ಮಾಯಾವತಿ ಮೇಲೆ ಕೇಸು ಜಡಿಯಲಿರುವ ಒಬಾಮಾ

wikileaks-obama-to-file-case-on-mayawati
ಬೆಂಗಳೂರು, ಸೆ.7: ಏನಮ್ಮಿ ನಮ್ಮ ಹುಡುಗ ವಿಕಿಲೀಕ್ಸ್ ಸಂಸ್ಥಾಪಕ ಜೂಲಿಯನ್ ಅಸಾಂಜಪ್ಪನನ್ನು ಏನೇನೋ ಬೈದಿದ್ದೀಯಂತೆ. ಅವನಿಗೆ ಮೈಂಡ್ ಸರಿಯಿಲ್ಲ, ಅವನು ದಲಿತ ವಿರೋಧಿ ಎಂದೆಲ್ಲ ಅಂದಿರುವೆಯಂತೆ. ನಿನಗಿದು ನ್ಯಾಯವಾ? ಅಲ್ಲಮ್ಮಿ ವಿಕಿಲೀಕ್ಸು, ಅಸಾಂಜೆ ಅಂದರೆ ಯಾರು. ಅವ ಕದ್ದು ಬಸಿರು ಮಾಡಿದ್ದು ನಮ್ಮ ವರದಿಗಳನ್ನು ಆಧರಿಸಿಯೇ ಕಣಮ್ಮಿ. ಅಂಥಾದ್ದರಲ್ಲಿ ನೀನು ಹೀಗೆಲ್ಲ ಬೈಯಬಹುದಾ?

ಹೀಗೆಲ್ಲ ದೊಡ್ಡಣ್ಣ ಬರಾಕ್ ಒಬಾಮಾ ಉತ್ತರಪ್ರದೇಶದ ಮುಖ್ಯಮಂತ್ರಿ ಮಾಯಾವತಿಗೆ ಕ್ಲಾಸ್ ತೆಗೆದುಕೊಳ್ಳುವ, ತಲೆಕೆಟ್ಟರೆ ಕೇಸ್ ಜಡಿಯುವ ಮನಸ್ಥಿತಿಯಲ್ಲಿದ್ದಾರೆ ಎಂಬುದು ಶುದ್ಧ ಕುಹಕ. ಮುಂದೆ ಇನ್ನೂ ಇದೆ ಓದಿಕೊಳ್ಳಿ...

ಅಲ್ ಕಣಮ್ಮಿ. ಅಸಾಂಜನನ್ನು ದಲಿತ ವಿರೋಧಿ, ಮೆಂಟಲ್ಲು ಎಂದರೆ ಅದೆಲ್ಲ ನನಗೇ ಅನ್ವಯ ಆಗುತ್ತದೆ. ಇಂಡೈರೆಕ್ಟಾಗಿ ಅಮೆರಿಕದ ಅಧ್ಯಕ್ಷನನ್ನೇ ನೀನು ಮೆಂಟಲ್ಲು ಅಂತ ಕರೆದಂಗಾಗಲ್ವಾ. ನಾನೇನು ಮೆಂಟಲಾ! ನಾನೇನು ದಲಿತ ವಿರೋಧಿಯಾ? ಯಾವುದಕ್ಕೇ ಆಗಲಿ ಇರು ನಿನ್ನ ಮೇಲೆ ಒಂದು ಕೇಸ್ ಜಡೀತೀನಿ.

ಈ ಮಧ್ಯೆ, ಅಸಾಂಜಪ್ಪ ನಿನಗೆ ತಿರುಗೇಟು ಕೊಟ್ಟಿರುವುದು ಇನ್ನೂ ನಿನಗೆ ತಾಕಿಲ್ಲ ಅಂಥ ಕಾಣುತ್ತೆ. ಅವ ಏನ್ ಹೇಳಿದ್ದಾನೆ ಗೊತ್ತಾ? - ಇದು ನಾನು ಸಿದ್ಧಪಡಿಸಿದ ದಾಖಲೆಗಳು ಅಲ್ಲವೇ ಅಲ್ಲ. ಶ್ವೇತಭವನದ ಶ್ವೇತಪತ್ರಗಳು ಇವು! ಬೇಕಾದರೆ ಹಿಲರಿ ಕ್ಲಿಂಟನ್ನೋ, ಒಭಾಮಾನನ್ನೋ ಕೇಳಿಕೋ ಎಂದು ನಿನ್ನ ಮೇಲೆ ಗುಡುಗಿದ್ದಾನೆ.

ಇಂಥದ್ದನ್ನೆಲ್ಲ ಮೊಳಕೆಯಲ್ಲೇ ಚಿವುಟಬೇಕು. ಇಲ್ಲಾಂದ್ರೆ ಜಗತ್ತಿನಲ್ಲಿ ನಿನ್ನಂಥವರು ಮಾಯದಂತೆ ಹುಟ್ಟಿಕೊಳ್ಳುತ್ತಾರೆ. ಆಮೇಲೆ ನನ್ನನ್ನು ಬಾಯಿಗೆ ಬಂದಂತೆ ಏನೇನೋ ಹೆಸರುಗಳಿಂದ ಕರೀತಾರೆ.

ಅದ್ಯಾರೋ 'ಗರ್ಲ್ ಫ್ರೆಂಡ್' ಶೋಭಾನಂತೆ ಆಯಮ್ಮಾನೂ ಆಗ್ಲೇ ಸೆರಗು ಸಿಕ್ಕಿಸಿಕೊಂಡು ಒನಕೆ ಎತ್ತಿಕೊಂಡಿದ್ದಾಳಂತೆ... ಬರ್ತೀನಿ ಕಣಮ್ಮಿ, ಆ ಅಸಾಂಜಪ್ಪ ನಿಮ್ಮನ್ನೆಲ್ಲ ತಣ್ಣಗಿಟ್ಟಿರಲಿ ಎನ್ನುತ್ತಾ ಒಬಾಮಾ ಗಾಲಿಯಲ್ಲಿ ಲೀನವಾದರಂತೆ!

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+