿವಾಸಕ್ಕೆ ಎಸಿಪಿ ಕೌಶಿಕ್ ತೆರಳಿದ್ದಾರೆ. ಆದರೆ, ಆರೋಪಿ ಅನುಜಾ ಪಾಂಡೆ ಅವರು ನಾಪತ್ತೆಯಾಗಿರುವುದು ತಿಳಿದುಬಂದಿದೆ.

ಬೆಳಗ್ಗೆ ತಮ್ಮ ಸ್ವಂತ ಕಾರು ತೆಗೆದುಕೊಂದು ಹೊರಗೆ ಹೋದ ಅನುಜಾ ಮತ್ತೆ ವಾಪಾಸ್ಸಾಗಿಲ್ಲ ಎಂದು ಅಪಾರ್ಟ್ಮೆಂಟ್ ಸಿಬ್ಬಂದಿ ಹೇಳಿದ್ದಾರೆ.

ಐಎಎಸ್ ಅಧಿಕಾರಿಯಾಗಿರುವ ಪಂಕಜ್ ಕುಮಾರ್ ಪಾಂಡೆ ಈ ಹಿಂದೆ ಶಿವಮೊಗ್ಗ ಜಿಲ್ಲಾಧಿಕಾರಿಯಾಗಿದ್ದರು. ಡಿಸಿಯಾಗಿ ಒಳ್ಳೆ ಹೆಸರು ಕೂಡಾ ಗಳಿಸಿದ್ದಾರೆ. ಅದರೆ, ತಮ್ಮ ಪತ್ನಿ ಮಾಡಿದ ಅಚಾತುರ್ಯದಿಂದ ಪಾಂಡೆ ಮುಜುಗರಕ್ಕೀಡಾಗಿದ್ದಾರೆ.

ಪಾಂಡೆ ತಮ್ಮ ಪ್ರಭಾವ ಬೀರಿ ಪ್ರಕರಣ ಮುಚ್ಚಿ ಹಾಕುವ ಆಸಾಮಿ ಅಲ್ಲ ಎಂದು ಕಬ್ಬನ್ ಪಾರ್ಕ್ ಠಾಣೆ ಪೊಲೀಸರಿಗೂ ಗೊತ್ತು. ಪಾಂಡೆ ಈಗ ಹೆಸ್ಕಾಂ ಎಂಡಿ ಹುದ್ದೆಯಲ್ಲಿದ್ದಾರೆ. ಉತ್ತಮ ಆಡಳಿತಗಾರರಾಗಿರುವುದರಿಂದ ಸಹಜವಾಗಿ ಪೊಲೀಸರು ಒಂದು ಮಾತು ಸೌಜನ್ಯಕ್ಕೆ ಪಾಂಡೆಯನ್ನು ಕೇಳಿದ್ದಾರೆ. ಪಾಂಡೆ ಸಮ್ಮತಿಸಿದ ನಂತರ ಅನುಜಾ ಮಾಯವಾಗಿದ್ದಾರೆ ಎನ್ನಲಾಗಿದೆ. ಹೆಚ್ಚಿನ ವಿವರಗಳಿಗೆ ನಿರೀಕ್ಷಿಸಿ...

English summary
Cubbon Police have filed FIR against Ambuja wife of Pankaj Kumar Pandey IAS. Ambuja allegedly assualted lady inspector of Ulsoor gate women's police station Anjumala T Nayak during CCL match in Chinnaswamy stadium Bangalore on Jan.29.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X