ಅಸಾಂಜ ಹುಚ್ಚ ಎಂದ ಮಾಯಾಗೆ ನಿಜಕ್ಕೂ ಬುದ್ಧಿ ಇದೆಯಾ?

ಇದು ಮಾಯಾಳ ಮೌಢ್ಯತೆಯ ಪರಮಾವಧಿ ಎನ್ನಬಹುದಷ್ಟೆ. ಹೇಳಿ ಕೇಳಿ ವಿಕಿಲೀಕ್ಸ್ ಕೇಬಲ್ ವರದಿಗೆ ಅಮೆರಿಕ ಸರಕಾರ ತರಿಸಿಕೊಳ್ಳುವ ಗುಪ್ತ ವರದಿಯೇ ಆಧಾರ ಎಂಬುದು ಹೈಸ್ಕೂಲು, ಕಾಲೇಜು ಹುಡುಗರಿಗೂ ತಿಳಿದ ವಿಚಾರವೇ. ಅಂಥಾದ್ದರಲ್ಲಿ ಈಯಮ್ಮನಿಗೆ ಅಷ್ಟೂ ಗೊತ್ತಾಗಕಿಲ್ವಾ!?
ಪ್ರಪಂಚದ ಅಯಾ ಭಾಗಗಳಲ್ಲಿ ಬೀಡುಬಿಟ್ಟಿರುವ ಅಮೆರಿಕದ ರಾಜತಾಂತ್ರಿಕರು ತನ್ನ ಸರಕಾರಕ್ಕೆ ಒಪ್ಪಿಸುವ ರಹಸ್ಯ ವರದಿಯನ್ನು ಕದ್ದುಮುಚ್ಚಿ ಪ್ರಕಟಿಸಿದ್ದಷ್ಟೇ ಇಲ್ಲಿ ಅಸಾಂಜ್ ನ ಮಹಾಪರಾಧವಾಗುತ್ತದೆ.
ಆದರೆ ಒಳಗೊಳಗೆ ಮಾತನಾಡಿಕೊಳ್ಳುತ್ತಿದ್ದ ವಿಷಯಗಳು ಹೀಗೆ ಇಡೀ ಜಗತ್ತಿಗೆ ಗೊತ್ತಾಗುವಂತೆ ಮಾಡಿದ ಅಸಾಂಜ್ ನ ಧೈರ್ಯವನ್ನು ಜಗತ್ತಿನ ಮಂದಿ ಕೊಂಡಾಡಿದ್ದಾರೆ. ಅಷ್ಟೇ ಅಲ್ಲ ಅವನಿಗೆ ನೊಬೆಲ್ ಪ್ರಶಸ್ತಿಯನ್ನೂ ಕೊಡಬೇಕು ಎನ್ನುತ್ತಿದ್ದಾರೆ. ಅಂಥಾದ್ದರಲ್ಲಿ ಇದೇನಿದು ಮಾಯಾವತಿಯ ಪ್ರಲಾಪ!?












Click it and Unblock the Notifications