ಸಖತ್ ಸೇಫ್ ಆಗಿಯೇ ಮೋದಿ ಅಣ್ಣಾ ಉಪವಾಸ ವ್ರತಾಚರಣೆ!

ಸ್ವಲ್ಪ ಅಹಮದಾಬಾದಿನತ್ತ ಬನ್ನಿ. ಮೋದಿ ತಮ್ಮ ಉಪವಾಸಕ್ಕೆ ಆಯ್ಕೆ ಮಾಡಿಕೊಂಡಿರುವುದು ಗುಜರಾತ್ ವಿವಿಯ ಆವರಣದಲ್ಲಿರುವ ಬೃಹತ್ ಕಟ್ಟಡವನ್ನು. 5000 ಜನ ಕೂರಬಹುದಾದ ಈ ಕಟ್ಟಡ ಸಂಪೂರ್ಣ ಹವಾನಿಯಂತ್ರಿತ ವ್ಯವಸ್ಥೆ ಹೊಂದಿದೆ.
ಇದರಿಂದ ಅವರು ಒಂದು ಚೂರೂ ಬೆವರು ಹರಿಸಬೇಕಿಲ್ಲ. ಇನ್ನು ಮೈಬಣ್ಣ ಕಂದುವುದೂ ಇಲ್ಲ. ಅಷ್ಟರಮಟ್ಟಿಗೆ ಸೇಫ್ ಆಗಿಯೇ ಮೋದಿ ಅಣ್ಣಾ ಉಪವಾಸ ಕುಳಿತುಕೊಳ್ಳಲಿದ್ದಾರೆ!
ಮೋದಿ ಉಪವಾಸ ಕೈಗೊಳ್ಳುವ ಸ್ಥಳಕ್ಕೆ ಅದಾಗಲೇ ಬಾಂಬ್ ನಿಷ್ಕ್ರಿಯ ವಾಹನವನ್ನು ತಂದಿರಿಸಲಾಗಿದೆ. ಗುಜರಾತ್ ಸಿಎಂಗೆ ಯಾವುದೇ ಅಪಾಯವಾಗದಂತೆ ತಡೆಯುವ ನಿಟ್ಟಿನಲ್ಲಿ ಈ ಕ್ರಮ ಕೈಗೊಳ್ಳಲಾಗಿದೆ. ಅಲ್ಲಿಗೆ ಮೋದಿ ಅಣ್ಣಾ ಉಪವಾಸ ಫುಲ್ ಸೇಫ್. ಅಂದಹಾಗೆ ನಾಳೆ ಅವರಿಗೆ ಹ್ಯಾಪಿ ಬರ್ತ್ ಡೆ!












Click it and Unblock the Notifications