ನರೇಂದ್ರ ದಾಮೋದರದಾಸ್ ಮೋದಿಗೆ ಸೆ.17 ಹುಟ್ಟುಹಬ್ಬ
ಅಹಮದಾಬಾದ್,
ಸೆ. 16: ನಾಳೆಯಿಂದ ಉಪವಾಸ ವ್ರತಾಚರಣೆ ಕೈಗೊಳ್ಳುತ್ತಿರುವ ಮೋದಿ (61) ಅವರ ಪೂರ್ಣ ಹೆಸರು ನರೇಂದ್ರ ದಾಮೋದರದಾಸ್ ಮೋದಿ! ಜನನ ಸೆಪ್ಟೆಂಬರ್ 17, 1950. ಮೆನಿ ಮೆನಿ ಹ್ಯಾಪಿ ರಿಟರ್ನ್ಸ್ ಆಫ್ ದಿ ಡೆ ಮೋದಿಜೀ! id="toptextpromo">ಮೆಹಸಾನಾ
ಜಿಲ್ಲೆಯ ವಾಡ್ ನಗರದಲ್ಲಿ ಮೋದಿಯ ಜನನ. ಈ ಜಿಲ್ಲೆ ಅಂದು ಬಾಂಬೆ ರಾಜ್ಯಕ್ಕೆ ಸೇರಿತ್ತು. ಚಿಕ್ಕಂದಿನಿಂದಲೇ ಪಕ್ಕಾ ಸ್ವಯಂ ಸೇವಕ. 60ರ ದಶಕದಲ್ಲಿ ಭಾರತ-ಪಾಕ್ ನಡುವೆ ಯುದ್ಧ ನಡೆಯುತ್ತಿದ್ದಾಗ ಯುವಕ ಮೋದಿ ತಣ್ಣಗೆ ಭಾರತೀಯ ಯೋಧರಿಗೆ ನೆರವಾಗುತ್ತಿದ್ದರು. ಅದರ ಇಂಚುಮುಂಚಿನಲ್ಲೇ ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ತಿಗೆ ಪದಾರ್ಪಣೆ. id='are-slot-1' class='oiad oi-axt oiadv'> id='top-searched-articles'>ಆಗಿನಿಂದಲೇ
ಭ್ರಷ್ಟಾಚಾರ ವಿರೋಧಿ ನವನಿರ್ಮಾಣ ಚಳವಳಿಯಲ್ಲಿ ಸಕ್ರಿಯರಾದರು. ಅದೇ ಸಂದರ್ಭದಲ್ಲಿ ಬಿಜೆಪಿ ಅವರನ್ನು ಬಿಗಿದಪ್ಪಿತು. ಗುಜರಾತ್ ವಿವಿಯಿಂದ ಪೊಲಿಟಿಕಲ್ ಸೈನ್ಸ್ ನಲ್ಲಿ ಸ್ನಾತಕೋತ್ತರ ಪದವಿ ಗಳಿಸಿದರು. 2001ರ ಅಕ್ಟೋಬರಿನಲ್ಲಿ ಮುಖ್ಯಮಂತ್ರಿ ಪಟ್ಟ ಅಲಂಕರಿಸಿದ ಮೋದಿ, ಜ್ಯೋತಿ ಬಸು ನಂತರ ದೀರ್ಘಾವಧಿಗೆ ರಾಜ್ಯವೊಂದರ ಮುಖ್ಯಮಂತ್ರಿಯಾಗಿರುವುದು ಮೋದಿ ಒಬ್ಬರೇ ಎನ್ನಬಹುದು.











Click it and Unblock the Notifications