ಬಿಜೆಪಿ ಪ್ರಧಾನಿ ಅಭ್ಯರ್ಥಿ ಮೋದಿಗೆ ಅಡ್ವಾಣಿ, ಜಯಲಲಿತಾ ಸಾಥ್ !
ಅಹಮದಾಬಾದ್,
ಸೆ. 16: ಅಮೆರಿಕ ಮೊನ್ನಯಷ್ಟೇ ಗುಜರಾತಿನತ್ತ ಹರಿಸಿರುವ ಪ್ರಶಂಸೆಯ ಹೊಳೆಯಲ್ಲಿ ಮೀಯಲು ಗುಜರಾತ್ ಮುಖ್ಯಮಂತ್ರಿ ನರೇಂದ್ರ ಮೋದಿ ಸಕಲ ಸಿದ್ಧತೆ ನಡೆಸಿದ್ದಾರೆ. ಹೊಸ ಹುರುಪಿನಿಂದ 2014ರ ಸಾರ್ವತ್ರಿಕ ಚುನಾವಣೆ ಮೇಲೆ ಕಣ್ಣಿಟ್ಟು, ಉಪವಾಸ ವ್ರತ ಕೈಗೊಳ್ಳಲಿದ್ದಾರೆ. id="toptextpromo">'ಬಿಜೆಪಿಯ
ಮುಂದಿನ ಪ್ರಧಾನಿ ಅಭ್ಯರ್ಥಿ ಮೋದಿ' ಎಂಬುದನ್ನು ಬಿಂಬಿಸಿಕೊಳ್ಳಲು ಈ ಉಪವಾಸ ಸತ್ಯಾಗ್ರಹ ಅವರಿಗೆ ನೆರವಾಘಲಿದೆ. ಹೀಗಾಗಿ ತಮ್ಮಉಪವಾಸ ವ್ರತಾಚರಣೆಯಲ್ಲಿ ಪಾಲ್ಗೊಳ್ಳುವಂತೆ ಹಲವು ಹಿರಿಯ ನಾಯಕರಿಗೆ ಮೋದಿ ಆಹ್ವಾನ ನೀಡಿದ್ದಾರೆ. id='are-slot-1' class='oiad oi-axt oiadv'> id='top-searched-articles'>ಈ
ಪೈಕಿ ಎಲ್ ಕೆ ಆಡ್ವಾಣಿ, ನಿತಿನ್ ಗಡ್ಕರಿ, ರಾಜ್‌ನಾಥ್‌ಸಿಂಗ್, ನಟಿ ಸ್ಮೃತಿ ಇರಾನಿ, ಸಂಗೀತ ನಿರ್ದೇಶಕ ಇಸ್ಮಾಯಿಲ್ ದರ್ಬಾರ್ ಹಾಜರಾಗುವ ಸಾಧ್ಯತೆ ಇದೆ. ಇವರ ಜೊತೆಗೆ ತಮಿಳುನಾಡು ಸಿಎಂ ಜಯಲಲಿತಾ, ಶಿವಸೇನಾ ನಾಯಕ ಉದ್ಧವ್ ಠಾಕ್ರೆ, ಎಂಎನ್‌ಎಸ್ ನಾಯಕ ರಾಜ್ ಠಾಕ್ರೆ ಸೇರಿದಂತೆ ಇತರೆ ಕೆಲ ಗಣ್ಯರೂ ಭಾಗಿಯಾಗುವ ಸಾಧ್ಯತೆ ಎಂದು ಮೂಲಗಳು ತಿಳಿಸಿವೆ.











Click it and Unblock the Notifications